ಸಾರಾಂಶ
ಶೋಭಾ ಮಲ್ಲಿಕಾರ್ಜುನ ಅವರ ಮನದನಿ ಕವನ ಸಂಕಲನ ಬಿಡುಗಡೆಯಲ್ಲಿ ಸಾಹಿತಿ ವಾಸದೇವ ನಾಡಿಗ್ ಕನ್ನಡಪ್ರಭ ವಾರ್ತೆಚಿತ್ರದುರ್ಗ
ಸಾಹಿತ್ಯವೆನ್ನವುದು ಮಾನವೀಯತೆಯ ಇತಿಮಿತಿಯಲ್ಲಿ ಪ್ರತಿಕ್ರಿಯಿಸುವ ಪರಿಣಾಮಕಾರಿ ಮಾಧ್ಯಮವೆಂದು ಸಾಹಿತಿ ವಾಸುದೇವ ನಾಡಿಗ್ ಅಭಿಪ್ರಾಯಪಟ್ಟರು.ನಗರದ ದವಳಗಿರಿ ಬಡಾವಣೆಯ ಗಾಯತ್ರಿ ಶಿವರಾಂ ಇನ್ನರ್‌ವ್ಹೀಲ್ ಕ್ಲಬ್ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೋಭಾ ಮಲ್ಲಿಕಾರ್ಜುನ್‌ರ ಮನದನಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತಮ ಕೃತಿ ರಚನೆಗೆ ಆಳವಾದ ಅಧ್ಯಯನ, ನಿರಂತರ ಓದು, ಬಹುಮುಖ್ಯವಾಗುತ್ತದೆ ಎಂದರು.
ಶೋಭಾ ಅವರ ಚೊಚ್ಚಲ ಕವನಸಂಕಲನ ಮನದನಿಯಲ್ಲಿ ಹೆಣ್ಣು, ಪ್ರಕೃತಿ, ವಚನಕಾರರು, ಕೊರೋನಾ, ಶಿಕ್ಷಣ, ಸ್ಮಾರ್ಟ್ಫೋನ್ ಮತ್ತು ದೈನಂದಿನ ಸಂಗತಿಗಳು ಕವಿತೆಯ ವಸ್ತುವಾಗಿವೆ. ಸಂದರ್ಭಗಳು ಕವನ ರೂಪದಲ್ಲಿ ಹೊರಹೊಮ್ಮಿವೆ. ಕಾವ್ಯ ಸೃಷ್ಟಿಯಲ್ಲಿ ಹೊಸತನವಿದ್ದು ಮೊದಲ ಕವನ ಸಂಕಲನದಲ್ಲಿಯೇ ಭವಿಷ್ಯದಲ್ಲಿ ಉತ್ತಮ ಕವಯತ್ರಿಯಾಗುವ ಎಲ್ಲ ಕುರುಹುಗಳ ಹೊರಗೆಡವಿದ್ದಾರೆ ಎಂದರು.ರೇಣುಕಾ ಪ್ರಕಾಶ್ ಮಾತನಾಡಿ, ಕವನ ಸಂಕಲನವನ್ನು ಮೂರುಸ್ತರಗಳಾಗಿ ವಿಂಗಡಿಸಸಲಾಗಿದೆ. ಹೆಣ್ಣಿನ ಅಂತರಂಗದ ತುಮುಲಗಳು, ಸಂಗಾತಿಯ ಬಗ್ಗೆ ಪ್ರೀತಿ-ಪ್ರೇಮ, ಒಲುಮೆಯ ಭಾವನೆಗಳು ಮತ್ತು ವಚನಕಾರರು,ಕನ್ನಡ ನಾಡು-ನುಡಿ ಸಂಸ್ಕೃತಿಗಳ ಬಗ್ಗೆ ಕಾವ್ಯಹರಿಯಬಿಟ್ಟಿದ್ದಾರೆ. ಹಾಗಾಗಿ ಓದುಗರನ್ನು ತನ್ನತ್ತ ಸೆಳೆಯುವಲ್ಲಿ ಕೃತಿ ಯಶಸ್ವಿಯಾಗಿದೆ ಎಂದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಮಾತನಾಡಿ, ಶೋಭಾ ವೃತ್ತಿಯಲ್ಲಿ ಶಿಕ್ಷಕಿಯಾಗಿ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಕಡಿಮೆ ಅವಧಿಯಲ್ಲಿ ಕೃತಿಯನ್ನು ಹೊರತಂದಿರುವುದು ಸಂತಸ ತಂದಿದೆ. ಮಹಿಳೆಯರ ಮನದಾಳದ ನೋವುಗಳಿಗೆ ಸೊಗಸಾಗಿ ಅಕ್ಷರದ ರೂಪ ನೀಡಿದ್ದಾರೆಂದು ಬಣ್ಣಿಸಿದರು.ಡಾ.ಶಫಿವುಲ್ಲಾ ಮಾತನಾಡಿ, ಕವನ ಸಂಕಲನವು ಭಾವೈಕ್ಯತೆಯ ಭಾವನೆಯನ್ನು ಹೊರಸೂಸುತ್ತಿದೆ. ಪ್ರಸ್ತುತ ದಿನಮಾನದ ವಿದ್ಯಮಾನಗಳಿಗೆ ಹಿಡಿದ ಕನ್ನಡಿಯಾಗಿದೆ. ಸಕಾಲಿಕವಾಗಿ ಪ್ರಕಟಣೆಗೊಂಡಿದೆ ಎಂದರು.
ಬಸವಕೇಂದ್ರ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕವಿಯತ್ರಿ ಶೋಭಾ ಮಲ್ಲಿಕಾರ್ಜುನ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ,ಪ್ರಮಥ ಎಂ.ಎ, ಎಂ.ಜಿ. ಮಲ್ಲಿಕಾರ್ಜುನ್, ಜಯ ಪ್ರಾಣೇಶ್, ಸಿ.ಎಂ. ಪರಿಣಿತ್ ಇದ್ದರು.------------------
ಪೋಟೋ ಕ್ಯಾಪ್ಸನ್ಚಿತ್ರದುರ್ಗದ ದವಳಗಿರಿ ಬಡಾವಣೆಯ ಗಾಯತ್ರಿ ಶಿವರಾಂ ಇನ್ನರ್‌ವ್ಹೀಲ್ ಕ್ಲಬ್ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೋಭಾ ಮಲ್ಲಿಕಾರ್ಜುನ್ ಅವರ ಮನದನಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು.
-----ಪೋಟೋ ಫೈಲ್ ನೇಮ್ 13 ಸಿಟಿಡಿ4