ನನೆಗುದಿಗೆ ಬಿದ್ದ ವ್ಯಾಜ್ಯಗಳ ವಿಲೇವಾರಿ ಲೋಕ ಅದಾಲತ್‌ ಸಹಕಾರಿ: ನ್ಯಾಯಾಧೀಶ ಸುನೀಲ್ ಎಸ್. ತಳವಾರ

| Published : Jul 16 2025, 12:45 AM IST

ನನೆಗುದಿಗೆ ಬಿದ್ದ ವ್ಯಾಜ್ಯಗಳ ವಿಲೇವಾರಿ ಲೋಕ ಅದಾಲತ್‌ ಸಹಕಾರಿ: ನ್ಯಾಯಾಧೀಶ ಸುನೀಲ್ ಎಸ್. ತಳವಾರ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಜ್ಯಗಳನ್ನು ಬಿಟ್ಟು ಸಮಾನತೆ, ಒಗ್ಗಟ್ಟಿನಿಂದ ಬಾಳಿದಾಗ ಶಾಂತಿ, ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ.

ಶಿಗ್ಗಾಂವಿ: ನನೆಗುದಿಗೆ ಬಿದ್ದಿರುವ ವ್ಯಾಜ್ಯಗಳ ಇತ್ಯರ್ಥಕ್ಕೆ ಲೋಕ ಅದಾಲತ್ ಸಹಕಾರಿಯಾಗಿದ್ದು, ವಿಚ್ಛೇದನ ಕೋರಿ ಪ್ರಕರಣ ದಾಖಲಿಸಿದ್ದ ತಾಲೂಕಿನ ಚಿಕ್ಕಮಣಕಟ್ಟಿ ಪರಸಪ್ಪ ಬಡಿಗೇರ ಅವರ ಪತ್ನಿ ಸುಜಾತಾ ಪರಸಪ್ಪ ಬಡಿಗೇರ ಅವರನ್ನು ರಾಜೀ ಮಾಡಿಸುವ ಮೂಲಕ ಒಟ್ಟಾಗಿ ಬಾಳುವಂತೆ ಮಾಡಲಾಯಿತು ಎಂದು ನ್ಯಾಯಾಧೀಶ ಸುನೀಲ್ ಎಸ್. ತಳವಾರ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿ, ವ್ಯಾಜ್ಯಗಳನ್ನು ಬಿಟ್ಟು ಸಮಾನತೆ, ಒಗ್ಗಟ್ಟಿನಿಂದ ಬಾಳಿದಾಗ ಶಾಂತಿ, ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ. ಹಿರಿಯ ನ್ಯಾಯಾಲಯದಲ್ಲಿ ಸುಮಾರು ೨೨೧ ಪ್ರಕರಣದಲ್ಲಿ ೨೧೩ ಪ್ರಕರಣಗಳನ್ನು ರಾಜೀ ಮಾಡಲಾಯಿತು. ವ್ಯಾಜ್ಯ ಪೂರ್ವ ೩೩೫೧ ಪ್ರಕರಣಗಳಲ್ಲಿ ೨೭೩೦ ಪ್ರಕರಣಗಳು ರಾಜೀ ಮಾಡಲಾಯಿತು ಎಂದರು.ಕಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ವಿನಿ ಚಂದ್ರಶೇಖರ ಮಾತನಾಡಿ, ಕಿರಿಯ ನ್ಯಾಯಾಲಯದಲ್ಲಿನ ಬಾಕಿ ಇರುವ ೪೧೪ ಪ್ರಕರಣಗಳಲ್ಲಿ ೪೦೫ ಪ್ರಕರಣಗಳು ರಾಜೀಯಾಗಿವೆ. ಅದೇ ರೀತಿ ವ್ಯಾಜ್ಯಪೂರ್ವ ೨೩೫೫ ಪ್ರಕರಣದಲ್ಲಿ ೧೮೧೬ ಪ್ರಕರಣಗಳು ರಾಜೀ ಮಾಡಿಸಲಾಯಿತು ಎಂದರು.ವಕೀಲರಾದ ಜಿ.ಕೆ. ಗುಂಜಾಳ, ಎನ್.ಎಂ. ಪವಾರ, ಕೆ.ಎಸ್. ಜೋಶಿ, ಎಸ್.ಜಿ. ಟೋಪಣ್ಣವರ ಇತರರು ಇದ್ದರು.ಮಟ್ಕಾ ದಂಧೆಗೆ ಕಡಿವಾಣ ಹಾಕಲು ಆಗ್ರಹ

ರಾಣಿಬೆನ್ನೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ಮಂಗಳವಾರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಮೇಶ ನಲ್ಲೂರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಕೊಟ್ರೇಶ ಗುತ್ತೂರ ಮಾತನಾಡಿ, ಯಾವುದೇ ಲಂಗು ಲಗಾಮಿಲ್ಲದೆ ಮಟ್ಕಾ ದಂಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಮಟ್ಕಾ ದಂಧೆಯಿಂದ ಅನೇಕ ಬಡ ಕುಟುಂಬಗಳು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಪ್ರಭು ಪೂಜಾರ, ಚೇತನ ಪೂಜಾರ, ಹಾಲೇಶಪ್ಪ ಸಾಲಕಟ್ಟಿ, ರಂಜಾನಸಾಬ್, ಹನುಮಂತಪ್ಪ ಮೆಡ್ಲೇರಿ, ಚಂದ್ರಶೇಖರ ಬಿ.ಪಿ., ಹಾಲೇಶ ಕರಡೆಪ್ಪನವರ, ಜಗದೀಶ ಪೂಜಾರ, ಬಸವರಾಜ ಮತ್ತಿತರರಿದ್ದರು.