ಸಾರಾಂಶ
ತಾಲೂಕಿನ ಉಚ್ಚಂಗಿ ಗ್ರಾಮದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಯಸಳೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿದ್ದಾರೆ.
ಸಕಲೇಶಪುರ: ತಾಲೂಕಿನ ಉಚ್ಚಂಗಿ ಗ್ರಾಮದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಯಸಳೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿದ್ದಾರೆ.
ಶನಿವಾರ ಗ್ರಾಮದ ಗುಪ್ತ ಕಾಫಿ ಎಸ್ಟೇಟ್‌ನಲ್ಲಿ ಕಾರ್ಮಿಕರು ಕೆಲಸ ಮಾಡುವ ವೇಳೆ ಕಾಣಿಸಿಕೊಂಡ ಕಾಳಿಂಗ ಸರ್ಪದ ಬಗ್ಗೆ ಯಸಳೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಸ್ಥಳಕ್ಕೆ ಚಂಗಡಿಹಳ್ಳಿ ಗ್ರಾಮದ ಉರುಗ ತಜ್ಞ ರವಿ ಎಂಬುವವರೊಂದಿಗೆ ಆಗಮಿಸಿದ ಅಧಿಕಾರಿಗಳು ಸತತ ಎರಡು ಗಂಟೆ ಅವಿರತ ಶ್ರಮದಿಂದ ಸುಮಾರು ೧೬ ಅಡಿ ಉದ್ದದ ಕಾಳಿಂಗವನ್ನು ಸೆರೆಹಿಡಿದು ಬಿಸಿಲೆ ಅಭಯಾರಣ್ಯಕ್ಕೆ ಬಿಡಲಾಯಿತು.