ಕನ್ನಡಪ್ರಭ ವಾರ್ತೆ ಇಂಡಿ

ಇಂಡಿಯ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತದಲ್ಲಿ ೬೭೫೯ ಪ್ರಕರಣಗಳಲ್ಲಿ ೩೫೫೦ ಪ್ರಕರಣಗಳು ಇತ್ಯರ್ಥ ಗೊಂಡಿದ್ದು, ₹2 ಕೋಟಿಗೂ ಅಧಿಕ ಹಣ ಸರ್ಕಾರಕ್ಕೆ ಸಂದಾಯವಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ತಿಳಿಸಿದರು.

ತಾಲೂಕು ಸೇವಾ ಸಮಿತಿ ಇಂಡಿ ಇವರ ವತಿಯಿಂದ ನಡೆದ ರಾಷ್ಟ್ರೀಯ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಅಧ್ಯಕ್ಷರು ತಾಲೂಕು ಕಾನೂನು ಸೇವೆಗಳ ಸಮಿತಿ ಸುನೀಲಕುಮಾರ ಎಂ.ಎಸ್ ಮತ್ತು ಹೆಚ್ಚುವರಿ ದಿವಾಣಿ ನ್ಯಾಯಾಧೀಶ ವಿಕಾಸ ದಳವಾಯಿ ಮಾತನಾಡಿ, ರಾಜಿ ಮೂಲಕ ನ್ಯಾಯ ಇತ್ಯರ್ಥದಿಂದ ನ್ಯಾಯಾಲಯಗಳಿಗೆ ಅಲೆದಾಟ ತಪ್ಪುತ್ತದೆ. ಪರಸ್ಪರ ಸೌಹಾರ್ದ ಬೆಳೆಯುತ್ತದೆ. ಸಾರ್ವಜನಿಕರು ಸಹ ರಾಜಿ ಸಂಧಾನಕ್ಕೆ ಆದ್ಯತೆ ನೀಡಿ ಪ್ರಕರಣ ಇತ್ಯರ್ಥದ ಮೂಲಕ ನೆಮ್ಮದಿ ಜೀವನ ನಡೆಸಲು ಮುಂದೆ ಬರಬೇಕು ಎಂದರು.

ವಕೀಲರಾದ ಶಾಂತು ನಿಂಬರಗಿಮಠ, ವಿ.ಎಸ್. ಹಂಜಗಿ, ಎಸ್.ಕೆ. ತಮಶೆಟ್ಟಿ, ಜೆ.ವಿ. ಪಾಟೀಲ,ಎಸ್.ಆರ್. ಬಿರಾದಾರ, ಶ್ರೀಮತಿ ರಾಖಿ ಕಟ್ಟಿಮನಿ, ಎಂ.ಎಸ್. ಭೋಸಗಿ, ಮತ್ತು ರಾಷ್ಟ್ರೀಕೃತ ಬ್ಯಾಂಕಿನ ಎಲ್ಲ ವ್ಯವಸ್ಥಾಪಕರು, ಸಿದ್ದು ಹಾವಳಗಿ ಮತ್ತಿತರಿದ್ದರು.