ಸಾರಾಂಶ
ತಾಲೂಕಿನ ಬೆಣಚಿಗೆರೆ ಗ್ರಾಮದಲ್ಲಿ ಮೇವು ಅರಸಿ ಬಂದ ಜಿಂಕೆ ಮರಿ ತೋಟದ ಬಾವಿಯಲ್ಲಿ ಬಿದ್ದಿದೆ. ಬಾವಿಯಲ್ಲಿ ನೀರು ಇಲ್ಲದಿರುವುದರಿಂದ ಜಿಂಕೆ ಜೀವಂತವಾಗಿ. ಮಂಗಳವಾರ ಬೆಳಿಗ್ಗೆ ತೋಟದ ಮಾಲೀಕ ರೇಣುಕಯ್ಯ ತೋಟಕ್ಕೆ ಹೋದ ಸಂದರ್ಭದಲ್ಲಿ ಜಿಂಕೆಯನ್ನು ಕಂಡು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಬೆಣಚಿಗೆರೆ ಗ್ರಾಮದಲ್ಲಿ ಮೇವು ಅರಸಿ ಬಂದ ಜಿಂಕೆ ಮರಿ ತೋಟದ ಬಾವಿಯಲ್ಲಿ ಬಿದ್ದಿದೆ. ಬಾವಿಯಲ್ಲಿ ನೀರು ಇಲ್ಲದಿರುವುದರಿಂದ ಜಿಂಕೆ ಜೀವಂತವಾಗಿ. ಮಂಗಳವಾರ ಬೆಳಿಗ್ಗೆ ತೋಟದ ಮಾಲೀಕ ರೇಣುಕಯ್ಯ ತೋಟಕ್ಕೆ ಹೋದ ಸಂದರ್ಭದಲ್ಲಿ ಜಿಂಕೆಯನ್ನು ಕಂಡು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.ಈ ಭಾಗದಲ್ಲಿ ಜಿಂಕೆಗಳು ಇಲ್ಲದಿದ್ದರೂ ಬಾವಿಯಲ್ಲಿ ಜಿಂಕೆ ಹೇಗೆ ಬಿದ್ದಿತು. ಉದ್ದೇಶಪೂರ್ವಕವಾಗಿಯೇ ಕೆಲವು ಕಿಡಿಗೇಡಿಗಳು ಜಿಂಕೆಯನ್ನು ಎಲ್ಲಿಂದಲೋ ತಂದು ಬಾವಿಗೆ ಹಾಕಿರುವ ಅನುಮಾನವಿದೆ ಎಂದು ಗ್ರಾಮದಲ್ಲಿ ಚರ್ಚೆಯಾಗುತ್ತಿದೆ. ಆಹಾರ ಅರಸಿ ಬಂದ ಜಿಂಕೆಮರಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿರುವ ಸಾಧ್ಯತೆ ಇದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕದಳದ ಸಹಕಾರದೊಂದಿಗೆ ಮಧ್ಯಾಹ್ನ ಜಿಂಕೆಮರಿಯನ್ನು ಬಾವಿಯಿಂದ ಮೇಲೆ ತೆಗೆದು ವೈದ್ಯಕೀಯ ತಪಾಸಣೆ ನೆಡಸಲಾಯಿತು. ಜಿಂಕೆ ಬಾವಿಗೆ ಬಿದ್ದಿರುವ ಬಗ್ಗೆ ಸೂಕ್ತ ತನಿಖೆ ನೆಡಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.