ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕು ನಿರ್ವಹಿಸಿ: ಪ್ರಿನ್ಸಿಪಾಲ್ ಶಾರದಾ ಬಳ್ಳಾರಿ

| Published : Jun 09 2024, 01:40 AM IST

ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕು ನಿರ್ವಹಿಸಿ: ಪ್ರಿನ್ಸಿಪಾಲ್ ಶಾರದಾ ಬಳ್ಳಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯಕರ ಜಗತ್ತಿನಲ್ಲಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕು ನಿರ್ವಹಣೆಗೆ ಹೆಚ್ಚು ಮರಗಿಡಗಳನ್ನು ಬೆಳೆಸಬೇಕಾಗಿದೆ. ಪರಿಸರದಲ್ಲಿನ ಸಮಸ್ಯೆ ಮತ್ತು ಪರಿಹಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ಪ್ರಿನ್ಸಿಪಾಲ್ ಶಾರದಾ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಆರೋಗ್ಯಕರ ಜಗತ್ತಿನಲ್ಲಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕು ನಿರ್ವಹಣೆಗೆ ಹೆಚ್ಚು ಮರಗಿಡಗಳನ್ನು ಬೆಳೆಸಬೇಕಾಗಿದೆ. ಪರಿಸರದಲ್ಲಿನ ಸಮಸ್ಯೆ ಮತ್ತು ಪರಿಹಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ಪ್ರಿನ್ಸಿಪಾಲ್ ಶಾರದಾ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೋಟೆಬೆನ್ನೂರು ಬಳ್ಳಾರಿ ರುದ್ರಪ್ಪ ವಸತಿಯುತ ಸಿಬಿಎಸ್‌ಈ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧನಾತ್ಮಕ ಬದಲಾವಣೆ ಅವಶ್ಯ: ಪರಿಸರದ ವಿಷಯದಲ್ಲಿ ಪ್ರಪಂಚಕ್ಕೆ ಧನಾತ್ಮಕ ಬದಲಾವಣೆಗಳ ಅವಶ್ಯವಿದೆ, ಹವಾಮಾನ ಬದಲಾವಣೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ, ಪರಿಸರ ಚೇತರಿಸಿಕೊಳ್ಳುವಂತಹ ವಿಚಾರದ ಕಡೆಗೆ ನಾವೆಲ್ಲರೂ ಹೆಚ್ಚು ಗಮನ ನೀಡಬೇಕಾಗಿದೆ, ಎಲ್ಲೆಡೆ ಹಸಿರಿನೊಂದಿಗೆ ಸಮೃದ್ಧವಾದ ಪರಿಸರ ನಿರ್ಮಿಸುವುದರಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಬೇಕಾಗಿದೆ ಎಂದರು.

ಭವಿಷ್ಯದ ಪೀಳಿಗೆಗೆಬಹುದೊಡ್ಡ ಕೊಡುಗೆ:ವಲಯ ಅರಣ್ಯಾಧಿಕಾರಿ ಡಿ.ಅಣ್ಣಪ್ಪ ಮಾತನಾಡಿ, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯಗಳು ಚಿಕ್ಕದಾದರೂ ಸಹ ಬಹುದೊಡ್ಡ ವ್ಯತ್ಯಾಸವನ್ನುಂಟು ಮಾಡಲಿದೆ, ಪ್ರಕೃತಿ ಸೌಂದರ್ಯ ಕಾಪಾಡುವುದು ನಾವು ಭವಿಷ್ಯದ ಪೀಳಿಗೆಗೆ ನೀಡುತ್ತಿರುವ ಬಹುದೊಡ್ಡ ಕೊಡುಗೆ ಎಂದರೂ ತಪ್ಪಾಗಲಾರದು, ಹೀಗಾಗಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ನಾವೆಲ್ಲರೂ ಬೆಳೆಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಪಾದಿಸೋಣ ಎಂದರು. ಈ ವೇಳೆ ಬಿಆರ್‌ಈ ಸಂಸ್ಥೆ ಖಜಾಂಚಿ ಚನ್ನವೀರಪ್ಪ ಬಳ್ಳಾರಿ, ಹೆಲನ್ ಮಾರ್ಗರೇಟ್ ರಾಣಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.