ಲೋಕ ಅದಾಲತ್‌: 24,575 ಪ್ರಕರಣ ಇತ್ಯರ್ಥ, 11,47,73,768 ರು. ಪರಿಹಾರ

| Published : Sep 15 2025, 01:01 AM IST

ಲೋಕ ಅದಾಲತ್‌: 24,575 ಪ್ರಕರಣ ಇತ್ಯರ್ಥ, 11,47,73,768 ರು. ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು 19, ಚೆಕ್ಕು ಅಮಾನ್ಯ ಪ್ರಕರಣಗಳು 189, ಬ್ಯಾಂಕ್ / ಹಣ ವಸೂಲಾತಿ ಪ್ರಕರಣಗಳು 9, ಮೋಟಾರು ವಾಹನ ಕಾಯ್ದೆ ಪ್ರಕರಣಗಳು 80, ಸಿವಿಲ್ ಪ್ರಕರಣಗಳು 162, ಇತರೆ ಕ್ರಿಮಿನಲ್ ಪ್ರಕರಣಗಳು 3,423, ಕಾರ್ಮಿಕ ವ್ಯಾಜ್ಯ 1, ಮಣಿ ಮತ್ತು ಭೂವಿಜ್ಞಾನ ಪ್ರಕರಣಗಳು 4 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು 20,688, ರಾಜಿ ಮುಖಾಂತರ ಇತ್ಯರ್ಥಪಡಿಸಿ ಒಟ್ಟು 11,47,73,768.60 ರು. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರಿನ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿದ್ದು, ಒಂದೇ ದಿನ ಒಟ್ಟು 24,575 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.ಅವುಗಳಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು 19, ಚೆಕ್ಕು ಅಮಾನ್ಯ ಪ್ರಕರಣಗಳು 189, ಬ್ಯಾಂಕ್ / ಹಣ ವಸೂಲಾತಿ ಪ್ರಕರಣಗಳು 9, ಮೋಟಾರು ವಾಹನ ಕಾಯ್ದೆ ಪ್ರಕರಣಗಳು 80, ಸಿವಿಲ್ ಪ್ರಕರಣಗಳು 162, ಇತರೆ ಕ್ರಿಮಿನಲ್ ಪ್ರಕರಣಗಳು 3,423, ಕಾರ್ಮಿಕ ವ್ಯಾಜ್ಯ 1, ಮಣಿ ಮತ್ತು ಭೂವಿಜ್ಞಾನ ಪ್ರಕರಣಗಳು 4 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು 20,688, ರಾಜಿ ಮುಖಾಂತರ ಇತ್ಯರ್ಥಪಡಿಸಿ ಒಟ್ಟು 11,47,73,768.60 ರು. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.ಮತ್ತೆ ಒಂದಾದರು ದಂಪತಿ:

ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ, ಜೀವನಾಂಶ ಕೋರಿ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿತ್ತು. ನ್ಯಾಯಾಧೀಶರ ಹಾಗೂ ನ್ಯಾಯಾಧೀಶರೇತರ ಸಂಧಾನಕಾರರ ಸಲಹೆ ಮತ್ತು ಮಾರ್ಗದರ್ಶನದಂತೆ ಸುಮಾರು 8 ವರ್ಷಗಳಿಂದ ದೂರವಿದ್ದ ಈ ದಂಪತಿಗಳು 3,00,000 ರು.ಗಳ ಜೀವನಾಂಶಕ್ಕೆ ರಾಜೀಯಾಗಿ ತಮ್ಮ ವೈವಾಹಿಕ ಜೀವನವನ್ನು ಒಟ್ಟಾಗಿ ಮುಂದುವರಿಸಲು ನಿರ್ಧರಿಸಿದರು.

ನ್ಯಾಯವಾದಿ ಹಿಲ್ಡಾ ಕ್ಯಾಸ್ತಲಿನೊ ಅರ್ಜಿದಾರರ ಪರ ಹಾಗೂ ವಿಜಯ್ ವಾಸು ಪೂಜಾರಿ ಎದುರುದಾರರ ಪರ ವಕಾಲತ್ತು ವಹಿಸಿದ್ದು, ಇಬ್ಬರೂ ಸಹ ಅರ್ಜಿದಾರರ ಹಾಗೂ ಎದುರುದಾರರ ಮನವೊಲಿಸಲು ಸಹಕರಿಸಿದರು.