ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಡೇರಿ ನೂತನ ಅಧ್ಯಕ್ಷರಾಗಿ ಮಾರಣ್ಣ ಹಾಗೂ ಉಪಾಧ್ಯಕ್ಷರಾಗಿ ವೀರಭದ್ರಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜು ಘೋಷಿಸಿದರು
ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಡೇರಿ ನೂತನ ಅಧ್ಯಕ್ಷರಾಗಿ ಮಾರಣ್ಣ ಹಾಗೂ ಉಪಾಧ್ಯಕ್ಷರಾಗಿ ವೀರಭದ್ರಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜು ಘೋಷಿಸಿದರು.
ನೂತನ ಅಧ್ಯಕ್ಷ ಮಾರಣ್ಣ ಮಾತನಾಡಿ, ಎಲ್ಲಾ ನಿರ್ದೇಶಕರು ಹಾಗೂ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡರ ಸಹಕರಿಸಿ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಹೈನೋದ್ಯಮ ರೈತರಿಗೆ ಪ್ರಮುಖ ವೃತ್ತಿಯಾಗಿದ್ದು, ಸಹಕಾರ ಸಂಘದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಬಮೂಲ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಹೈನೋದ್ಯಮ ರೈತರ ಜೀವನಾಡಿ. ಈ ಹಿಂದೆ ಅಧ್ಯಕ್ಷರು ಮತ್ತು ಊರಿನ ಮುಖಂಡರು ಚರ್ಚೆ ಮಾಡಿ, ಅಧಿಕಾರ ವಿಕೇಂದ್ರೀಕೃತ ತತ್ವದಡಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಎಲ್ಲ ನಿರ್ದೇಶಕರ ಸಹಕಾರದಿಂದ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಅವರಿಗೆ ತಿಳಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡೇರಿ ನಿರ್ದೇಶಕರಾದ ರೇಣುಕಾರಾಧ್ಯ, ರಂಗಸ್ವಾಮಯ್ಯ, ನರಸಿಂಹಮೂರ್ತಿ, ಹನುಮಂತೇಗೌಡ, ಚಂದ್ರಶೇಖರ್, ಬಸವರಾಜು, ರಾಮಚಂದ್ರ, ನಾರಾಯಣಪ್ಪ, ನರಸಿಂಹಮೂರ್ತಿ, ಸಿದ್ದಗಂಗಮ್ಮ, ಉಮಾದೇವಿ, ಮುಖಂಡರಾದ , ವಿಜಯ್ ಕುಮಾರ್, ಕಾರಳಾಪ್ಪ, ಅನಿಲ್, ನಾಗರಾಜು, ಗೋವಿಂದರಾಜು, ರಂಗಸ್ವಾಮಿ, ಗೋವಿಂದರಾಜು, ನಾಗೇಶ್, ಹನುಮಂತರಾಜು, ಮಂಜುನಾಥ್, ಕೇಶವಮೂರ್ತಿ, ಜಯರಾಂ, ಸಿಬ್ಬಂದಿ ಹರೀಶ್ ಕಾರ್ಯದರ್ಶಿ, ಲಕ್ಷ್ಮೀನಾರಾಯಣ್, ಇತರರಿದ್ದರು.ಕೋಟ್.............
ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪಾರದರ್ಶಕ ಆಡಳಿತ ನೀಡಿ, ಹೈನುಗಾರರಿಗೆ ಬಮೂಲ್ ಲಾಭದಲ್ಲಿ 1 ರೂಪಾಯಿ ವಿತರಿಸಿರುವುದು ದೊಡ್ಡ ಸಾಧನೆ. ತಿರುಪತಿಗೆ ನಮ್ಮ ಬಮೂಲ್ ತುಪ್ಪ ಪೂರೈಸುವ ಅದೃಷ್ಟ ಸಿಕ್ಕಿರುವುದು ನೂತನ ಅಧ್ಯಕ್ಷರ ಕಾರ್ಯವೈಖರಿ, ಪ್ರತಿ ಡೇರಿ ಆಡಳಿತ ಮಂಡಳಿಗೆ, ಪದಾಧಿಕಾರಿಗಳಿಗೆ ಮಾದರಿಯಾಗಿದೆ. ಡೇರಿಯಲ್ಲಿ ಚುನಾವಣಾ ಖರ್ಚಿಗೆ ತಡೆಯೊಡ್ಡಿ, ಅವಿರೋಧವಾಗಿ ಆಯ್ಕೆಗೆ ಒತ್ತು ನೀಡಿದ್ದೇವೆ.-ಹನುಮಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ತ್ಯಾಮಗೊಂಡ್ಲು
ಫೆÇೀಟೋ 1 :ತ್ಯಾಮಗೊಂಡ್ಲು ಹೋಬಳಿಯ ಓಬಾಳಪುರ ಡೇರಿ ಅಧ್ಯಕ್ಷರಾಗಿ ಮಾರಣ್ಣ ಹಾಗೂ ಉಪಾಧ್ಯಕ್ಷ ವೀರಭದ್ರಯ್ಯ ಅವರನ್ನು ನಿರ್ದೇಶಕರು, ಮುಖಂಡರು ಅಭಿನಂದಿಸಿ ಶುಭಕೋರಿದರು.