ಸಾರಾಂಶ
ಕಟೀಲು ಕುದ್ರುವಿನಲ್ಲಿ ಮಂಗಳವಾರ, ಕಟೀಲು ಏಳನೆಯ ಮೇಳದ ಪಾದಾರ್ಪಣೆಯ ಅಂಗವಾಗಿ ಯಕ್ಷ ಸಪ್ತಾಹದ ಮೂರನೇ ದಿನ ಕಟೀಲು ಯಕ್ಷಗಾನ ಮೇಳಗಳ ಯೂಟ್ಯೂಬ್ ಫೇಸ್ಬುಕ್ ಪ್ರಚಾರಕರು ಛಾಯಾಗ್ರಾಹಕರು ವಾಟ್ಸಪ್ ವೇದಿಕೆಗಳ ಪ್ರಮುಖರು ಹಾಗೂ ಪ್ರೇಕ್ಷಕರ ಸಮಾವೇಶ ನೆರವೇರಿತು.
ಕಟೀಲು ಮೇಳ ಸಾಮಾಜಿಕ ಜಾಲತಾಣ ಪ್ರತಿನಿಧಿಗಳ ಸಮಾವೇಶ
ಮೂಲ್ಕಿ: ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನ ಪ್ರಸಾರ ಅಥವಾ ನೇರ ಪ್ರಸಾರವಾಗುವುದರಿಂದ ದಾಖಲೀಕರಣದ ಜೊತೆಗೆ ಕಲಾವಿದರಲ್ಲಿ ಜಾಗೃತಿ ಮತ್ತು ಎಚ್ಚರ ಉಂಟು ಮಾಡುತ್ತದೆ. ಎಲ್ಲೆಡೆ ಯಕ್ಷಗಾನದ ಪ್ರೇಕ್ಷಕರನ್ನು ರಂಜಿಸುತ್ತದೆಯೆಂದು ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ ಅಭಿಪ್ರಾಯಪಟ್ಟಿದ್ದಾರೆ.ಕಟೀಲು ಕುದ್ರುವಿನಲ್ಲಿ ಮಂಗಳವಾರ, ಕಟೀಲು ಏಳನೆಯ ಮೇಳದ ಪಾದಾರ್ಪಣೆಯ ಅಂಗವಾಗಿ ಯಕ್ಷ ಸಪ್ತಾಹದ ಮೂರನೇ ದಿನ ನಡೆದ ಕಟೀಲು ಯಕ್ಷಗಾನ ಮೇಳಗಳ ಯೂಟ್ಯೂಬ್ ಫೇಸ್ಬುಕ್ ಪ್ರಚಾರಕರು ಛಾಯಾಗ್ರಾಹಕರು ವಾಟ್ಸಪ್ ವೇದಿಕೆಗಳ ಪ್ರಮುಖರು ಹಾಗೂ ಪ್ರೇಕ್ಷಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಇವತ್ತಿನ ಕಾಲದಲ್ಲಿ ಯಕ್ಷಗಾನ ಕಲೆಯ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹುಮುಖ್ಯವಾಗಿದ್ದು ಕೆಟ್ಟ ಸಂಗತಿಗಳು ಬಹುಬೇಗ ಪ್ರಚಾರಕ್ಕೆ ಬರುತ್ತವೆ. ಒಳ್ಳೆಯ ವಿಚಾರಗಳು ಪ್ರಚಾರಕ್ಕೆ ಬರುವುದಿಲ್ಲ. ಈ ಬಗ್ಗೆ ನಮ್ಮಲ್ಲಿ ಎಚ್ಚರ ಬೇಕೆಂದು ಹೇಳಿದರು.
ದಿನಂಪ್ರತಿ ಕಟೀಲು ಮೇಳಗಳ ಬಯಲಾಟಗಳ ಪ್ರಸಂಗಗಳ ವಿವರ ನೀಡುವ ನಾಗೇಶ್ ಆಚಾರ್ಯ, ಹರಿಪ್ರಸಾದ್ ಶೆಟ್ಟಿ, ಸಿತ್ಲ ರಂಗನಾಥ ರಾವ್, ಯಕ್ಷಮಾಧವ, ಉದಯ ಕಂಬಾರು, ಸತೀಶ್ ಮಂಜೇಶ್ವರ, ಆತ್ಮರಂಜನ್ ಶೆಟ್ಟಿ ಮುಂತಾದವರು ತಮ್ಮ ಅನುಭವಗಳನ್ನು ಹೇಳಿದರು. ಕಟೀಲು ಮೇಳಗಳ ಪ್ರದರ್ಶನಗಳು ಸುಧಾರಣೆಗಳು ಸಾಮಾಜಿಕ ತಾಣಗಳ ಜವಾಬ್ದಾರಿಗಳು ಛಾಯಾಗ್ರಹಣ ವಿಡಿಯೋ ಸಂದರ್ಭ ಇರಬೇಕಾದ ಎಚ್ಚರ ಯಕ್ಷಗಾನದ ಕುರಿತಾಗಿ ಜಾಲತಾಣಗಳಲ್ಲಿ ನಡೆಯುವ ಸಂಗತಿಗಳು ಹೀಗೆ ಕಟೀಲು ಮೇಳಗಳ ಕುರಿತಾಗಿ ಚರ್ಚಿತವಾದ ವಿಚಾರಗಳಿಗೆ ಸ್ಪಂದಿಸಿದ ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮೇಳಗಳಲ್ಲಿ ಆಗಿರುವ ಆಗಬೇಕಾಗಿರುವ ಸುಧಾರಣೆ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀನಿವಾಸ ಆಸ್ರಣ್ಣ, ಖ್ಯಾತ ಛಾಯಾಗ್ರಾಹಕ ಮನೋಹರ ಕುಂದರ್, ಆರ್.ಕೆ. ಭಟ್ ಕೊಂಗೋಟ್, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಮತ್ತಿತರರಿದ್ದರು. ಯೂಟ್ಯೂಬರ್ ದುರ್ಗಾಪ್ರಸಾದ ದಿವಾಣ ಸ್ವಾಗತಿಸಿ, ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))