ಅರೇಹಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ

| Published : Jul 12 2024, 01:34 AM IST

ಸಾರಾಂಶ

ಬೆಂಗಳೂರಿನ ಉತ್ತರ ಭಾಗದ ದಾಸನಪುರ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್ -1 ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿಯ ಎನ್.ಎಂ ಜಗದೀಶ್ ಎಂಬುವವರ ಪೀಣ್ಯದ ನಿವಾಸದ ಮೇಲೆ ದಾಳಿ ನಡೆಯುತ್ತಿದ್ದಂತೆ, ಅರೇಹಳ್ಳಿ ಹೋಬಳಿಯ ವಾಟೇಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ನಂದಗೋಡನಹಳ್ಳಿಯ ಎನ್.ಎಂ ಜಗದೀಶರ ವಾಟೇಹಳ್ಳಿ ತೋಟದ ಮನೆಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಅರೇಹಳ್ಳಿ ಹೋಬಳಿಯ ವಾಟೇಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ನಂದಗೋಡನಹಳ್ಳಿಯ ಎನ್.ಎಂ ಜಗದೀಶರ ವಾಟೇಹಳ್ಳಿ ತೋಟದ ಮನೆಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಲೋಕಾಯುಕ್ತ ಎಸ್.ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ತಿರುಮಲೇಶ್, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು,ಶಿಲ್ಪ ಹಾಗು ಚಿಕ್ಕಮಗಳೂರಿನ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಉತ್ತರ ಭಾಗದ ದಾಸನಪುರ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್ -1 ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿಯ ಎನ್.ಎಂ ಜಗದೀಶ್ ಎಂಬುವವರ ಪೀಣ್ಯದ ನಿವಾಸದ ಮೇಲೆ ದಾಳಿ ನಡೆಯುತ್ತಿದ್ದಂತೆ, ಅರೇಹಳ್ಳಿ ಹೋಬಳಿಯ ವಾಟೇಹಳ್ಳಿಯ ಬಳಿ ಸ್ವಂತ ಜಮೀನು ಹಾಗು ಕಟ್ಟಡವನ್ನು ಹೊಂದಿದ್ದಾರೆ ಎನ್ನಲಾದ ಹಿನ್ನೆಲೆ ಗುರುವಾರ ಮುಂಜಾನೆ ಸುಮಾರು 6 ಘಂಟೆಯ ಹೊತ್ತಿಗೆ ಅಧಿಕಾರಿಗಳ ತಂಡ ವಾಟೆಹಳ್ಳಿಯ ನಿವಾಸದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.