ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

| Published : Oct 15 2025, 02:07 AM IST

ಸಾರಾಂಶ

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಡಿವೈಎಸ್‌ಪಿ ಮಧುಸೂದನ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗಿನ ಜಾವ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಚಿನ್ನಾಭರಣ, ನಗದು ಹಾಗೂ ಆಸ್ತಿ ಪತ್ರ ಪತ್ತೆಯಾಗಿದೆ.

ಹಾವೇರಿ: ಜಿಲ್ಲೆಯ ರಾಣಿಬೆನ್ನೂರು ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಡಿವೈಎಸ್‌ಪಿ ಮಧುಸೂದನ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗಿನ ಜಾವ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಚಿನ್ನಾಭರಣ, ನಗದು ಹಾಗೂ ಆಸ್ತಿ ಪತ್ರ ಪತ್ತೆಯಾಗಿದೆ.

ರಾಣಿಬೆನ್ನೂರು ತಹಸೀಲ್ದಾರ್ ಕಚೇರಿಯ ಕಂದಾಯ ವೃತ್ತ ನಿರೀಕ್ಷಕ ಅಶೋಕ ಅರಳೇಶ್ವರ ಹಾಗೂ ಸವಣೂರ ತಾ.ಪಂ.ಇಒ ಬಸವರಾಜ ಶಿಡೇನೂರ ಮನೆ ಮೇಲೆ ದಾಳಿ ನಡೆದಿದೆ.ದಾಳಿ ಸಮಯದಲ್ಲಿ ಕಂದಾಯ ವೃತ್ತ ನಿರೀಕ್ಷಕ ಅಶೋಕ ಅರಳೇಶ್ವರ ಮನೆಯಲ್ಲಿ 1.35 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 13.55 ಲಕ್ಷ ಮೌಲ್ಯದ ಎರಡು ನಿವೇಶನಗಳು, 90 ಲಕ್ಷ ಮೌಲ್ಯದ ಎರಡು ಮನೆಗಳು, 22.51 ಲಕ್ಷ ಮೌಲ್ಯದ 11.20 ಎಕರೆ ಜಮೀನು ಸೇರಿ 1.26 ಕೋಟಿ ಸ್ಥಿರಾಸ್ತಿ ಹಾಗೂ ರು. 1.45.650 ನಗದು, 26.02.812 ಮೌಲ್ಯದ ಚಿನ್ನಾಭರಣಗಳು, 15 ಲಕ್ಷ ಮೌಲ್ಯದ ವಾಹನಗಳು, ಇತರೇ 57.42ಲಕ್ಷ ಚರಾಸ್ತಿಗಳು ಸೇರಿ 99.90.462 ಚರಾಸ್ತಿ ಪತ್ತೆಯಾಗಿವೆ. ಸವಣೂರು ತಾಲೂಕು ಪಂಚಾಯತ್‌ನಲ್ಲಿ ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಶಿಡೇನೂರ ಮನೆಯಲ್ಲಿ 1.67 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 15.07 ಲಕ್ಷ ಮೌಲ್ಯದ ಆರು ನಿವೇಶನಗಳು, 50 ಲಕ್ಷದ ಒಂದು ಮನೆ ಸೇರಿ 65.7 ಲಕ್ಷ ಸ್ಥಿರಾಸ್ತಿ, ರು. 4.450 ನಗದು, 48.97.279 ಮೌಲ್ಯದ ಚಿನ್ನಾಭರಣಗಳು, 13 ಲಕ್ಷ ಮೌಲ್ಯದ ವಾಹನಗಳು, ಇತರೇ 40.10 ಲಕ್ಷ ಸೇರಿ 92.11.279 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.