ಶ್ರೀಕೃಷ್ಣ ನಮ್ಮೆಲ್ಲರ ಆದರ್ಶ ಪುರುಷ: ಜೆ.ಎನ್.ರಾಮಕೃಷ್ಣೇಗೌಡ

| Published : Aug 21 2025, 01:00 AM IST

ಸಾರಾಂಶ

ಶ್ರೀಕೃಷ್ಣನ ಜೀವನ ಸಂದೇಶ ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಸೂತ್ರದಂತೆ. ಅದರಲ್ಲಿಯೂ ಮುಂದಿನ ಪೀಳಿಗೆಗಳಿಗೆ ಈ ಸಂದೇಶವನ್ನು ರವಾನಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲೆ ಇದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜನರಿಗೆ ಸನ್ಮಾರ್ಗವನ್ನು ತೋರಿಸಿಕೊಟ್ಟ ಶ್ರೀಕೃಷ್ಣ ನಮ್ಮೆಲ್ಲರ ಆದರ್ಶ ಪುರುಷರಾಗಿದ್ದಾರೆ ಎಂದು ತಾಲೂಕಿನ ಹೇಮಗಿರಿ ಬಿಜಿಎಸ್ ಶಾಖಾಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ತಾಲೂಕಿನ ಹೇಮಗಿರಿ ಬಿಜಿಎಸ್ ಶಾಖಾಮಠದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ,

ಒಳ್ಳೆಯವರ ರಕ್ಷಣೆ ಭಗವಂತನಿಂದ ಮಾತ್ರ ಸಾಧ್ಯ. ಹಾಗೆಯೇ ದುಷ್ಟ ಶಿಕ್ಷಣೆ ಕೂಡ ಭಗವಂತನ ಕರ್ತವ್ಯ. ಈ ಎರಡು ಕರ್ತವ್ಯಗಳನ್ನು ಶ್ರೀಕೃಷ್ಣ ಸಮರ್ಪಕವಾಗಿ ನಿರ್ವಹಿಸಿದ್ದರು ಎಂದರು.

ಶ್ರೀಕೃಷ್ಣನ ಜೀವನ ಸಂದೇಶ ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಸೂತ್ರದಂತೆ. ಅದರಲ್ಲಿಯೂ ಮುಂದಿನ ಪೀಳಿಗೆಗಳಿಗೆ ಈ ಸಂದೇಶವನ್ನು ರವಾನಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲೆ ಇದೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಮಾತನಾಡಿ, ಮಹಾಭಾರತವನ್ನು ಒಬ್ಬೊಬ್ಬ ಮಹಾಕಾವ್ಯಗಳ ಬರಹಗಾರರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಆದರೆ, ಕುಮಾರವ್ಯಾಸ ಮಾತ್ರ ತಿಳಿಯ ಹೇಳುವೆ ಕೃಷ್ಣ ಕಥೆಯನು ಇಳೆಯ ಜಾಣರು ಮೆಚ್ಚುವಂದದಿ ಎನ್ನುವ ಮೂಲಕ ತಾನು ರಚಿಸಿದ ಭಾರತ ಕಥಾಮಂಜರಿಯನ್ನು ಶ್ರೀ ಕೃಷ್ಣ ಚರಿತ್ರೆ ಎಂದು ಕರೆಯುವ ಮೂಲಕ ಸ್ವತಃ ಅವರೆ ಹೊಸ ವ್ಯಾಖ್ಯಾನವನ್ನು ಬರೆದಿದ್ದಾರೆ ಎಂದರು.

ವೇದಿಕೆಯಲ್ಲಿ ಕಸಾಪ ತಾಲೂಕು ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್, ಗ್ರಾಪಂ ಸದಸ್ಯ ಆರ್.ಶ್ರೀನಿವಾಸ್, ಶಿಕ್ಷಣ ಪ್ರೇಮಿಗಳಾದ ಪಾಂಡವಪುರದ ಕೃಷ್ಣೇಗೌಡ, ನಾಗಸುಂದರ, ಮಧು, ತಾಲೂಕಿನ ಜಿ.ಪಿ. ರಾಜು, ಮನು ಮಾಕವಳ್ಳಿ, ವಿ.ಲೋಕೇಶ್, ರವಿ ಹೊನ್ನೇನಹಳ್ಳಿ ಮತ್ತಿತರರು ಇದ್ದರು.