ಸಾರಾಂಶ
ತಾಲೂಕಿನ ತೋವಿನಕೆರೆ ಗ್ರಾಮದ ಟಿ.ಕೆ. ಮಹಮದ್ ಅವರ ಜಾಗದ ಈ ಸ್ವತ್ತು ಮಾಡಿಕೊಡುವಂತೆ ಕಾರ್ಯದರ್ಶಿ ಸುಮಾ ಹಾಗೂ ಬಿಲ್ ಕಲೆಕ್ಟರ್ ಅವರಿಗೆ ಕೇಳಿದಾಗ 8 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಈ ಸ್ವತ್ತು ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್ ತುಮಕೂರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ತಾಲೂಕಿನ ತೋವಿನಕೆರೆ ಗ್ರಾಮದ ಟಿ.ಕೆ. ಮಹಮದ್ ಅವರ ಜಾಗದ ಈ ಸ್ವತ್ತು ಮಾಡಿಕೊಡುವಂತೆ ಕಾರ್ಯದರ್ಶಿ ಸುಮಾ ಹಾಗೂ ಬಿಲ್ ಕಲೆಕ್ಟರ್ ಅವರಿಗೆ ಕೇಳಿದಾಗ 8 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಡತನದಲ್ಲಿ ಇದ್ದ ಮಹಮದ್ ಹಣವನ್ನು ನೀಡಲಾಗದೆ ತುಮಕೂರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ್ ಹಾಗೂ ಡಿವೈಎಸ್ಪಿ ಸಂತೋಷ್ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಕಾರ್ಯಪ್ರವೃತರಾಗಿ ಮಹಮದ್ ಅವರಿಂದ ಗುರುವಾರ ಬೆಳಿಗ್ಗೆ ತೋವಿನಕೆರೆ ಗ್ರಾಪಂಯ ಕಾರ್ಯದರ್ಶಿ ಸುಮಾ ಹಾಗೂ ಬಿಲ್ ಕಲೆಕ್ಟರ್ ಮಾರುತಿ ಅವರಿಗೆ ಹಣ ನೀಡುವ ಸಂದರ್ಭದಲ್ಲಿ ಬಲೆ ಬೀಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಸುರೇಶ್, ಸಲಿಂ ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)೧೬ ಕೊರಟಗರೆ ಚಿತ್ರ ೦೨;- ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಪಂಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿರುವುದು.