ಸಾರಾಂಶ
ಮೂರು ನ್ಯಾಯಾಲಯದ ಪ್ರಕರಣ ಸೇರಿ ಒಟ್ಟು 2, 624 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿದೆ. ಅಲ್ಲದೆ ₹20.25 ಕೋಟಿ ಹಣ ಸಂದಾಯವಾಗಿದೆ. ಕಕ್ಷಿದಾರರಿಂದ ಉತ್ತಮ ಪ್ರತಿಕ್ರಿಯೆ
ಕನ್ನಡಪ್ರಭ ವಾರ್ತೆ ಶಹಾಪುರ
ಮನುಷ್ಯನ ಬದುಕಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿಂದ ವ್ಯಾಜ್ಯಗಳು ಸಂಭವಿಸುವುದು ಸಹಜ. ಸಣ್ಣ ಅವಘಡಗಳನ್ನು ದೊಡ್ಡದು ಮಾಡದೆ, ದ್ವೇಷ ಬಿಟ್ಟು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕೆಂದು ಕಾನೂನು ಸೇವಾ ಸಮಿತಿ ತಾಲೂಕಾಧ್ಯಕ್ಷ ಹಾಗೂ ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ. ಹೇಳಿದರು.ನಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೂರು ನ್ಯಾಯಾಲಯದ ಪ್ರಕರಣ ಸೇರಿ ಒಟ್ಟು 2, 624 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿದೆ. ಅಲ್ಲದೆ ₹20.25 ಕೋಟಿ ಹಣ ಸಂದಾಯವಾಗಿದೆ. ಕಕ್ಷಿದಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.
ನಗರದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿವಿಧ ಸ್ವೂರಪದ ಸಿವಿಲ್, ಕ್ರಿಮಿನಲ್, ಮೋಟಾರು ವಾಹನ ಅಪಘಾತ ಪ್ರಕರಣ ಸೇರಿ 536 ಪ್ರಕರಣ ಇತ್ಯರ್ಥಪಡಿಸಿ ₹1.6 ಕೋಟಿ ಹಣ ಸಂದಾಯ ಮಾಡಿಸಿದೆ. ಅಲ್ಲದೆ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶೋಭಾ ಅವರ ಸಮ್ಮುಖದಲ್ಲಿ 1,045 ಪ್ರಕರಣ ಬಗೆಹರಿಸಿದೆ. ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ಅವರ ಸಮ್ಮುಖದಲ್ಲಿ 1,043 ಪ್ರಕರಣ ಬಗೆಹರಿಸಿ ₹45 ಸಾವಿರ ಹಣ ಸಂದಾಯಪಡಿಸಿದೆ ಎಂದು ಮಾಹಿತಿ ನೀಡಿದರು.ಪ್ರತಿಯೊಬ್ಬ ವ್ಯಕ್ತಿಗೆ ಬದುಕು ಸಾಗಿಸಲು ಶಾಂತಿ, ನೆಮ್ಮದಿ ಅವಶ್ಯಕ. ಯಾವುದೇ ವಿಧವಾದ ವ್ಯಾಜ್ಯಗಳು, ಜಗಳಗಳು ಇರಬಾರದು. ಇದ್ದರೂ ಎಲ್ಲಾ ಸಮಸ್ಯೆ ಇತ್ಯರ್ಥ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು.
ಬಸವರಾಜ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು, ಶಹಾಪುರ-
ಶಹಾಪುರ ನಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಯಿತು.---000---