ಸಂಕಷ್ಟದಲ್ಲಿದೆ ಮಲೆನಾಡಿನ ರೈತರು, ಕೃಷಿ ಕಾರ್ಮಿಕರ ಬದುಕು: ಹುಲ್ಕುಳಿ ಮಹೇಶ್

| Published : Sep 29 2024, 01:39 AM IST

ಸಾರಾಂಶ

ಶೃಂಗೇರಿ, ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಕೊಳೆ ರೋಗ, ಬೆಲೆ ಕುಸಿತ, ಅತಿವೃಷ್ಟಿ ಇತ್ಯಾದಿ ಸಮಸ್ಯೆಗಳಿಂದ ಮಲೆನಾಡಿನ ರೈತರು, ಕೃಷಿಕರ ಬದುಕು ಸಂಕಷ್ಟದಲ್ಲಿದೆ ಎಂದು ಮ್ಯಾಮ್ ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಹೇಳಿದರು.

ಮ್ಯಾಮ್ ಕೋಸ್ನಲ್ಲಿ ಗುಂಪು ವಿಮಾ ಯೋಜನೆಯಡಿ ಸಹಾಯಧನ ಚೆಕ್ ವಿತರಣೆ

ಕನ್ನಡಪ್ರಭ ವಾರ್ತೆ ಶೃಂಗೇರಿ

ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಕೊಳೆ ರೋಗ, ಬೆಲೆ ಕುಸಿತ, ಅತಿವೃಷ್ಟಿ ಇತ್ಯಾದಿ ಸಮಸ್ಯೆಗಳಿಂದ ಮಲೆನಾಡಿನ ರೈತರು, ಕೃಷಿಕರ ಬದುಕು ಸಂಕಷ್ಟದಲ್ಲಿದೆ ಎಂದು ಮ್ಯಾಮ್ ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಹೇಳಿದರು.

ಪಟ್ಟಣದ ಮ್ಯಾಮ್ ಕೋಸ್ ಸಭಾಂಗಣದಲ್ಲಿ ಗುಂಪು ವಿಮಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಹಾಯಧನ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಡಕೆ ಕೃಷಿ ಮಲೆನಾಡಿನ ರೈತರ ಜೀವನಾದಾರ. ಬಹುತೇಕ ರೈತರು ಅಡಕೆ ಕೃಷಿ ಮೇಲೆ ಅವಲಂಬಿತ ರಾಗಿದ್ದು, ಕೃಷಿ ಕಾರ್ಮಿಕರ ಬದುಕು ಅಡಕೆ ಕೃಷಿ ಮೇಲೆ ಅವಲಂಬಿತವಾಗಿದೆ. ಆದರೆ ದಶಕಗಳಿಂದ ಅಡಕೆ ಬೆಳೆಗೆ ಕಾಡುತ್ತಿರುವ ಹಳದಿ ಎಲೆ ರೋಗ,ಎಲೆ ಚುಕ್ಕಿ ರೋಗ ಇನ್ನೂ ನಿಯಂತ್ರಣಕ್ಕೆ ಬಾರದೇ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಬಹುತೇಕ ಅಡಕೆ ತೋಟಗಳು ನಾಶವಾಗಿವೆ,

ಮ್ಯಾಮ್ ಕೋಸ್ ಸಂಸ್ಥೆ ರೈತರ ಹಿತ ಕಾಪಾಡುತ್ತಾ ಬಂದಿದ್ದು ಗುಂಪು ವಿಮಾ ಯೋಜನೆ, ಅಂತ್ಯ ಸಂಸ್ಕಾರ ನಿಧಿ ಯೋಜನೆ, ಆರೋಗ್ಯ ನಿಧಿ ಯೋಜನೆಗಳ ಮೂಲಕ ಆರ್ಥಿಕ ಸಹಾಯ, ಆರೋಗ್ಯ, ಚಿಕಿತ್ಸೆ ವೆಚ್ಚ ಹೀಗೆ ಸಂಕಷ್ಟದಲ್ಲಿರುವ ರೈತರಿಗೆ, ಕೃಷಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದೆ. ಇದರ ಸದ್ಭಳಕೆಯಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಹಾಯಧನ ಚೆಕ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮ್ಯಾಮ್ ಕೋಸ್ ನಿರ್ದೇಶಕರಾದ ಟಿ.ಕೆ.ಪರಾಶರ, ಅಂಬಳೂರು ಸುರೇಶ್ಚಂದ್ರ, ಮ್ಯಾಮ್ ಕೋಸ್ ವ್ಯವಸ್ಥಾಪಕ ಪರಶುರಾಮ್ , ಅಧಿಕಾರಿಗಳು ಉಪಸ್ಥಿತರಿದ್ದರು.

27 ಶ್ರೀ ಚಿತ್ರ 1-

ಶೃಂಗೇರಿ ಮ್ಯಾಮ್ ಕೋಸ್ ಸಭಾಂಗಣದಲ್ಲಿ ಗುಂಪುವಿಮಾ ಯೋಜನೆಯಡಿ ಅಡಕೆ ತೋಟದಲ್ಲಿ ಮರದಿಂದ ಬಿದ್ದ ಮೃತಪಟ್ಟ ಕೂಲಿಕ ಕಾರ್ಮಿಕ ರಾಮು ಕುಟುಂಬಕ್ಕೆ 6 ಲಕ್ಷ ರು. ಸಹಾಯಧನ ಚೆಕ್ ವಿತರಿಸುತ್ತಿರುವುದು.