- ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತರ ಕಾರ್ಯಾಚರಣೆ - - - ದಾವಣಗೆರೆ: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇರೆಗೆ ಬೆಸ್ಕಾಂ ಸಿವಿಲ್ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಆರ್.ಎಚ್. ಅರ್ಜುನ್ ಮನೆ, ಕಚೇರಿ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಗ್ಗೆಯೇ ದಿಢೀರ್ ದಾಳಿ ನಡೆಸಿದ್ದಾರೆ. ದಾವಣಗೆರೆ ಬೆಸ್ಕಾಂ ಕಚೇರಿ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಎಚ್.ಅರ್ಜುನ ಮನೆ, ಕಚೇರಿ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ದಾಳಿ ನಡೆಸಿ, ಶೋಧ ಕೈಗೊಂಡಿದ್ದಾರೆ. ನಿಟುವಳ್ಳಿ ಬಡಾವಣೆಯ ಕೊಠಡಿ ಹಾಗೂ ಬೆಸ್ಕಾಂ ಕಚೇರಿ ಹಾಗೂ ಶಿವಮೊಗ್ಗದ ಗೋಪಾಳದ ವಾಣಿಜ್ಯ ಮಳಿಗೆಗಳ ಸಂಕೀರ್ಣ, ರಿಪ್ಪನ್ ಪೇಟೆಯ ತಳಲೆ ಗ್ರಾಮದ ಬಳಿಯ ತೋಟದ ಮನೆಗಳ ಮೇಲೆ ದಾವಣಗೆರೆ- ಶಿವಮೊಗ್ಗ ಜಿಲ್ಲೆಗಳ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಮನೆ, ತೋಟದ ಮನೆ, ಭೂಮಿಗೆ ಸೇರಿದ ದಾಖಲೆ ಸೇರಿದಂತೆ ಮಹತ್ವದ ಲೆಕ್ಕಪತ್ರಗಳು, ವಿವಿಧ ದಾಖಲೆಗಳ ಪಡೆದಿದ್ದು, ಪರಿಶೀಲನೆ ಮುಂದುವರಿದಿದೆ. ಎಇಇ ಆರ್.ಎಚ್.ಅರ್ಜುನ್ ಅಪಾರ ಪ್ರಮಾಣದ ಆಸ್ತಿ ಗಳಿಕೆ ಬಗ್ಗೆ ದೂರಿನ ಹಿನ್ನೆಲೆ ದಾವಣಗೆರೆಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು, ಸಿಬ್ಬಂದಿ ತಂಡಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಕಾರ್ಯಾಚರಣೆ ಸಂಪೂರ್ಣ ಪೂರ್ಣಗೊಂಡ ನಂತರವಷ್ಟೇ ಪತ್ತೆಯಾದ ಆಸ್ತಿ ಹಾಗೂ ದಾಖಲೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗುವುದು. ಗುರುವಾರ ಸಂಜೆಯೂ ತನಿಖೆ, ಪರಿಶೀಲನೆ ಮುಂದುವರಿದಿತ್ತು. - - - -12ಕೆಡಿವಿಜಿ1.ಜೆಪಿಜಿ: ಆರ್.ಎಚ್.ಅರ್ಜುನ್ ಮತ್ತು ಅವರ ಮನೆ.
ಬೆಸ್ಕಾಂ ಎಇಇ ಮನೆ, ಕಚೇರಿ, ಫಾರಂ ಹೌಸ್ ಮೇಲೆ ದಾಳಿ
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇರೆಗೆ ಬೆಸ್ಕಾಂ ಸಿವಿಲ್ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಆರ್.ಎಚ್. ಅರ್ಜುನ್ ಮನೆ, ಕಚೇರಿ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಗ್ಗೆಯೇ ದಿಢೀರ್ ದಾಳಿ ನಡೆಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.