ರಬಕವಿ-ಬನಹಟ್ಟಿ ನಗರಸಭೆಗೆ ಲೋಕಾಯಕ್ತರ ಭೆಟ್ಟಿ

| Published : Jun 14 2024, 01:08 AM IST

ರಬಕವಿ-ಬನಹಟ್ಟಿ ನಗರಸಭೆಗೆ ಲೋಕಾಯಕ್ತರ ಭೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ರಾಮಪುರದಲ್ಲಿನ ನಗರಸಭೆ ಕಾರ್ಯಾಲಯ ಬಾಗಲಕೋಟೆಯ ಲೋಕಾಯಕ್ತ ಎಸ್ಪಿ ಎಸ್.ಎಸ್. ಚಿಟಗುಬ್ಬಿ ಭೆಟ್ಟಿ ನೀಡಿ ಪರಿಶೀಲಿಸಿದರು.

ಕನ್ನಡ ಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ರಾಮಪುರದಲ್ಲಿನ ನಗರಸಭೆ ಕಾರ್ಯಾಲಯ ಬಾಗಲಕೋಟೆಯ ಲೋಕಾಯಕ್ತ ಎಸ್ಪಿ ಎಸ್.ಎಸ್. ಚಿಟಗುಬ್ಬಿ ಭೆಟ್ಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸಭೆ ನಡೆಸಿ ನಂತರ ನಗರಸಭೆ ಕಡತಗಳ ಪರಿಶೀಲನೆ ಮಾಡಿ, ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಎಂದು ಸೂಚಿಸಿದರು. ನಂತರ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ ತಾಪಂ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಚಿಮ್ಮಡ ಗ್ರಾಮದ ಘನತಾಜ್ಯ ನಿರ್ವಹಣೆ ಘಟಕಕ್ಕೂ ಭೇಟಿ ನೀಡಿ ಅಲ್ಲಿನ ನಿರ್ವಹಣೆ ವೀಕ್ಷಿಸಿದರು.

ಪೌರಾಯುಕ್ತ ಜಗದೀಶ ಈಟಿ, ಕಿರಿಯ ಅಭಿಯತರ ವೈಶಾಲಿ ಹಿಪ್ಪರಗಿ, ಹಿರಿಯ ಆರೋಗ್ಯ ನಿರೀಕ್ಷಕ ಶೋಭಾ ಹೊಸಮನಿ, ಲೆಕ್ಕಪಾಲಕ ಮುತ್ತಪ್ಪ ಚೌಡಕಿ, ಕಿರಿಯ ಆರೋಗ್ಯ ನಿರಿಕ್ಷಕಿ ಸಂಗೀತಾ ಕೋಳಿ ಸೇರಿದಂತೆ ಇತರರು ಇದ್ದರು.