ಶೃಂಗೇರಿಮಂಗಳೂರು ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಬಳಿ ಗುಲಗಂಜಿ ಕಿರು ಸೇತುವೆ ಮೇಲೆ ತಿರುವಿನಲ್ಲಿ ಬುಧವಾರ ರಾತ್ರಿ ಸರಕು ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಅಡ್ಡಲಾಗಿ ನಿಂತ ಪರಿಣಾಮ ಗುರುವಾರ ಮಧ್ಯಾಹ್ನದವರೆಗೂ ಶೃಂಗೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಶೃಂಗೇರಿ - ಮಂಗಳೂರು ಸಂಚಾರ ಬಂದ್ । ಪ್ರಯಾಣಿಕ ಪರದಾಟ.
ಕನ್ನಡಪ್ರಭ ವಾರ್ತೆ, ಶೃಂಗೇರಿಮಂಗಳೂರು ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಬಳಿ ಗುಲಗಂಜಿ ಕಿರು ಸೇತುವೆ ಮೇಲೆ ತಿರುವಿನಲ್ಲಿ ಬುಧವಾರ ರಾತ್ರಿ ಸರಕು ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಅಡ್ಡಲಾಗಿ ನಿಂತ ಪರಿಣಾಮ ಗುರುವಾರ ಮಧ್ಯಾಹ್ನದವರೆಗೂ ಶೃಂಗೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಮಂಗಳೂರು ಕಡೆಯಿಂದ ಸರಕು ತುಂಬಿಕೊಂಡು ಶೃಂಗೇರಿಯತ್ತ ಬರುತ್ತಿದ್ದ ಬೃಹತ್ ಲಾರಿ ಗುಲಗಂಜಿ ಸೇತುವೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಚಕ್ರಗಳು ಹೊಂಡಕ್ಕುರುಳಿ ಸಿಲುಕಿಹಾಕಿ ಕೊಂಡಾಗ ಲಾರಿ ರಸ್ತೆಗೆ ಅಡ್ಡಲಾಗಿ ನಿಂತಿದೆ. ಇದರಿಂದ ಶೃಂಗೇರಿ ಮಂಗಳೂರು ಕಡೆಯಿಂದ ಲಾರಿ, ಬಸ್ ಸಹಿತ ಎಲ್ಲಾ ವಾಹನ ಸಂಚಾರ ಸ್ಥಗಿತಗೊಂಡಿತು. ನಂತರ ಗುರುವಾರ ಮಧ್ಯಾಹ್ನ ಕ್ರೇನ್ ಮೂಲಕ ಲಾರಿ ಮೇಲೆತ್ತಿದ ನಂತರ ಶೃಂಗೇರಿ ಮಂಗಳೂರು ಸಂಚಾರ ಪುನಾರಂಭಗೊಂಡಿತು,ಕೆರೆಕಟ್ಟೆ ಬಳಿ ಗುಲಗಂಜಿ ಸೇತುವೆ ಹಾಗೂ ಕೊರ್ಕನ ಹಳ್ಳ ಎಂಬ 2 ಸೇತುವೆಗಳಿದ್ದು ಕಳೆದ ಕೆಲ ವರ್ಷಗಳಿಂದ ಸಂಪೂರ್ಣ ಶಿಥಿಲವಾಗಿ ಅಪಾಯದ ಸ್ಥಿತಿಯಲ್ಲಿದೆ. ಗುಲಗಂಜಿ ಸೇತುವೆ ತಿರುವು ಅಪಾಯಕಾರಿಯಾಗಿದ್ದು ನಿತ್ಯ ಸಂಚಾರಿಗಳ ಪಾಲಿಗೆ ಮೃತ್ಯು ಕೂಪವಾಗಿ ಪರಿಣಮಿಸಿದೆ. ಈ ತಿರುವಿನಲ್ಸಿ ವಾಹನಗಳು ನಿಯಂತ್ರಣ ತಪ್ಪಿದರೆ ನೇರವಾಗಿ ನದಿಗೆ ಉರುಳುತ್ತವೆ. ಅನೇಕ ವಾಹನಗಳು ಉರುಳಿ ,ಹಲವು ಜೀವಗಳ ಬಲಿಯಾಗಿವೆ.
ಸೇತುವೆಯ ರಸ್ತೆ ಕಿರಿದಾಗಿದೆ. ಸೇತುವೆ ದುರಸ್ತಿ ಕಾಣದೇ ಹಲವು ದಶಕಗಳೇ ಕಳೆದಿವೆ. ಇದು ರಾಷ್ಟ್ರೀಯ ಹೆದ್ದಾರಿ ಯಾಗಿರುವುದರಿಂದ ಪ್ರತಿನಿತ್ಯ ಈ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮಂಗಳೂರು, ಉಡುಪಿ, ಕೊಲ್ಲೂರು, ಧರ್ಮಸ್ಥಳ ಸೇರಿದಂತೆ ಗೋವಾ,ಕೇರಳ,ತಮಿಳುನಾಡು ಸೇರಿದಂತೆ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದು ರಸ್ತೆ ಕೂಡ ಆಗಿದೆ. ಸೇತುವೆ ದಿನೇ ದಿನೇ ಶಿಥಿಲಾವಸ್ಥೆಗೆ ತಲುಪುತ್ತಿದ್ದು ಶೃಂಗೇರಿ ಮಂಗಳೂರು ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಲಿದೆ.21 ಶ್ರೀ ಚಿತ್ರ 1-
ಶೃಂಗೇರಿ ಮಂಗಳೂರು ಸಂಪರ್ಕ ರಾ.ಹೆ.169 ರ ಕೆರೆಕಟ್ಟೆ ಬಳಿ ಗುಲಗಂಜಿ ಸೇತುವೆ ತಿರುವಿನಲ್ಲಿ ನಿಯಂತ್ರಣ ತಪ್ಪಿಅಡ್ಜಲಾಗಿ ನಿಂತ ಲಾರಿಯನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.