ನೋವು ಗುಣಪಡಿಸುವ ಶಕ್ತಿ ಸಾಹಿತ್ಯಕ್ಕಿದೆ: ಭ್ರಮರಾಂಭ

| Published : Jan 24 2024, 02:04 AM IST

ಸಾರಾಂಶ

ನಾವಾಡುವ ಕನ್ನಡ ಭಾಷೆ, ಮಾತಿನ ಭಾಷೆಯಾಗದೆ, ಹೃದಯದ ಭಾಷೆಯಾಗಬೇಕು. ಮನಸ್ಸಿನ ಎಂತಹ ನೋವನ್ನು ಗುಣಮುಖ ಪಡಿಸಬಲ್ಲ ಶಕ್ತಿ ಸಾಹಿತ್ಯಕ್ಕಿದ್ದು, ಕನ್ನಡ ಸಾಹಿತ್ಯವಂತೂ ಬಹಳ ಸಮೃದ್ಧವಾಗಿದೆ ಎಂದು ಸರ್ಕಾರಿ ಕಾಲೇಜಿನ ಪ್ರಾಚಾರ್ಯರಾದ ಭ್ರಮರಂಭಾ ಹೇಳಿದರು.

ಹೊಸದುರ್ಗ: ನಾವಾಡುವ ಕನ್ನಡ ಭಾಷೆ, ಮಾತಿನ ಭಾಷೆಯಾಗದೆ, ಹೃದಯದ ಭಾಷೆಯಾಗಬೇಕು. ಮನಸ್ಸಿನ ಎಂತಹ ನೋವನ್ನು ಗುಣಮುಖ ಪಡಿಸಬಲ್ಲ ಶಕ್ತಿ ಸಾಹಿತ್ಯಕ್ಕಿದ್ದು, ಕನ್ನಡ ಸಾಹಿತ್ಯವಂತೂ ಬಹಳ ಸಮೃದ್ಧವಾಗಿದೆ ಎಂದು ಸರ್ಕಾರಿ ಕಾಲೇಜಿನ ಪ್ರಾಚಾರ್ಯರಾದ ಭ್ರಮರಂಭಾ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ದ್ವಿತೀಯ ವರ್ಷದ ಅಂತಿಮ ಪರೀಕ್ಷೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ 9ನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ ಟಿ.ಯಶೋಧ ಮತ್ತು ನೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿ ಮಂಜುನಾಥ್ ಇವರನ್ನು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ಕಾಲೇಜಿನ ಸ್ನಾತಕೋತರ ಕನ್ನಡ ವಿಭಾಗದ ವಿದ್ಯಾರ್ಥಿಗಳು ಒಳ್ಳೆಯ ಮಾದರಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ಕಾಲೇಜಿಗೆ ಒಳ್ಳೆಯ ಭವಿಷ್ಯವಿದೆ. ಕಾಲೇಜು ನ್ಯಾಕ್ ಗೆ ಒಳಪಡುತ್ತಿದೆ. ಅಭಿವೃದ್ಧಿಗೆ ಎಲ್ಲಾ ವಿದ್ಯಾರ್ಥಿಗಳ ಸಹಕಾರ ಬಹಳ ಅಗತ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಕುರಿತು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಹಾಯಕ ಪ್ರಾಧ್ಯಾಪಕರಾದ ಧನಂಜಯ್, ಸುಬ್ರಮಣ್ಯ ಶೆಟ್ಟಿ, ಶೈಲೇಂದ್ರ, ಗ್ರಂಥಪಾಲಕರಾದ ದಯಗುಣೇಶ್, ಅತಿಥಿ ಉಪನ್ಯಾಸಕರಾದ ಗೋವಿಂದರಾಜು, ಮಂಜಪ್ಪ, ಜಕಣಚಾರಿ, ಬಸವರಾಜು ಮತ್ತು ಎಂ.ಟಿ. ಮಂಜುನಾಥ್ ಸೇರಿದಂತೆ ಪ್ರಥಮ ಎಂ.ಎ, ದ್ವಿತೀಯ ಎಂ.ಎ ಮತ್ತು ಹಿರಿಯ ವಿದ್ಯಾರ್ಥಿಗಳಿದ್ದರು.