ಲೋಕ ಚುನಾವಣೆ: ಜಿಲ್ಲೆಯಲ್ಲೇ ಕಾರ್ಕಳ, ಹೆಬ್ರಿ ತಾಲೂಕಲ್ಲಿ ಅತೀ ಹೆಚ್ಚು ಮತದಾನ

| Published : Apr 28 2024, 01:22 AM IST

ಲೋಕ ಚುನಾವಣೆ: ಜಿಲ್ಲೆಯಲ್ಲೇ ಕಾರ್ಕಳ, ಹೆಬ್ರಿ ತಾಲೂಕಲ್ಲಿ ಅತೀ ಹೆಚ್ಚು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಗಿಂತಲೂ ಈ ಬಾರಿ ಹೆಚ್ಚು ಮತದಾನವಾಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ (ಬೈಂದೂರು ತಾಲೂಕು ಹೊರತು ಪಡಿಸಿ) ಕಾರ್ಕಳ ತಾಲೂಕಿನಲ್ಲಿ ಹೆಚ್ಚು ಮತದಾನವಾಗಿದೆ. ಸ್ವೀಪ್ ಸಮಿತಿಗಳು ಸೇರಿದಂತೆ ಅಧಿಕಾರಿಗಳು ಮತದಾರರನ್ನು ಮತದಾನ ಕೇಂದ್ರಗಳ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮ್ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾರ್ಕಳ, ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಶೇ.79.66 ಮತದಾನವಾಗಿದೆ. ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಗಿಂತಲೂ ಈ ಬಾರಿ ಹೆಚ್ಚು ಮತದಾನವಾಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ (ಬೈಂದೂರು ತಾಲೂಕು ಹೊರತು ಪಡಿಸಿ) ಕಾರ್ಕಳ ತಾಲೂಕಿನಲ್ಲಿ ಹೆಚ್ಚು ಮತದಾನವಾಗಿದೆ. ಸ್ವೀಪ್ ಸಮಿತಿಗಳು ಸೇರಿದಂತೆ ಅಧಿಕಾರಿಗಳು ಮತದಾರರನ್ನು ಮತದಾನ ಕೇಂದ್ರಗಳ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ಎಲ್ಲೆಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 209 ಬೂತ್‌ಗಳಲ್ಲಿ 92864 ಪುರುಷ ಮತದಾರರು ಹಾಗೂ 100648 ಮಹಿಳಾ ಮತದಾರರು ಸೇರಿ ಒಟ್ಟು 193512 ಮಂದಿ ಮತದಾನಕ್ಕೆ ಅರ್ಹರಾದವರಿದ್ದಾರೆ. ಆ ಪೈಕಿ ಕಾರ್ಕಳದಲ್ಲಿ ಒಟ್ಟು 73352 ಪುರುಷ ಮತಗಳು, 80802 ಮಹಿಳಾ ಮತಗಳು ಚಲಾವಣೆಯಾಗಿವೆ. ಪುರುಷ ಮತದಾನದ ಶೇ.78.99 ಹಾಗೂ ಮಹಿಳಾ ಮತದಾನದ ಶೇ.80.28 ಆಗಿದ್ದು, ಒಟ್ಟು ಶೇ.79.66 ಮತದಾನವಾಗಿದೆ.

ಕಾರ್ಕಳ ವಿಧಾನಸಭಾ ವ್ಯಾಪ್ತಿಯ 9ನೇ ಮತಗಟ್ಟೆಯಾದ ಹೆಬ್ರಿ ಗ್ರಾಮದ ಬಂಗಾರುಗುಡ್ಡೆ ಮತಗಟ್ಟೆಯಲ್ಲಿ 283 ಪುರುಷ ಮತದಾರರು ಹಾಗೂ 330 ಮಹಿಳಾ ಮತದಾರರು ಸೇರಿದಂತೆ ಒಟ್ಟು 613 ಮತದಾರರಿದ್ದಾರೆ. ಆ ಪೈಕಿ 248 ಪುರುಷ ಮತದಾರರು ಹಾಗೂ 304 ಮಹಿಳಾ ಮತದಾರರು ಮತಚಲಾಯಿಸಿ ಒಟ್ಟು 552 ಮತದಾರರು ಮತದಾನ ಮಾಡುವ ಮೂಲಕ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು ಶೇ.90.5 ಮತದಾನವಾಗಿದೆ.

ಕಾರ್ಕಳ ಪುರಸಭಾ ವ್ಯಾಪ್ತಿಯ 101ನೇ ಮತಗಟ್ಟೆಯಲ್ಲಿ 283 ಪುರುಷ ಮತದಾರರು ಹಾಗೂ 330 ಮಹಿಳಾ ಮತದಾರರು ಸೇರಿದಂತೆ ಒಟ್ಟು 681 ಮತದಾರರಿದ್ದು, ಆ ಪೈಕಿ 236 ಪುರುಷ ಮತದಾರರು ಹಾಗೂ 236 ಮಹಿಳಾ ಮತದಾರರು ಮತಚಲಾಯಿಸಿ ಒಟ್ಟು 472 ಮತದಾರರು ಮತದಾನ ಮಾಡುವ ಮೂಲಕ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಶೇ.69.31 ಮತದಾನವಾಗಿದೆ.

ಮಿಯ್ಯಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಲೆಟ್ ವೋಟಿಂಗ್ 1 ಮತ ಚಲಾವಣೆ ಮಾಡಲಾಗಿದೆ.

* ಲಡ್ಡು ಹಂಚಿ ಖುಷಿ ಪಟ್ಟರು:

ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್, ಡಿ ಮಸ್ಟರಿಂಗ್ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಕಾರ್ಕಳ ತಹಸೀಲ್ದಾರ್ ಅವರ ತಂಡ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳ ತಂಡಕ್ಕೆ ಚಾಕಲೇಟ್ ಹಾಗೂ ಲಾಡು ಹಂಚಿ ಸಂಭ್ರಮಿಸಿದ್ದಾರೆ. ಆ ಮೂಲಕ ಕರ್ತವ್ಯ ನಿರತ ಶಿಕ್ಷಕರು, ಪೊಲೀಸ್ ಇಲಾಖಾ ಅಧಿಕಾರಿಗಳ ಪ್ರೀತಿಯನ್ನು ಗೆದ್ದಿದ್ದಾರೆ.ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ವೀಪ್ ಸಮಿತಿ ಹಾಗೂ ಸ್ಥಳೀಯಾಡಳಿತಗಳ ಮೂಲಕ ಪರಿಣಾಮಕಾರಿಯಾಗಿ ಮತದಾನದ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಬಿಎಲ್‌ಒಗಳು, ಅಧಿಕಾರಿಗಳು ಸಾಥ್ ನೀಡಿದ್ದಾರೆ.

। ಔದ್ರಾಮ, ಸಹಾಯಕ ಚುನಾವಣಾ ಅಧಿಕಾರಿಗಳು ಕಾರ್ಕಳ

-----------------ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಬಿಎಲ್‌ಒಗಳು, ಅಧಿಕಾರಿಗಳ ತಂಡ ಹಗಲಿರುಳು ಶ್ರಮಿಸಿದ್ದಾರೆ. ಅದರ ಯಶಸ್ಸಿನ ಫಲವಾಗಿ ಉತ್ತಮ ಫಲಿತಾಂಶ ದಾಖಲಾಗಿದೆ.। ನರಸಪ್ಪ, ಕಾರ್ಕಳ ತಹಸೀಲ್ದಾರ್‌