ಇಂದಿನ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಇರಲಿ

| Published : Jul 17 2024, 12:52 AM IST

ಸಾರಾಂಶ

ಯುವ ಬರಹಗಾರರು,ಮುಕುಂದರಾಜು, ಅರಸೀಕೆರೆ ನಗರದಲ್ಲಿ ಸಾಹಿತಿಗಳ ಭೇಟಿ ಮಾಡಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು,ಈ ಹಿಂದೆ ಉತ್ತಮ ವಾತಾವರಣವಿತ್ತು. ಹಾಗಾಗಿ ಎಲ್ಲರೂ ಪರಿಸರ, ಪ್ರೇಮ, ಪ್ರೀತಿಗಳ ವಿಚಾರವಾಗಿ ಸಾಹಿತ್ಯವನ್ನು ರಚಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಸಾಮಾಜಿಕವಾಗಿ ಬರವಣಿಗೆಗಳು ಬದಲಾಗಬೇಕಿದೆ ಎಂದರು

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇತ್ತೀಚಿನ ಸಾಹಿತ್ಯ ಕಾಲದ ಅಗತ್ಯತೆ ಪ್ರೇಮ, ಪ್ರೀತಿ, ಪ್ರಣಯವಲ್ಲ, ಸಾಮಾಜಿಕ ಕಳಕಳಿಯ ವಿಚಾರಗಳ ದೃಷ್ಠಿಕೋನದಲ್ಲಿ ಸಾಗಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಹೇಳಿದರು.ನಗರದಲ್ಲಿ ಸಾಹಿತಿಗಳ ಭೇಟಿ ಮಾಡಿ ಮಾತನಾಡಿದ ಅವರು, ಅನೇಕ ಹೊಸ ಕಾಲದ ಕವಿಗಳನ್ನ ಓದುವ ಕಾರಣಕ್ಕಾಗಿ ಅವರ ದೃಷ್ಠಿಕೋನ ಏನು, ಅವರು ಯಾವ ದಾರಿಯಲ್ಲಿ ಮುಂದುವರೆಯುತ್ತಿದ್ದಾರೆ ಎಂಬುದನ್ನು ಅರಿಯಬೇಕಿದೆ. ಈ ಹಿಂದೆ ಉತ್ತಮ ವಾತಾವರಣವಿತ್ತು. ಹಾಗಾಗಿ ಎಲ್ಲರೂ ಪರಿಸರ, ಪ್ರೇಮ, ಪ್ರೀತಿಗಳ ವಿಚಾರವಾಗಿ ಸಾಹಿತ್ಯವನ್ನು ರಚಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಸಾಮಾಜಿಕವಾಗಿ ಬರವಣಿಗೆಗಳು ಬದಲಾಗಬೇಕಿದೆ ಎಂದರು.ಈಗ ಯುವ ಸಮುದಾಯ ವಯೋಸಹಜವಾದ ಭಾವಲೋಕದಿಂದ ಹೊರಬಂದಿದ್ದು ಸಾಮಾಜಿಕ ಕಳಕಳಿ, ಸಂವಿಧಾನವನ್ನ ಉಳಿಸಿಕೊಳ್ಳುವ ಕಾರಣಕ್ಕಾಗಿ, ಪ್ರಜಾಪ್ರಭುತ್ವದ ಮೌಲ್ಯದ ಕಾರಣಕ್ಕಾಗಿ, ಕೋಮುವಾದಿ ಚಿಂತನೆಗಳ ವಿರುದ್ಧವಾದ ಹಿನ್ನೆಲೆಯಲ್ಲಿ, ದಲಿತರು, ದಮನಿತರು ಇವರ ಪರವಾಗಿ, ಸ್ತ್ರೀಯರ ಸಂಕಟದ ಪರವಾಗಿ ನಮ್ಮ ಹೊಸ ಕಾಲದ ಲೇಖಕರು ಬರೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಯಾವುದೇ ಲೇಖಕ ತನ್ನ ಕಾಲಕ್ಕೆ ಸ್ಪಂದಿಸಬೇಕಾಗುತ್ತದೆ, ದುಡಿಯಬೇಕಾಗುತ್ತದೆ, ಕಾಲ, ಧರ್ಮವನ್ನ ಪರಿಗಣನೆಯಲ್ಲಿ ಇಟ್ಟುಕೊಂಡು ತಮ್ಮ ಬರವಣಿಗೆಯನ್ನ, ಸೃಜನಶೀಲತೆಯನ್ನ ಸಾಹಿತ್ಯಕ್ಕೆ ಒಗ್ಗಿಸುವಂತಹ ಬಹು ದೊಡ್ಡ ಪರಿಶ್ರಮ ಮತ್ತು ಪತ್ರಿಭೆ ಇರುವಂತಹದ್ದು ನಾವು ಕಂಡಿದ್ದೇವೆ. ಇದು ಈ ಕಾಲಕ್ಕೆ ಬಹಳ ಮುಖ್ಯವಾಗಿದೆ ಎಂದು ಹೇಳುತ್ತೇನೆ ಎಂದರು.ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ ಎಲ್. ಮಾತನಾಡಿ, ಯುವ ಸಮುದಾಯ ಸಾಹಿತ್ಯದೆಡೆ ಹೆಚ್ಚು ಆಸಕ್ತಿ ಹೊಂದಬೇಕು. ಜೊತೆಗೆ ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಸಾಹಿತ್ಯಾಸಕ್ತರಿಗೆ ಉತ್ತೇಜನ ನೀಡುವ ಕಾರ್ಯವಾಗಬೇಕಿದೆ ಎಂದರು.ಈ ಸಂದರ್ಭದಲ್ಲಿ ಸಾಹಿತಿಗಳಾದ ಹರೀಶ್ ಕಟ್ಟೆಬೆಳಗುಲಿ, ಜಯಶಂಕರ್ ಹಲಗೂರು, ನಾಟಕ ಅಕಾಡೆಮಿ ಸಹ ಸದಸ್ಯೆ ಮಮತಾ ಅರಸೀಕೆರೆ, ಇತರರು ಇದ್ದರು.

ಫೋಟೋ ಶಿರ್ಷಿಕೆ: ಅರಸೀಕೆರೆ ನಗರದಲ್ಲಿ ಸಾಹಿತಿಗಳ ಭೇಟಿ ಮಾಡಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಮಾತನಾಡಿದರು.