ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರ ಸೇರಿದಂತೆ ತಾಲೂಕಿನಾದ್ಯಂತ ಹನುಮ ಜಯಂತಿ ವಿಜೃಂಭಣೆಯಿಂದ ನೆರವೇರಿತು. ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಗರದ ಜ್ಯೋತಿನಗರದಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ, ಸಾಕ್ಷಿ ಆಂಜನೇಯ ಸ್ವಾಮಿ ದೇವಸ್ಥಾನ, ಗವಿ ಆಂಜನೇಯ ಸ್ವಾಮಿ ದೇವಸ್ಥಾನ, ಕೋಟೆಯ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ, ಕೆರೆಹಿಂದಲಹಟ್ಟಿಯ ಆಂಜನೇಯ ಸ್ವಾಮಿ ದೇವಸ್ಥಾನ, ಬನ್ನಿನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ, ಬಯಲು ಆಂಜನೇಯ ಸ್ವಾಮಿ ದೇವಸ್ಥಾನ, ಖಾಸಗಿ ಬಸ್ ನಿಲ್ದಾಣದ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧೆಡೆ ಹಾಗೂ ತಾಲೂಕಿನಾದ್ಯಂತ ಸಂಜೆವರೆಗೂ ಪೂಜಾ ಕಾರ್ಯಗಳು, ಅನ್ನಸಂತರ್ಪಣೆ, ದೇವರ ಉತ್ಸವ ನಡೆಯಿತು. ಜ್ಯೋತಿನಗರದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಆರ್.ಉಗ್ರೇಶ್, ನಗರಸಭೆ ಸದಸ್ಯೆ ತೇಜು, ಭಾನುಪ್ರಕಾಶ್, ಧರಣೇಶ್ ಗೌಡ, ಎಂ.ಎಲ್.ನಾಗರಾಜು, ರೂಪೇಶ್ ಕೃಷ್ಣಯ್ಯ, ಆರ್.ವಿ.ಪುಟ್ಟಕಾಮಣ್ಣ, ಗೌನಹಳ್ಳಿ ರವಿಕುಮಾರ್, ಅರ್ಚಕರಾದ ರಂಗನಾಥ್ ಕೋಟೆ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಪೂಜಾ ಕಾರ್ಯದಲ್ಲಿ ವಸಂತಕುಮಾರ್, ಮಣಿಕಂಠ, ನವೀನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಕೋಟೆ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆತಿಪಟೂರು: ನಗರದ ವ್ಯಾಸರಾಜ ಪ್ರತಿಷ್ಠಾಪಿತ ಕೋಟೆ ಶ್ರೀ ಆಂಜನೇಯಸ್ವಾಮಿಗೆ ಹನುಮದ್ವ್ರತದ ಪ್ರಯುಕ್ತ ವಿಶೇಷ ಪೂಜೆ ಹಾಗೂ ದೀಪಾರಾಧನೆ ನೆರವೇರಿತು. ನಂತರ ಪಂಚಾಮೃತ ಅಭೀಷೇಕ, ಪವಮಾನ ಸೂಕ್ತ ಪಾರಾಯಣ, ಮಹಾಪೂಜೆ, ಮಹಾಮಂಗಳಾರತಿ, ಅಷ್ಟಾವಧಾನ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಸ್ವಾಮಿಯವರ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.