ಲೋಕ್ ಅದಾಲತ್‌: 48,111 ಪ್ರಕರಣಗಳು ಇತ್ಯರ್ಥ

| Published : Mar 11 2025, 12:52 AM IST

ಸಾರಾಂಶ

Lok Adalat: 48,111 cases disposed of

-ಯಾದಗಿರಿಯಲ್ಲಿ ವಿವಿಧ ಪ್ರಕರಣಗಳ ಇತ್ಯರ್ಥಗೊಳಿಸಿದ ಜಿಲ್ಲಾ, ಸತ್ರ ನ್ಯಾಯಾಧೀಶೆ ಬಿ. ಎಸ್. ರೇಖಾ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಲೋಕ್ ಅದಾಲತ್‌ದಲ್ಲಿ 48,111 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ. ಎಸ್. ರೇಖಾ ಹೇಳಿದರು.

ಮಾ.8ರಂದು ಜಿಲ್ಲೆಯಾದ್ಯಂತ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 10 ಪೀಠಗಳ ರಚನೆ ಮಾಡಲಾಗಿತ್ತು ಎಂದು ತಿಳಿಸಿದ ಅವರು, ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ 43, ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 338, ಯಾದಗಿರಿ ಜೆ.ಎಂ.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 594, ಯಾದಗಿರಿ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 793, ಶಹಾಪೂರ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 357, ಶಹಾಪೂರ ಜೆ.ಎಂ.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 1032, ಶಹಾಪೂರ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 807, ಶಹಾಪೂರ ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯದಲ್ಲಿ 363, ಶಹಾಪೂರ ಜೆ.ಎಂ.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 416, ಸುರಪುರ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 466 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು ಎಂದರು.

ಜಿಲ್ಲಾದ್ಯಂತ ಒಟ್ಟಾರೆ 5 ಹಣ ವಸೂಲಿ ದಾವೆ, 33 ವಿಭಾಗ ಕೋರಿದ ದಾವೆಗಳು, 11 ನಿರ್ದಿಷ್ಟ ಹಕ್ಕುಗಳ ಪರಿಹಾರ ದಾವೆಗಳು, 2 ಅಂತಿಮ ಡಿಕ್ರಿ ಪ್ರಕರಣಗಳು, 15 ಚೆಕ್ ಅಮಾನ್ಯ ಪ್ರಕರಣಗಳು, 12 (ಜಾರಿ), 11 ಮೋಟಾರು ವಾಹನ ಅಪಘಾತ, 22 ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿ, 1 ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ 2622 ಜನನಕ್ಕೆ ಸಂಬಂಧಿಸಿದ ಪ್ರಕರಣಗಳ ಅರ್ಜಿ ಮತ್ತು 13 ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, 2332 ಲಘು ಪ್ರಕರಣಗಳು, ಹಾಗೂ 45 ಇತರೆ ಅಪರಾಧಿಕ ಪ್ರಕರಣಗಳು ಜಿಲ್ಲಾದ್ಯಂತ ಇತ್ಯರ್ಥಗೊಂಡವು ಎಂದು ಅವರು ತಿಳಿಸಿದರು.

ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 5,207 ಹಾಗೂ ವ್ಯಾಜ್ಯಪೂರ್ವ 42,904 (ಕಂದಾಯ, ಮೋಟರ್ ವಾಹನ ಕಾಯ್ದೆ ಉಲ್ಲಂಘನೆ ಮತ್ತು ಆಸ್ತಿ ತೆರಿಗೆ ಪಾವತಿಗೆ ನೀಡಲಾಗಿರುವ ಶೇ.5 ರಷ್ಟು ರಿಯಾಯಿತಿ) ಪ್ರಕರಣಗಳ ಸೇರಿ ಒಟ್ಟು 48,111 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಎಸ್. ರೇಖಾ ತಿಳಿಸಿದ್ದಾರೆ.

-----ಫೋಟೊ

ಮಾ.8ರಂದು ಲೋಕ್ ಅದಾಲತ್‌ನಲ್ಲಿ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಎಸ್. ರೇಖಾ ಅವರು ವಿವಿಧ ಪ್ರಕರಣಗಳ ಇತ್ಯರ್ಥಗೊಳಿಸಿದರು.

10ವೈಡಿಆರ್‌4