ಸಾರಾಂಶ
ಯಾದಗಿರಿ ಜಿಲ್ಲೆಯ ಸೈದಾಪೂರ ಗ್ರಾಮದ ಕಂದಾಯ ನಿರೀಕ್ಷಕರ ಕಚೇರಿ ಮತ್ತು ಗ್ರಾಪಂ ಕಾರ್ಯಾಲಯಗಳಿಗೆ ಯಾದಗಿರಿ ಕರ್ನಾಟಕ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರಾದ ಹಣಮಂತರಾಯ ಭೇಟಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಕುರಿತು ವಿಳಂಬ ಮಾಡುತ್ತಿದ್ದರೆ ಅಥವಾ ಕಚೇರಿಗಳಲ್ಲಿ ಲಂಚ ಕೇಳಿದರೆ ತಮ್ಮ ಗಮನಕ್ಕೆ ತರುವಂತೆ ಯಾದಗಿರಿ ಕರ್ನಾಟಕ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರಾದ ಹಣಮಂತ್ರಾಯ ಅವರು ತಿಳಿಸಿದರು.ಯಾದಗಿರಿ ಕರ್ನಾಟಕ ಲೋಕಾಯುಕ್ತ ಅಧೀಕ್ಷಕರು ಆ್ಯಂಟನಿ ಜಾನ್ ಜೆ. ಕೆ. ಅವರ ಮಾರ್ಗಸೂಚನೆ ಮೇರೆಗೆ ಜಿಲ್ಲೆಯ ಸೈದಾಪೂರ ಗ್ರಾಮದ ಕಂದಾಯ ನಿರೀಕ್ಷಕರ ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಕಚೇರಿಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಸೂಕ್ತ ಅರಿವು ಮೂಡಿಸಿದರು.
ಈ ವೇಳೆ ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಹಣಮಂತರಾಯ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು-1 ಹನಮಂತ ಸಣಮನಿ, ಪೊಲೀಸ್ ನಿರೀಕ್ಷಕರು-2 ಅರುಣ ಮುರುಗುಂಡಿ ಹಾಗೂ ಯಾದಗಿರಿ ಕರ್ನಾಟಕ ಲೋಕಾಯುಕ್ತ ಸಿಬ್ಬಂದಿಗಳಾದ ಸುರೇಶ ರೆಡ್ಡಿ, ರಾಮಾ ನಾಯಕ್, ಅಮರನಾಥ, ನವೀನಕುಮಾರ, ಮಲ್ಲಿಕಾರ್ಜುನ, ಮಲ್ಲಪ್ಪ, ಕಾಸಿ ಇತರರಿದ್ದರು.