ಸರಕು ಸಾರಿಗೆ ಸಾಮರ್ಥ್ಯ ವಿಸ್ತರಣೆ ಹಾಗೂ ಬಹು ಮಾಧ್ಯಮ ಲಾಜಿಸ್ಟಿಕ್ಸ್ ಬಲವರ್ಧನೆ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ತೋಕೂರು ನಿಲ್ದಾಣದಿಂದ ಪಾಲಿಪ್ರೊಪಿಲಿನ್‌ನ ಮೊದಲ ಕಂಟೇನರ್ ರ್‍ಯಾಕ್‌ಗೆ ಗುರುವಾರ ಅಧಿಕೃತ ಚಾಲನೆ ನೀಡಿದೆ. ಇದರೊಂದಿಗೆ ಕೊಂಕಣ ರೈಲ್ವೆ ಜಾಲದಲ್ಲಿ ಹೊಸ ಕಂಟೇನರ್ ಸರಕು ಸಂಚಾರಕ್ಕೆ ಚಾಲನೆ

ಮಂಗಳೂರು: ಸರಕು ಸಾರಿಗೆ ಸಾಮರ್ಥ್ಯ ವಿಸ್ತರಣೆ ಹಾಗೂ ಬಹು ಮಾಧ್ಯಮ ಲಾಜಿಸ್ಟಿಕ್ಸ್ ಬಲವರ್ಧನೆ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ತೋಕೂರು ನಿಲ್ದಾಣದಿಂದ ಪಾಲಿಪ್ರೊಪಿಲಿನ್‌ನ ಮೊದಲ ಕಂಟೇನರ್ ರ್‍ಯಾಕ್‌ಗೆ ಗುರುವಾರ ಅಧಿಕೃತ ಚಾಲನೆ ನೀಡಿದೆ. ಇದರೊಂದಿಗೆ ಕೊಂಕಣ ರೈಲ್ವೆ ಜಾಲದಲ್ಲಿ ಹೊಸ ಕಂಟೇನರ್ ಸರಕು ಸಂಚಾರಕ್ಕೆ ಚಾಲನೆ ದೊರೆತಿದೆ.

ಈ ಹೊಸ ಸರಕು ಸಂಚಾರದಲ್ಲಿ ಮೊದಲ ಕಂಟೇನರ್ ರ್‍ಯಾಕ್ ತೋಕೂರು ನಿಲ್ದಾಣದಿಂದ ಹೊರಟಿತು. ಕಂಟೇನರ್ ಹಾಗೂ ಇತರೆ ಸರಕು ಸಂಚಾರಕ್ಕೆ ಅನುಕೂಲವಾಗುವಂತೆ ಕೊಂಕಣ ರೈಲ್ವೆ ಸಹಯೋಗದಲ್ಲಿ ತೋಕೂರು ನಿಲ್ದಾಣದಲ್ಲಿ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಪೇವ್ಡ್ ವೇರ್‌ಫ್, ಸಂಪರ್ಕ ರಸ್ತೆಗಳು, ಮುಚ್ಚಿದ ಗೋದಾಮುಗಳು, ಓಪನ್ ಸ್ಟ್ಯಾಕ್ ಯಾರ್ಡ್ ಸೇರಿದಂತೆ ಸುಧಾರಿತ ಲಾಜಿಸ್ಟಿಕ್ಸ್ ಸೌಲಭ್ಯಗಳು ಇಲ್ಲಿ ಲಭ್ಯವಿವೆ.

ಸರಾಸರಿಯಾಗಿ ತಿಂಗಳಿಗೆ ಎರಡು ಕಂಟೇನರ್ ರ್‍ಯಾಕ್‌ಗಳನ್ನು ರಾಜಸ್ಥಾನದ ಮೊರ್ಬಿ ಪ್ರದೇಶಕ್ಕೆ ಸಾಗಿಸಲಾಗುವುದುದೆ. ಈ ಸಂಚಾರವನ್ನು ಕಂಟೇನರ್ ರ್‍ಯಾಕ್‌ಗಳ ಮೂಲಕ ನಿರ್ವಹಿಸಲಾಗುತ್ತಿದ್ದು, ಈ ಉದ್ದೇಶಕ್ಕಾಗಿ ಅಧಿಕೃತ ಒಪ್ಪಂದವೂ ನಡೆದಿದೆ.

ಈ ಹೊಸ ಸರಕು ಸಂಚಾರದ ಮೊದಲ ರ್‍ಯಾಕ್‌ಗೆ ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, ಕೊಂಕಣ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಸಿನ್ಹಾ, ವಾಣಿಜ್ಯ ಹಾಗೂ ಕಾರ್‍ಯಾಚರಣೆ ನಿರ್ದೇಶಕ ಸುನಿಲ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳು ಚಾಲನೆ ನೀಡಿದರು.ತೋಕೂರು ನಿಲ್ದಾಣದಲ್ಲಿ ಲಭ್ಯವಿರುವ ಸುಧಾರಿತ ಸೌಲಭ್ಯಗಳನ್ನು ಇತರೆ ಗ್ರಾಹಕರೂ ಬಳಸಿಕೊಳ್ಳಲು ಈ ಬೆಳವಣಿಗೆ ಸಹಕಾರಿಯಾಗಿದೆ.