ಆನಂದಪುರ ಬಳಿ ಕೋಳಿ ತುಂಬಿದ ಲಾರಿ ಪಲ್ಟಿ

| Published : Jul 02 2025, 11:52 PM IST / Updated: Jul 02 2025, 11:53 PM IST

ಸಾರಾಂಶ

ಕಡೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಕೋಳಿ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂಬಾಳ್ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಆನಂದಪುರ: ಕಡೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಕೋಳಿ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂಬಾಳ್ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಕಡೂರಿನಿಂದ ಫಾರಂ ಕೋಳಿ ತುಂಬಿದ ಲಾರಿ ಸಾಗರಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಆನಂದಪುರ ಸಮೀಪ ಸಾಗರ ರಸ್ತೆಯ ಮುಂಬಾಳ್ ಕೆರೆ ಏರಿಯ ಮೇಲೆ ಎದುರು ಬರುತ್ತಿರುವ ಬಸ್ಸನ್ನು ತಪ್ಪಿಸಲು ಹೋಗಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಸಾವನ್ನಪ್ಪಿದ ಕೋಳಿಗಳನ್ನು ಕೊಂಡ್ಯೊಯಲು ಸ್ಥಳೀಯರು ಮುಗಿಬಿದ್ದಿದ್ದರು.