ಕನಕಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದು, ನಮ್ಮ ಶಾಲೆಯಲ್ಲಿ 2026-27ನೇ ಸಾಲಿಗೆ ಆಂಗ್ಲ ಮಾಧ್ಯಮದ ಎಲ್‌ಕೆಜಿ ತರಗತಿ ಆರಂಭಿಸಿರುವುದಾಗಿ ಬಾಣಂತಮಾರಮ್ಮ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ತಿಳಿಸಿದರು.

ಶಾಲಾ ಆವರಣದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಮಕ್ಕಳನ್ನು ಸ್ವಾಗತಿಸಿ, ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಡ/ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಸಲುವಾಗಿ ಆಂಗ್ಲ ಮಾಧ್ಯಮದಲ್ಲಿ ಎಲ್ ಕೆಜಿ ತರಗತಿ ಆರಂಭಿಸಲಾಗಿದೆ. 8ನೇ ತರಗತಿವರೆಗೂ ನುರಿತ ಶಿಕ್ಷಕರ ಜೊತೆಗೆ ಬಸ್ ವ್ಯವಸ್ಥೆ, ಸಮವಸ್ತ್ರ ಹಾಗೂ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ನಗರದ ಸಾರ್ವಜನಿಕರು, ಪೋಷಕರು ಇದರ ಸದುಪಯೋಗ ಪಡಿಸಿ ಕೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಶಾಲಾ ಎಸ್‌ಡಿಎಂಸಿ ಸದಸ್ಯ ಎಚ್.ಪಿ.ರಾಜು, ಶಿಕ್ಷಕಿಯರಾದ ಸುಜಾತ, ಇಂದಿರಾ, ಕಲಾವತಿ, ರೇಣುಕಾ ಮಾಲಗತ್ತಿ, ಸುನೀತಾ, ಜ್ಯೋತಿ, ಜಯಮ್ಮ, ರಂಗಣ್ಣ ನವರ್, ಗೀತಾ, ಯಶೋದ, ಚಲುವರಾಜು, ವಸಂತ ರಾಣಿ ಸೇರಿದಂತೆ ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದ ಬಾಣಂತಮಾರಮ್ಮ ಶಾಲಾ ಆವರಣದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಮಕ್ಕಳನ್ನು ಸ್ವಾಗತಿಸಿ, ದಾಖಲಾತಿ ಆಂದೋಲನಕ್ಕೆ ಎಸ್‌ಡಿಎಂಸಿ ಸದಸ್ಯ ಎಚ್.ಪಿ.ರಾಜು, ಮುಖ್ಯ ಶಿಕ್ಷಕಿ ಮಂಜುಳಾ ಚಾಲನೆ ನೀಡಿ ಪುಸ್ತಕ ವಿತರಿಸಿದರು.