ನೂರಾಳೇಶ್ವರ ಪುಣ್ಯ ಸನ್ನಿಧಿ ಮೈಸೂರು ಜಿಲ್ಲೆಯ ವನಸಿರಿ ಜಲಸಿರಿ ಸರಗೂರು ತಾಲೂಕಿನ ದಟ್ಟ ಅರಣ್ಯ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ಕನ್ನಡಪ್ರಭ ವಾರ್ತೆ ಸರಗೂರುಕಾಡಿನಮಧ್ಯ ಭಾಗದಲ್ಲಿರುವ ಇತಿಹಾಸವುಳ್ಳ, ಸುತ್ತಮುತ್ತಲಿನ ಗ್ರಾಮಗಳ ಜನರು ನಂಬಿಕೆಯಿಂದ ಪೂಜಿಸುವ ನೂರಾಳೇಶ್ವರ ದೇಗುಲಕ್ಕೆ ತೆರಳಲು ಭಕ್ತರಿಗೆ ಅವಕಾಶ ಮಾಡಿಕೊಡಬೇಕು ಎಂದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ. ಚಂದನ್ ಗೌಡ ಒತ್ತಾಯಿಸಿದ್ದಾರೆ.ದೇಗುಲ, ದೇವರ ದರ್ಶನಕ್ಕೆ ಅರಣ್ಯಾಧಿಕಾರಿ ಅವಕಾಶ ನೀಡುತ್ತಿಲ್ಲಎಂಬ ಸ್ಥಳೀಯ ಗ್ರಾಮಸ್ಥರ ಅಳಲಿಗೆ ಸ್ಪಂದಿಸಿದ ಚಂದನ್ ಗೌಡ ಅವರು, ಸಭೆ ನಡೆಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೇ, ಅರಣ್ಯಾಧಿಕಾರಿಗಳೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದರು.ಈ ವೇಳೆ ಮಾತನಾಡಿದ ಅವರು, ನೂರಾಳೇಶ್ವರ ಪುಣ್ಯ ಸನ್ನಿಧಿ ಮೈಸೂರು ಜಿಲ್ಲೆಯ ವನಸಿರಿ ಜಲಸಿರಿ ಸರಗೂರು ತಾಲೂಕಿನ ದಟ್ಟ ಅರಣ್ಯ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಡುವೆ ಇರುವ ಪವಿತ್ರವಾದ ಹಾಗೂ ಪರಂಪರೆಯ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಪರಂಪರೆಗಳಿಂದ ರಾಜ ಮಹಾರಾಜರ ಕಾಲದಿಂದ ನಾಡಿನ ಜನತೆಗಾಗಿ ಲೋಕಕಲ್ಯಾಣಕ್ಕಾಗಿ , ಉತ್ತಮಮಳೆ- ಬೆಳೆ ಗಾಗಿ, ನಾಡಿನ ರೈತರ ಸಮೃದ್ಧಿಯ ಮಳೆಗಾಗಿ ನೂರಾಳೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡುವುದು ಸಂಪ್ರದಾಯ ಎಂದರು.ಹೀಗೆ ನಡೆದು ಬಂದಿರುವ ಈ ಪುರಾತನ ಪದ್ದತಿ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಸರಗೂರು ತಾಲೂಕಿನ ಪವಿತ್ರ ಕ್ಷೇತ್ರ ಬೆಲ್ಲದಕುಪ್ಪೆ ಮಹಾದೇಶ್ವರನ ದೇವರ ದರ್ಶನಕ್ಕೂ ಅರಣ್ಯ ಇಲಾಖೆಯವರು ತಡೆಯಾಜ್ಞೆ ಹೊರಡಿಸಿ ಭಕ್ತಾದಿಗಳಿಗೆ, ಸ್ಥಳೀಯ ಸಾವಿರಾರು ರೈತರಿಗೆ ತಡೆದಿರುವ ನಿದರ್ಶನಗಳು ಸಾಕಷ್ಟು ಇರುವ ಸಮಯದಲ್ಲಿ ಅದೇ ವ್ಯಾಪ್ತಿಯಲ್ಲಿ ಬರುವ ನೂರಾಳೇಶ್ವರ ಸನ್ನಿಧಿಯಲ್ಲಿ ಇಂದಿನ ಪ್ರಸ್ತುತ ಕಾಲಮಾನದಲ್ಲಿರುವ ಬರಗಾಲವನ್ನು ಪರಿಹರಿಸಿ ನಾಡಿನ ಜನತೆಗೆ ಮಳೆಯ ಮುಖಾಂತರ ಒಳ್ಳೆಯ ಬೆಳೆ ಆರೋಗ್ಯ ಕರುಣಿಸಲು ಹರಕೆ ಹೊರಲು ಸನ್ನಿಧಿಗೆ ದಾವಿಸಲು ಬಂದ ಭಕ್ತಾದಿ ನೂರಾರು ರೈತರನ್ನ ಅರಣ್ಯ ಇಲಾಖೆಯವರು ತಡೆದಿರುವುದು ಸಮಂಜಸವಲ್ಲ ಎಂದ ಚಂದನ್ ಗೌಡ ಹೇಳಿದರು.ಸ್ಥಳೀಯ ಗ್ರಾಮಗಳಾದ ಸರಗೂರು, ಹುಸ್ಕೂರು, ದಡದಹಳ್ಳಿ, ಹಳೆಯೂರು, ಹಂಚಿಪುರ, ಬೆಲ್ಲದಪುರ, ಬಿರುವಾಳು, ಹೊಸ ಬಿರುವಾಳು ಸೇರಿದಂತೆ ಹತ್ತಾರು ಗ್ರಾಮಗಳ ರೈತರು ನೂರಾಳೇಶ್ವರರ ಸನ್ನಿಧಿಯಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಲು ರಾಜ್ಯದಲ್ಲಿರುವ ಮೀಸಲು ಅರಣ್ಯ ವ್ಯಾಪ್ತಿಯ ದೇವಾಲಯಗಳ ದರ್ಶನಕ್ಕೆ ಭಕ್ತರು ಅವಕಾಶ ಮಾಡಿಕೊಟ್ಟಿರುವ ನಿದರ್ಶನವಿದೆ ಎಂದರು.ಈ ವೇಳೆ ರೈತ ಕಲ್ಯಾಣ ಒತ್ತಾಯಕ್ಕೆ ಮಣಿದ ವನ್ಯಜೀವಿ ಸಂರಕ್ಷಣೆ ಮುಖ್ಯ ಅರಣ್ಯಾಧಿಕಾರಿಗಳು ಭಕ್ತರನ್ನು ದೇವಾಲಯಕ್ಕೆ ತೆರಳಲು ಅವಕಾಶ ನೀಡುವುದಾಗಿ ತಿಳಿಸಿದರು.