ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇಂದಿನ ಔಷಧದ ಯುಗದಲ್ಲಿ ಪ್ರತಿ ಆಹಾರವು ವಿಷಕಾರಿಯಾಗಿದೆ. ನಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಿದೆ. ಆದ್ದರಿಂದ ಎಲ್ಲರೂ ಸಾವಯವ ಬಳಸಿ ಆರೋಗ್ಯ ಉಳಿಸಿಕೊಳ್ಳಬೇಕು ಎಂದು ನಿವೃತ್ತ ವಿಜ್ಞಾನ ಶಿಕ್ಷಕ ಸಿ.ಎಚ್ ಹುಕ್ಕೇರಿ ಹೇಳಿದರು.ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ 1996-97ನೇ ಸಾಲಿನ ಚನ್ನಗಿರಿಶ್ವರ ಪ್ರಾಸಾದಿಕ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾರ್ಖಾನೆಗಳ ತ್ಯಾಜ್ಯ, ವಾಹನಗಳ ದಟ್ಟಣೆಯಿಂದಾಗುವ ವಾಯು ಮಾಲಿನ್ಯ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದಷ್ಟು ಶುದ್ಧ ನೀರು, ಆಹಾರ, ವಾಯುವಿನಿಂದ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ತಾವುಗಳು ಉತ್ತಮ ಬದುಕು ಸಾಗಿಸಲಿಕ್ಕೆ ಚಿಂತೆ ದೂರ ಮಾಡಿಕೊಂಡು, ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿ ಮನೋ ವೈಕಲ್ಯ ಹೊಡೆದೋಡಿಸಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಎಂ.ಹೆಚ್. ಕುಂಟೋಜಿ, ಎಸ್ ಬಿ ಹುಲಕುಂದ ಮಾತನಾಡಿ, ಶಿಷ್ಯಂದಿರು ಗುರುಗಳಿಗಿಂತ ಮೇಲೆತ್ತರದಲ್ಲಿ ಬೆಳೆದು ನಿಂತಾಗ, ಆ ಗುರುಗಳಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಗುರು ಬರೀ ಕಲಿಸುತ್ತಾನೆ. ಅದನ್ನು ಗುರುವಾಖ್ಯವೆಂದು ತಿಳಿದು ನಡೆಯುವುವನು ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ. 28 ವರ್ಷಗಳ ನಂತರ ನಮ್ಮನ್ನು ನೆನಪಿಸಿ ಎಲ್ಲರನ್ನೂ ಕೂಡಿಸಿದ ಒಂದು ಸುಂದರವಾದ ಕ್ಷಣ ಇದು ನನ್ನ ಜೀವನದ ಸಾರ್ಥಕ ಗಳಿಗೆ ಎಂದರು.ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ನೆನೆದು ಭಾವುಕರಾದರು. ತಮ್ಮ ಗುರುಗಳಿಗೆ ವಿಶೇಷ ಸತ್ಕಾರ ಮಾಡಿ ಗೌರವ ಸಲ್ಲಿಸಿದರು.ವೇದಿಕೆ ಮೇಲೆ ವಿಶ್ರಾಂತ ಶಿಕ್ಷಕ ಬಿ.ಜಿ ಬಿರಾದಾರ, ಎಂ,ಐ ಡಾಂಗೆ, ಬಿ.ಎನ್ ಅರಕೇರಿ, ಜಿ.ಜಿ ಸೊನ್ನದ, ಎಸ್.ಬಿ ಕೋರಿಶೆಟ್ಟಿ, ಬಿ.ಡಿ.ಗೋಕಾಕ, ಎಚ್ ಟಿ. ಅಮಲ್ಜೇರಿ, ಎಸ್.ಸಿ. ಹಿರೇಮಠ, ಹಳೆ ವಿದ್ಯಾರ್ಥಿಗಳಾದ ಶಂಭು ಬಡಿಗೇರ, ಅನಿಲ ಉಳ್ಳಾಗಡ್ಡಿ, ಶ್ರೀಶೈಲ ಕಾರಜೋಳ, ನಿಂಗಪ್ಪ ಬಾಳಿಕಾಯಿ, ಪ್ರಕಾಶ ನುಚ್ಚಿ, ಈರಣ್ಣ ನಕಾತಿ, ಸುರೇಶ ಕಳ್ಯಾಗೋಳ, ಶಂಕರ ಕಾಂಬ್ಳೇಕರ, ವಿರೇಶ ಮುಂಡಗನೂರ, ಶ್ರೀಶೈಲ ಹುನಿಶ್ಯಾಳ, ಷಪಿವುಲ್ಲಾ ಕೋಲಾರ, ಉಮರಲಿ ಕರಡಿ, ಲಕ್ಷ್ಮಿ ಗೋಲಭಾವಿ, ಸುಮಾ ಸಂಕ್ರಾವತ, ಸಂಗೀತಾ ಬಡಿಗೇರ, ರೂಪಾ ಪಾಟೀಲ್, ಸವಿತಾ ಜೀರಗಾಳ, ರೋಹಿಣಿ ಸುಣದೋಳಿ, ಸವಿತಾ ಕಂಕಣವಾಡಿ ಮುಂತಾದವರಿದ್ದರು. ಗೋಕಾಕದ ಶೃತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.