ಬಿಮ್ಸ್‌ ಮೇಲೆ ಲೋಕಾ ದಾಳಿ; ಐವಿ ಗ್ಲುಕೋಸ್‌ ಬಾಕ್ಸ್‌ ಪತ್ತೆ

| Published : Dec 01 2024, 01:30 AM IST

ಬಿಮ್ಸ್‌ ಮೇಲೆ ಲೋಕಾ ದಾಳಿ; ಐವಿ ಗ್ಲುಕೋಸ್‌ ಬಾಕ್ಸ್‌ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸರಣಿ ಸಾವಿಗೆ ಕಾರಣವಾದ ಆರ್‌ಎಲ್‌ಎಸ್‌ ಐವಿ ಗ್ಲುಕೋಸ್‌ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯ ಉಗ್ರಾಣದಲ್ಲಿಯೂ ಪತ್ತೆ ಆಗಿದೆ. ಆಸ್ಪತ್ರೆ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ ವೇಳೆ ಐವಿ ಗ್ಲುಕೋಸ್‌ ಬಾಕ್ಸ್‌ಗಳು ಪತ್ತೆಯಾಗಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ನೇತೃತ್ವದಲ್ಲಿ 8 ಅಧಿಕಾರಿಗಳು ದಾಳಿ ನಡೆಸಿ ಉಗ್ರಾಣ ಪರಿಶೀಲಿಸಿದರು. ಈ ವೇಳೆ ಪಿಬಿಪಿ ಸಂಸ್ಥೆ ಸರಬರಾಜು ಮಾಡಿರುವ ಐವಿ ಗ್ಲುಕೋಸ್‌ ಬಾಕ್ಸ್‌ಗಳು ಪತ್ತೆಯಾಗಿವೆ. ಸಹಜವಾಗಿ ಬಳ್ಳಾರಿಯ ಪ್ರಕರಣ ಹೆಚ್ಚಿನ ಆತಂಕ ತಂದಿರುವುದರಿಂದ ಇಲ್ಲಿ ಕೂಡ ಬಾಣಂತಿಯರಿಗೆ ಏನಾದರೂ ಇದನ್ನು ನೀಡಲಾಗಿದೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಅದಲ್ಲದೆ, ದಾಳಿಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಗ್ಲುಕೋಸ್‌ ಬಾಕ್ಸ್‌ಗಳು ಕಂಡುಬಂದಿದ್ದರಿಂದಾಗಿ ಲೋಕಾ ಅಧಿಕಾರಿಗಳು ಆಶ್ಚರ್ಯಚಕಿತಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬೆಳಗಾವಿ ಜಿಲ್ಲಾದ್ಯಂತ ಆಸ್ಪತ್ರೆಗಳಿಗೆ ಏಪ್ರಿಲ್ ತಿಂಗಳಿಂದಲೇ ಆರ್‌ಎಲ್‌ಎಸ್‌ ಐವಿ ಗ್ಲುಕೋಸ್ ಪೂರೈಕೆಯಾಗಿದೆ. ಹೀಗಾಗಿ ಎಲ್ಲೆಲ್ಲಿ ಪೂರೈಕೆಯಾಗಿದೆ ಎಂಬ ಬಗ್ಗೆ ಉಗ್ರಾಣ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಮಾತ್ರವಲ್ಲ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಈ ಐವಿ ಫ್ಲೂಯಿಡ್​ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸರಬರಾಜು ಮಾಡಿದೆ.