ಲೋಕಸಭಾ ಚುನಾವಣೆ: ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ

| Published : Mar 27 2024, 01:06 AM IST

ಲೋಕಸಭಾ ಚುನಾವಣೆ: ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಚಿಕ್ಕಬ್ಬಾರ ಗ್ರಾಮದ ಶ್ರೀ ರೇಣುಕಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ತಮ್ಮ ದೂರದ ಸಂಬಂಧಿಕರಿಗೆ ಪತ್ರ ಮುಖೇನ ಮತದಾನದ ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದರು.

ರಟ್ಟೀಹಳ್ಳಿ: ತಾಲೂಕಿನ ಚಿಕ್ಕಬ್ಬಾರ ಗ್ರಾಮದ ಶ್ರೀ ರೇಣುಕಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ತಮ್ಮ ದೂರದ ಸಂಬಂಧಿಕರಿಗೆ ಪತ್ರ ಮುಖೇನ ಮತದಾನದ ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಪ್ರಿಯಾಂಕ ಸಣ್ಣಅಣಜಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 100ಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ನಮ್ಮ ದೂರದ ದಾವಣಗೆರೆ, ಹಳ್ಳೂರ, ಹೊನ್ನಾಳ್ಳಿ, ಹಾವೇರಿ, ಶಿವಮೊಗ್ಗ, ಹಾನಗಲ್ಲ, ಶಿಗ್ಗಾಂವಿ, ಧಾರವಾಡದ ಸಂಬಂಧಿಕರಿಗೆ ಪತ್ರ ಬರೆಯುವ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಭೂಮಿಕಾ ಕಂಬಳಿ, ರೇಣುಕಾ ಕಂಬಳಿ, ಲತಾ ಸಣ್ಣತಾಯಿ, ಕವಿತಾ ಗೋಣಗೇರಿ, ಆಲಿಯಾ ಎಚ್.ಕೆ., ಕಲ್ಪನಾ ಹಾಲಿವಾಣದ, ತಜಡಿಯಾ ಕೋಟಿಹಾಳ್, ಸಿಂಧು ಸಣ್ಣತಾಯಿ, ಶೀಫಾ ದೊಡ್ಡಮನಿ, ಶಿವರಾಜ ಕಡಕಟ್ಟಿ, ವರುಣ ಪೂಜಾರ, ಭರತ ಮಲ್ನಾಡದ, ಭರತ ಸಣ್ಣತಾಯಿ, ನಾಗರಾಜ, ಕವಿತಾ ಗೋಣಗೇರಿ, ಸಿಂಚನಾ ಮಲ್ಲೂರ, ನಯನಾ ಕೋಳಗಟ್ಟಿ, ಯಾಸಮೀನ ಅಂತರವಳ್ಳಿ, ಕವನಾ ಸಂಕ್ಲಿಪುರ, ರೂಪಾ ನಾಗೇನಹಳ್ಳಿ, ಸವಿತಾ ಕೋಟಿಹಾಳ, ಹೊನ್ನಮ್ಮ ಡಿ.ಕೆ., ಭೂಮಿಕಾ ಸಣ್ಣತಾಯಿ, ಸಾಹಿಲ್ ಬನ್ನಿಕೋಡ, ಹೊನ್ನುರಷಾ ಎಣ್ಣಿ, ಶಾಲಾ ಮುಖ್ಯೋಪಾಧ್ಯಾಯ ಜೆ.ಎನ್. ದೊಡ್ಡನಿಂಗಪ್ಪನವರ, ಒಮೇಶ ರೆಡ್ಡಿ, ಎನ್. ಎಚ್. ಸುಣಗಾರ, ನಾಗರಾಜ ಬೋಸ್ಲೆ, ಪ್ರವೀಣ ಕುಮಾರ, ಎಸ್.ಪಿ. ನೀರಲಗಿ ಹಾಗೂ ಶಾಲಾ ಸಿಬ್ಬಂದಿಗಳು ಇದ್ದರು.