ಈ ವೇಳೆ ಶಾಸಕ ಸಿಮೆಂಟ್ ಮಂಜು ಅವರು ಚಿತ್ರ ವೀಕ್ಷಿಸಿ ಮಾತನಾಡಿ, ಸಂಪೂರ್ಣ ಹಳ್ಳಿಯ ಸೊಗಡನ್ನು ಒಳಗೊಂಡಿರುವ ‘ಲೋ ನವೀನ’ ಸಿನಿಮಾ ಕನ್ನಡ ಸಿನಿರಂಗಕ್ಕೆ ಹೊಸತನ ತರುವ ಚಿತ್ರವಾಗಿದೆ. ಹದಿನಾಲ್ಕು ವರ್ಷಗಳ ನಿರಂತರ ಪರಿಶ್ರಮದೊಂದಿಗೆ ಇಂದು ನಾಯಕ ನಟನಾಗಿ ಹೊರಹೊಮ್ಮಿರುವ ನವೀನ್ ಸಜ್ಜು ಅವರ ಪ್ರಯತ್ನ ಶ್ಲಾಘನೀಯ. ಹಳ್ಳಿಯ ಬದುಕು, ಸಂಸ್ಕೃತಿ ಮತ್ತು ಭಾವನೆಗಳನ್ನು ಜನರ ಮುಂದೆ ತರುವ ಕೆಲಸವನ್ನು ಈ ಚಿತ್ರ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕನ್ನಡ ಚಿತ್ರರಂಗದ ಯುವ ನಟ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಅಭಿನಯದ ‘ಲೋ ನವೀನ’ ಚಿತ್ರದ ಪ್ರಚಾರ ಕಾರ್ಯಕ್ರಮವು ಪಟ್ಟಣದ ತೇಜಸ್ವಿ ಚಿತ್ರಮಂದಿರದಲ್ಲಿ ಸಂಭ್ರಮದಿಂದ ನಡೆಯಿತು.ಚಿತ್ರದ ಪ್ರಚಾರಕ್ಕಾಗಿ ಸಕಲೇಶಪುರಕ್ಕೆ ಆಗಮಿಸಿದ ನಟ ನವೀನ್ ಸಜ್ಜು ಅವರನ್ನು ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ನಾಸಿಕ್ ಬ್ಯಾಂಡ್‌ನ ಸದ್ದಿಗೆ ಸ್ಟೆಪ್ ಹಾಕಿದ ನಟ ನವೀನ್ ಸಜ್ಜು ಸಿನಿರಸಿಕರನ್ನು ರಂಜಿಸಿ ಉತ್ಸಾಹ ತುಂಬಿದರು. ಕಾರ್ಯಕ್ರಮದಲ್ಲಿ ಸಾಕಷ್ಟು ಯುವಕರು ಹಾಗೂ ಸಿನಿ ಅಭಿಮಾನಿಗಳು ಭಾಗವಹಿಸಿ ಸಂಭ್ರಮಿಸಿದರು.ಈ ವೇಳೆ ಶಾಸಕ ಸಿಮೆಂಟ್ ಮಂಜು ಅವರು ಚಿತ್ರ ವೀಕ್ಷಿಸಿ ಮಾತನಾಡಿ, ಸಂಪೂರ್ಣ ಹಳ್ಳಿಯ ಸೊಗಡನ್ನು ಒಳಗೊಂಡಿರುವ ‘ಲೋ ನವೀನ’ ಸಿನಿಮಾ ಕನ್ನಡ ಸಿನಿರಂಗಕ್ಕೆ ಹೊಸತನ ತರುವ ಚಿತ್ರವಾಗಿದೆ. ಹದಿನಾಲ್ಕು ವರ್ಷಗಳ ನಿರಂತರ ಪರಿಶ್ರಮದೊಂದಿಗೆ ಇಂದು ನಾಯಕ ನಟನಾಗಿ ಹೊರಹೊಮ್ಮಿರುವ ನವೀನ್ ಸಜ್ಜು ಅವರ ಪ್ರಯತ್ನ ಶ್ಲಾಘನೀಯ. ಹಳ್ಳಿಯ ಬದುಕು, ಸಂಸ್ಕೃತಿ ಮತ್ತು ಭಾವನೆಗಳನ್ನು ಜನರ ಮುಂದೆ ತರುವ ಕೆಲಸವನ್ನು ಈ ಚಿತ್ರ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಯುವ ನಟನಾಗಿ ಬೆಳೆಯುತ್ತಿರುವ ನವೀನ್ ಸಜ್ಜು ಅವರನ್ನು ಎಲ್ಲರೂ ಬೆಂಬಲಿಸಬೇಕು. ಈ ಚಿತ್ರ ಯಶಸ್ವಿಯಾಗಿ ಶತದಿನೋತ್ಸವ ಆಚರಿಸಲಿ. ಮುಂದಿನ ದಿನಗಳಲ್ಲಿ ಅವರು ಕನ್ನಡ ಚಿತ್ರರಂಗದ ಉತ್ತಮ ನಾಯಕ ನಟನಾಗಿ ಗುರುತಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.ಇದೇ ವೇಳೆ ಮಾತನಾಡಿದ ನಟ ನವೀನ್ ಸಜ್ಜು, ಸಂಗೀತ ನಿರ್ದೇಶಕರಾಗಿ ಹದಿನಾಲ್ಕು ವರ್ಷಗಳ ಅನುಭವದ ಬಳಿಕ ನಾಯಕ ನಟನಾಗಿ ಅಭಿನಯಿಸಿರುವುದು ವಿಶೇಷ ಸಂತೋಷ ತಂದಿದೆ. ಹಳ್ಳಿಯ ಸೊಗಡನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿನಿಮಾ ನಿರ್ಮಿಸಲಾಗಿದೆ. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.