ಲೋಕಸಭಾ ಚುನಾವಣೆ: ಮತಗಟ್ಟೆಯತ್ತ ತೆರಳಿದ ಅಧಿಕಾರಿಗಳು, ಸಿಬ್ಬಂದಿ

| Published : Apr 26 2024, 12:48 AM IST

ಲೋಕಸಭಾ ಚುನಾವಣೆ: ಮತಗಟ್ಟೆಯತ್ತ ತೆರಳಿದ ಅಧಿಕಾರಿಗಳು, ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ 192 ಕೃಷ್ಣರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 261 ಮತಗಟ್ಟೆಗಳಿದ್ದು ಇದರಲ್ಲಿ 5 ಮಹಿಳಾ ಸಿಬ್ಬಂದಿ ಒಳಗೊಂಡ ಪಿಂಕ್ ಮತಗಟ್ಟೆಗಳು. 68 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ 1500 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಬಸ್ ಮತ್ತು ಜೀಪುಗಳ ಮೂಲಕ ನಿಗಧಿತ ಮತಗಟ್ಟೆಗಳಿಗೆ ನಿಯೋಜಿತರನ್ನು ತಲುಪಿಸಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಂಡ್ಯ ಲೋಕಸಭಾ ಮತದಾನಕ್ಕಾಗಿ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಿಂದ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಯಂತ್ರಗಳು ಮತ್ತು ಚುನಾವಣಾ ಪರಿಕರಗಳೊಂದಿಗೆ ನಿಗಧಿತ ಮತಗಟ್ಟೆಗಳಿಗೆ ತೆರಳಿದರು.

ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಉಸ್ತುವಾರಿಯಲ್ಲಿ ಮತದಾನಕ್ಕೆ ಅಗತ್ಯವಾದ ಮತ ಯಂತ್ರಗಳು ಮತ್ತು ಚುನಾವಣಾ ಪರಿಕರಗಳನ್ನು ಯಾವುದೇ ಗೊಂದಲಗಳಿಲ್ಲದಂತೆ ವಿತರಿಸಲಾಯಿತು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ 192 ಕೃಷ್ಣರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 261 ಮತಗಟ್ಟೆಗಳಿದ್ದು ಇದರಲ್ಲಿ 5 ಮಹಿಳಾ ಸಿಬ್ಬಂದಿ ಒಳಗೊಂಡ ಪಿಂಕ್ ಮತಗಟ್ಟೆಗಳು. 68 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ 1500 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಬಸ್ ಮತ್ತು ಜೀಪುಗಳ ಮೂಲಕ ನಿಗಧಿತ ಮತಗಟ್ಟೆಗಳಿಗೆ ನಿಯೋಜಿತರನ್ನು ತಲುಪಿಸಲಾಯಿತು.

ಯಾವುದೇ ಗೊಂದಲಗಳಿಲ್ಲದೆ ಮತಯಂತ್ರಗಳು ಮತ್ತು ಚುನಾವಣಾ ಪರಿಕರಗಳನ್ನು ತೆಗೆದುಕೊಂಡ ಮತಗಟ್ಟೆ ಅಧಿಕಾರಿಗಳು ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು ಉತ್ಸಾಹದಿಂದಲೇ ನಿಗಧಿತ ಮತಗಟ್ಟೆಗಳಿಗೆ ತೆರಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ 1,30,744 ಪುರುಷರು, 1,29,913 ಮಹಿಳೆಯರು ಸೇರಿದಂತೆ ಒಟ್ಟು 2,60,657 ಮತದಾರರಿದ್ದಾರೆ. ಇದರಲ್ಲಿ 1542 ವಿಶೇಷ ಚೇತನ ಮತದಾರರಿಗೆ ಮತದಾನ ಮಾಡಲು ವೀಲ್ ಚೇರ್ ವ್ಯವಸ್ತೆ ಮಾಡಲಾಗಿದೆ. 261 ಮತಗಟ್ಟೆಗಳಲ್ಲಿ 132 ಮತಗಟ್ಟೆಗಳನ್ನು ಸಿ.ಸಿ.ಟಿ.ವಿ ಪರಿವೀಕ್ಷಣೆಗೆ ಒಳಪಡಿಸಲಾಗಿದೆ.

ಪ್ರತೀ ಮತಗಟ್ಟೆಗೂ ಖುದ್ದು ಭೇಟಿ ನೀಡಿ ಚುನಾವಣಾ ಅಧಿಕಾರಿಗಳು ಪರಿಶೀಲಿಸಿದ್ದು ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದ್ದಾರೆ. ಏ.26 ರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಯೊಬ್ಬ ನಾಗರೀಕರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವಂತೆ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮನವಿ ಮಾಡಿದ್ದಾರೆ.