ಮಹಿಳೆಯರು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿ ಜೀವನ ಸಾಗಿಸಬೇಕು. ಮಹಿಳೆ ಎಲ್ಲರಿಗೂ ಮಾದರಿಯಾಗಿ ಬದುಬೇಕು ಎಂದು ಸಲಹೆ ನೀಡಿದರು.ಸಮಾಜ ಸೇವಕಿ ನಾಗರತ್ನ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಮಹಿಳೆಯರು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿ ಜೀವನ ಸಾಗಿಸಬೇಕು. ಮಹಿಳೆ ಎಲ್ಲರಿಗೂ ಮಾದರಿಯಾಗಿ ಬದುಬೇಕು ಎಂದು ಸಲಹೆ ನೀಡಿದರು.

ಸಮಾಜ ಸೇವಕಿ ನಾಗರತ್ನ ಅಶೋಕ ಮನಗೂಳಿ ಹೇಳಿದರು.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮಥ೯ವಾಗಿ ಸಾಧನೆಗೈದಿದ್ದಾರೆ. ವಿದ್ಯಾವಂತ ಮಹಿಳೆಯರು ಆಥಿ೯ಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ಕೃಷಿ ಆಧಾರಿತ ಮಹಿಳೆಯರು ಇಂದಿಗೂ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಮಹಿಳೆಯರನ್ನು ಪೂಜ್ಯನೀಯ ಭಾವದಿಂದ ಭಾರತ ಕಾಣುತ್ತದೆ ಎಂದರು.ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಉಪನ್ಯಾಸಕರಾಗಿ ಮಾತನಾಡಿ, ಮಹಿಳೆಯರು ಇಂದು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಸಮತೋಲನದಲ್ಲಿ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ತನ್ನುನ್ನು ತಾವು ಎಲ್ಲ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮಹಿಳೆಯು ಸಂಪೂರ್ಣವಾಗಿ ಸಬಲೀಕರಣ ಹೊಂದಬೇಕಿದೆ. ಪಾಲಕರು ಪ್ರತಿ ಮಗುವಿಗೆ ಶಿಕ್ಷಣ ನೀಡಬೇಕು. ಶಿಕ್ಷಣ ನೀಡುವುದರ ಮೂಲಕ ಮಹಿಳೆಯರನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮಾಡುಬೇಕು ಎಂದು ತಿಳಿಸಿದರು. ಕವಯಿತ್ರಿ ರೇವತಿ ಉಪ್ಪಿನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಕಮಹಾದೇವಿ ಪ್ರಥಮ ಕವಯತ್ರಿಯಾಗಿ ಹಾಗೂ ಸಮಾಜವನ್ನು ಪ್ರಶ್ನಿಸುವ ಸಾಮರ್ಥ್ಯ ಹೊಂದಿದ್ದಳು. ವಚನಗಳನ್ನು ರಚಿಸುವ ಮೂಲಕ ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದರು. ಜಾನಪದ ಸಾಹಿತ್ಯದ ಮೂಲಕ ಮಹಿಳೆಯರ ಏಳ್ಗೆಯನ್ನು ಸಾಗಿಸಬಹುದಾಗಿದೆ ಎಂದು ತಿಳಿಸಿ ಅಮ್ಮ ಕುರಿತಾಗಿ ಸ್ವರಚಿತ ಕವನ ವಾಚಸಿದರ ಮೂಲಕ ಮಹಿಳೆಯರಿಗೆ ಸ್ಫೂರ್ತಿ ನೀಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಸಿ.ಮಯೂರ ಪ್ರಾಸ್ತಾವಿಕ ಮಾತನಾಡಿ, ಮಹಿಳೆಯರಿಗೆ ಬಸವಾದಿ ಶರಣರು ವಚನಗಳ ರೂಪದಲ್ಲಿ ಸ್ಥಾನಮಾನ ನೀಡಿದರೇ ಡಾ.ಅಂಬೇಡ್ಕರ್‌ ಸಂವಿಧಾನದ ಮೂಲಕ ಮಹಿಳೆಯರ ಅನೇಕ ಹಕ್ಕಗಳನ್ನು ನೀಡಿದ್ದರಿಂದ ಮಹಿಳೆಯರ ಸಮಗ್ರ ಅಭಿವೃದ್ಧಿಯಾಗಿದ್ದು ಶ್ಲಾಘನೀಯ ಎಂದರು. ನ್ಯಾಯವಾದಿ ಭೌರಮ್ಮ ಮಾನವಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಶಿಕ್ಷಕಿ ಶೋಭಾ ಚಿಗರಿ ಮಾತನಾಡಿದರು. ಶಶಿಕಲಾ ನಾಯ್ಕೊಡಿ ಮಹಿಳೆಯರ ಕುರಿತು ಗೀತಗಾಯನ ಮಾಡಿದರು. ಡಾ.ಪ್ರಕಾಶ ರಾಗ ರಂಜನಿ ನಾಡಿ ಗೀತೆ ಪ್ರಸ್ತುತಗೊಳಿಸಿದರು. ಸೈನಾಬಿ ಮಸಳಿ ಪ್ರಾಥಿ೯ಸಿದರು.

ಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಆನಂದ ಶಾಬಾದಿ ನಿರೂಪಿಸಿದರು. ಸುನಂದಾ ಯಂಪೂರೆ ವಂದಿಸಿದರು. ಶೈಲಾ ಸ್ಥಾವರಮಠ, ಅನಸೂಯ ಪಾರಗೊಂಡ, ವಷಾ೯ ಪಾಟೀಲ, ಜಗದೇವಿ ಬಿರಾದಾರ, ಜಯಶ್ರೀ ಕುಲಕರ್ಣಿ, ಶಶಿಕಲಾ ಅಂಗಡಿ, ಶಾರದಾ ಬೇಟಗೇರಿ,

ಪ್ರತಿಭಾ ಚೆಳ್ಳಗಿ, ಜಯಶ್ರೀ ಹದನೂರ, ಶಾಂತು ರಾಣಾಗೋಳ, ಪುರುಷೋತ್ತಮ ಕುಲಕರ್ಣಿ, ವಿಶ್ವನಾಥ ಪಾಟೀಲ, ಇಸ್ಲಾಯಿಲ್ ಶೇಖ, ಜೈಭೀಮ ತಳಕೇರಿ, ಶರಣಮ್ಮ ನಾಯಕ, ಶಾಂಭವಿ ಬೋರಗಿ, ಜಯಶ್ರೀ ನಾಟೀಕಾರ, ರಾಮಕೃಷ್ಣ ಹೆಬ್ಬಾಳ, ಎಸ್.ಎಸ್.ಸಾತಿಹಾಳ ಉಪಸ್ಥಿತರಿದ್ದರು. ಮಹಿಳಾ ಸಾಧಕಿಯರಿಗೆ ಸನ್ಮಾನ:

ಇದೇ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಾದ ಮಹಾದೇವ ಅಗಸರ, ಲಕ್ಷ್ಮೀಬಾಯಿ ಕುಂಬಾರ, ರೇಣುಕಾ ಚೌರ, ದಾನಮ್ಮ ಕುಂಬಾರ, ಪ್ರೇಮಾ ನಾಯಕ, ನಾಗಮ್ಮ ಎಮ್ಮಿ, ಶೈಲಾ ನ್ಯಾಮನ್ನವರ, ಮಹಾದೇವಿ ಹಿರೇಮಠ, ಇಮಾಂಬಿ ಬೋರಗಿ, ಮಿನಾಕ್ಷಿ ವಾಗಮೋರೆ,

ಬೌರಮ್ಮ ಮಾನವಿ, ದಾನಮ್ಮ ಬಿರಾದಾರ, ಸುಚಿತ್ರಾ ಆಕಾಶ, ಶಾಂತಾಬಾಯಿ ಗುಬ್ಬೆಭಾಡ ಸಾಧಕರನ್ನು ಗೌರವಿಸಲಾಯಿತು.