ಸನ್ಮಾರ್ಗದಲ್ಲಿ ಜೀವನ ನಡೆಸಿ: ಬಸವ ಶಾಂತಲಿಂಗ ಶ್ರೀ

| Published : Feb 12 2024, 01:39 AM IST / Updated: Feb 12 2024, 04:53 PM IST

ಬಸವ ಶಾಂತಲಿಂಗ ಶ್ರೀ
ಸನ್ಮಾರ್ಗದಲ್ಲಿ ಜೀವನ ನಡೆಸಿ: ಬಸವ ಶಾಂತಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣನವರ ತತ್ವಗಳಾದ ಕಾಯಕ, ದಾಸೋಹ, ಇಷ್ಠಲಿಂಗ ಪೂಜೆ ಮಾಡುತ್ತ ಸನ್ಮಾರ್ಗದಲ್ಲಿ ಜೀವನ ನಡೆಸಬೇಕು.

ಕನ್ನಡಪ್ರಭ ವಾರ್ತೆ ಹಾವೇರಿ

ಸಮಾಜದಲ್ಲಿ ಕೇವಲ ಭೌತಿಕ ಜೀವನದಲ್ಲಿ ನಿರತರಾದರೆ ಸಾಲದು, ವಿಶ್ವಗುರು ಬಸವಣ್ಣನವರ ತತ್ವಗಳಾದ ಕಾಯಕ, ದಾಸೋಹ, ಇಷ್ಠಲಿಂಗ ಪೂಜೆ ಮಾಡುತ್ತ ಸನ್ಮಾರ್ಗದಲ್ಲಿ ಜೀವನ ನಡೆಸಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಕೋರಿಶೆಟ್ಟರ ಅವರ ಭೀಮರಥ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಂ.ಎಸ್. ಕೋರಿಶೆಟ್ಟರ ಅವರು ನಿಸ್ವಾರ್ಥ ಜೀವನವನ್ನು ನಡೆಸುತ್ತ ಲಿಂಗಾಯತ ಸಮಾಜವನ್ನು ರಚನಾತ್ಮಕವಾಗಿ ಕಟ್ಟುವಲ್ಲಿ ಬಹಳಷ್ಟು ಶ್ರಮಿಸುತ್ತಿದ್ದಾರೆ. ಹಾವೇರಿಯ ದಾನೇಶ್ವರಿ ನಗರದಲ್ಲಿ ಸುಮಾರು ₹೫ ಕೋಟಿ ವೆಚ್ಚದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸಮುದಾಯ ಭವನ ಹಾಗೂ ಲಿಂಗಾಯತ ಬಡ ವಿದ್ಯಾರ್ಥಿಗಳಿಗೆ ೬೦ ಕೊಠಡಿಯ ವಿದ್ಯಾರ್ಥಿ ನಿಲಯವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು.

ಬ್ಯಾಡಗಿಯ ಬಿ.ಇ.ಎಸ್.ಎಂ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಎಂ. ರಾಮಗಿರಿ, ಧಾರವಾಡದ ಮೃತ್ಯುಂಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ವೀಣಾ ಹೂಗಾರ ಮಾತನಾಡಿದರು.

ಇದೇ ವೇಳೆ ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸಿದ ಹಿರಿಯಚೇತನರಾದ ನಾಗನಗೌಡ ನಾಗನಗೌಡ್ರ, ಶಿವಪುತ್ರಪ್ಪ ತುಪ್ಪದ, ಡಾ. ಜೆ.ಆರ್. ಗುಡಿ. ಮೃತ್ಯುಂಜಯ ತಿಪ್ಪಶೆಟ್ಟಿ, ಶಿವಮೂರ್ತೆಪ್ಪ ಬೆಟಗೇರಿ, ಉಸ್ಮಾನಸಾಬ ಪಟವೇಗಾರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮುಖ್ಯ ಅತಿಥಿಗಳಾಗಿ ವಿರುಪಾಕ್ಷಪ್ಪ ಕಡ್ಲಿ, ಶಂಭು ಚಕ್ಕಡಿ, ಅಜ್ಜನಗೌಡ ಗೌಡಪ್ಪನವರ, ಮೃತ್ಯುಂಜಯ ಬುಕ್ಕಶೆಟ್ಟಿ, ದಾಕ್ಷಾಯಣಿ ಗಾಣಗೇರ, ಅಶ್ವಿನಿ ಟೊಂಕದ, ಲಲಿತಾ ನಿರಾಕಾರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರೊ. ಚೆನ್ನಮ್ಮ ಕೋರಿಶೆಟ್ಟರ ಸ್ವಾಗತಿಸಿದರು. ಡಾ. ಪುಷ್ಪಾ ಶಲವಡಿಮಠ ನಿರೂಪಿಸಿದರು.