ಯೋಗದಿಂದ ಸುಸ್ಥಿರ ಬದುಕು

| Published : Jun 22 2024, 12:50 AM IST

ಸಾರಾಂಶ

ದೈಹಿಕ, ಮಾನಸಿಕ, ಭಾವನಾತ್ಮಕ ಸಾಮರ್ಥ್ಯಗಳ ಸಾರ ಯೋಗದಲ್ಲಿ ಅಡಗಿದೆ. ಯೋಗ ನಮ್ಮ ಬದುಕನ್ನು ಸುಸ್ಥಿರವನ್ನಾಗಿ ಮಾಡುತ್ತದೆ ಎಂದು ಎಚ್.ಎಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ದೈಹಿಕ, ಮಾನಸಿಕ, ಭಾವನಾತ್ಮಕ ಸಾಮರ್ಥ್ಯಗಳ ಸಾರ ಯೋಗದಲ್ಲಿ ಅಡಗಿದೆ. ಯೋಗ ನಮ್ಮ ಬದುಕನ್ನು ಸುಸ್ಥಿರವನ್ನಾಗಿ ಮಾಡುತ್ತದೆ ಎಂದು ಎಚ್.ಎಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.

ಅವರು ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ಎಚ್.ಜಿ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಶೀರ್ಷಿಕೆಯಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಮಾತನಾಡಿ, ಭಾರತದ ಪವಿತ್ರ ಭೂಮಿಯಲ್ಲಿ ಹುಟ್ಟಿಕೊಂಡಿರುವ ಯೋಗಕ್ಕೆ ವಿಶ್ವದಲ್ಲಿಯೆ ಹೆಚ್ಚು ಮಾನ್ಯತೆ ಸಿಗುತ್ತಲಿದೆ. ಯೋಗದ ಆಚರಣೆ, ಧ್ಯೇಯ ಮತ್ತು ಅದರ ಉಪಯೋಗದ ಕುರಿತು ಮಾತನಾಡಿದರು.

ವೇದಿಕೆ ಮೇಲೆ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯೋಜನಾಧಿಕಾರಿ ಡಾ.ಬಿ.ಡಿ.ಮಾಸ್ತಿ, ಡಾ.ಶಾಂತುಲಾಲ ಚವ್ಹಾಣ, ಉಪ ಪ್ರಾಚಾರ್ಯ ಎಸ್.ಬಿ.ಕುಲಕರ್ಣಿ ಇದ್ದರು.

ನಂತರ ದೈಹಿಕ ಉಪನ್ಯಾಸಕ ಡಾ.ಅಂಬರೀಶ ಬಿರಾದಾರ, ಸತೀಶ ಬಸರಕೋಡ, ಎಸ್.ಎ.ಜಾಗೀರದಾರ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಭಂಗಿಗಳ ಕುರಿತು ಆಸನಗಳ ತರಬೇತಿ ನೀಡಿದರು. ವಿದ್ಯಾರ್ಥಿನಿ ಕಾಶಿಬಾಯಿ ಮಾಶ್ಯಾಳ ಪ್ರಾರ್ಥಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.