ಸಾರಾಂಶ
ನರೇಗಲ್ಲ: ಇಂದಿನ ದಿನಮಾನಗಳಲ್ಲಿ ರಾಷ್ಟ್ರ, ಅಂತಾರಾಷ್ಟೀಯ ಮಟ್ಟದಲ್ಲಿ ಮಹಿಳಾ ಪ್ರಾಬಲ್ಯ ಹೆಚ್ಚುತ್ತಿದ್ದು, ಕಾರಣ ಗ್ರಾಮೀಣ ಭಾಗದ ಬಾಲಕಿಯರು ನಗರಪ್ರದೇಶದ ಬಾಲಕಿಯರೊಂದಿಗೆ ಸ್ಪರ್ಧಾ ಮನೋಭಾವದಿಂದ ಸ್ಪರ್ಧಿಸಿ ಶ್ರಮಿಸಿ ಪ್ರತಿಭಾ ಸಂಪನ್ನರಾಗಿ ನಾಡು ಕಟ್ಟುವ ಕಾಯಕದಲ್ಲಿ ತೊಡಗಿಸಿಗೊಂಡು ಶಾಲೆಗೆ, ಊರಿಗೆ, ಕುಟುಂಬಕ್ಕೆ ಕೀರ್ತಿ ತರಬೇಕೆಂದು ಎಸ್.ಎ.ವಿ.ವಿ.ಪಿ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಸ್ಥಳೀಯ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿ ವಿದ್ಯಾರ್ಥಿನಿಯರ ಬಿಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿ ಚೇರಮನ್ ವೀರಣ್ಣ ಹಳ್ಳಿ ವಹಿಸಿದ್ದರು. ಶಾಲೆಯ ಆದರ್ಶ ವಿದ್ಯಾರ್ಥಿನಿ ಅನುಷಾ ಕುಷ್ಟಗಿ ಅವಳನ್ನು ಗೌರವಿಸಲಾಯಿತು.2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಧುಶ್ರೀ ಬಿಲಕೆರಿ, ಶ್ರೇಯಾ ಬಿಸನಳ್ಳಿ, ಚೇತನಾ ಬೇವಿನಕಟ್ಟಿ ಅವರಿಗೆ ಬಹುಮಾನ ವಿತರಿಸಲಾಯಿತು. ನಗದು ಬಹುಮಾನ ಘೋಷಿಸಿದ ಗೋಪಾಲ ಬಿಲಕೇರಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆಡಳಿತಾಧಿಕಾರಿ ಎನ್.ಆರ್. ಗೌಡರ, ಆಡಳಿತ ಮಂಡಳಿ ಸದಸ್ಯ ಆರ್.ಜಿ. ಪಾಟೀಲ, ನಿಂಗನಗೌಡ ಲಕ್ಕನಗೌಡ, ಷಣ್ಮುಖಪ್ಫ ಶಿದ್ನೇಕೊಪ್ಪ, ಕೆ.ವಿ.ಬಿ.ಎಂ. ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ, ಶಿಕ್ಷಕರಾದ ಕೆ.ಸಿ. ಜೋಗಿ, ಆರ್.ಎಂ.ಗುಳಬಾಳ, ಶಾಲಾ ಸಿಬ್ಬಂದಿ ಬಸಮ್ಮ ಅಸುಂಡಿ, ವಿರೇಶ ಚುಳಕಿ, ಸಂಗಮೇಶ ಕುರುಡಗಿ ಇದ್ದರು.ಮುಖ್ಯೋಪಾಧ್ಯಾಯ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಕಾವ್ಯ, ಅನುಷಾ, ಸುಪ್ರಿಯಾ, ಪೂಜಾ, ಸೌಜನ್ಯ ನಿರೂಪಿಸಿದರು. ಬಿ.ಡಿ.ಯರಗೊಪ್ಪ, ಎ.ಟಿ.ಮಳ್ಳಳ್ಳಿ ಮಕ್ಕಳಿಗೆ ಹಿತವಚನ ಹೇಳಿದರು. ಎಂ.ಎಸ್.ಅತ್ತಾರ ವಂದಿಸಿದರು.