ಮದ್ವಾಚಾರ್ಯರ ಸಂದೇಶಗಳು ಸರ್ವಕಾಲಿಕ ಮಾರ್ಗದರ್ಶಕವಾಗಿವೆ. ಅವರ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ, ಮಧ್ವಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರು ಒಬ್ಬರಾಗಿದ್ದಾರೆ ಎಂದು ನಿವೃತ್ತ ಶಿಕ್ಷಕ ಗುರುರಾಜ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಮದ್ವಾಚಾರ್ಯರ ಸಂದೇಶಗಳು ಸರ್ವಕಾಲಿಕ ಮಾರ್ಗದರ್ಶಕವಾಗಿವೆ. ಅವರ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ, ಮಧ್ವಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರು ಒಬ್ಬರಾಗಿದ್ದಾರೆ ಎಂದು ನಿವೃತ್ತ ಶಿಕ್ಷಕ ಗುರುರಾಜ ಜೋಶಿ ಹೇಳಿದರು.

ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಗಾಯತ್ರಿ ಭಜನಾ ಮಂಡಳಿ ಸಹಯೋಗದಲ್ಲಿ ಮಧ್ವಾಚಾರ್ಯರ ಜಯಂತಿ ನಿಮಿತ್ತ ಮಂಗಳವಾರ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ್ವೈತಮತ ಪ್ರತಿಪಾದಕರು, ಮಾಧ್ವಮತ ಪ್ರವರ್ತಕರಾದ ಮಧ್ವಾಚಾರ್ಯರು ಸುಮಾರು ೮ ಶತಮಾನಗಳ ಹಿಂದೆ ದೇಶದ ಉದ್ದಗಲಕ್ಕೂ ಸಂಚರಿಸಿ, ತಮ್ಮ ಸಿದ್ಧಾಂತ ಪ್ರಚಾರ ಮಾಡಿದರು, ೩೭ ಗ್ರಂಥಗಳನ್ನು ರಚಿಸಿ, ಕರ್ನಾಟಕವಲ್ಲದೆ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಅವರ ಅಸಂಖ್ಯ ಅನಯಾಯಿಗಳಿದ್ದಾರೆ ಎಂದು ತಿಳಿಸಿದರು.

ಮಧ್ವನವಮಿ ನಿಮಿತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನ, ಸತ್ಯನಾರಾಯಣ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಧ್ವಾಚಾರ್ಯರ ಭಾವಚಿತ್ರಕ್ಕೆ ಹೂವಿನ ಅಲಂಕಾರ, ವೆಂಕಟೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ರಾಘವೇಂದ್ರ ಮಠದ ಅರ್ಚಕ ಆನಂದಚಾರ್ಯ ಜಂಬಗಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಸಂಜೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವನವಮಿ ನಿಮಿತ್ತ ರಥೋತ್ಸವ ಜರುಗಿತು. ಸ್ಥಳೀಯ ಯುವಕ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಥೋತ್ಸದಲ್ಲಿ ಮಹಿಳೆಯರು, ವಿಪ್ರ ಸಮಾಜದವರು ಭಾಗವಹಿಸಿದ್ದರು.

ವಿಪ್ರ ಸಮಾಜದ ಮುಖಂಡರಾದ ಬಿ.ಡಿ. ಚಿನಗುಂಡಿ, ಬಿ.ಎಲ್. ಬಬಲಾದಿ, ಕೆ.ವಿ. ಕುಲಕರ್ಣಿ, ರಮೇಶ ಕುಲಕರ್ಣಿ, ಭೀಮಣ್ಣ ಜೋಶಿ, ಲಕ್ಷ್ಮೀಕಾಂತ ದೇಶಪಾಂಡೆ, ಗೋವಿಂದರಾವ ಕುಲಕರ್ಣಿ, ವೆಂಕಟೇಶ ಕಟ್ಟಿ, ಸಂತೋಷ ದೇಶಪಾಂಡೆ, ಮೋಹನರಾವ ಕುಲಕರ್ಣಿ, ಅಣ್ಣಾರಾವ ದೇಶಪಾಂಡೆ, ಪ್ರಲ್ಹಾದ ದೇಶಪಾಂಡೆ, ಸುಶೀಲೇಂದ್ರ ದೇಶಪಾಂಡೆ, ಪ್ರವೀಣ ಸೋಮಾಪುರ, ರಾಘವೇಂದ್ರ ಕುಲಕರ್ಣಿ, ವಿಜಯ ದೇಶಪಾಂಡೆ, ಕಿಟ್ಟು ಕುಲಕರ್ಣಿ, ರಾಹುಲ್ ಗೂಡೂರ, ಸಂತೋಷ ಕುಲಕರ್ಣಿ, ರಾಘವೇಂದ್ರ ಮುರಗೋಡ, ನಾಗರಾಜ ಕುಲಕರ್ಣಿ, ಪದ್ದು ದೇಶಪಾಂಡೆ, ಗಾಯತ್ರಿ ಭಜನಾ ಮಂಡಳಿ, ರಾಘವೇಂದ್ರ ಸೇವಾ ಸಮಿತಿ, ಗುರುಸಾರ್ವಭೌಮ ಯುವಕ ಮಂಡಳ ಸದಸ್ಯರು ಇದ್ದರು.