ಲಾರಿ ಮುಷ್ಕರ: ಎಂದಿನಂತೆ ವಹಿವಾಟು, ಸಾಗಾಣಿಕೆ

| Published : Apr 18 2025, 12:35 AM IST

ಸಾರಾಂಶ

ಎಳನೀರು ವಹಿವಾಟು ಎಂದಿನಂತೆ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ಎಳನೀರು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರುಏಷ್ಯಾ ಖಂಡದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆಯೆಂದು ಖ್ಯಾತಿಗಳಿಸಿರುವ ಪಟ್ಟಣ ಎಳನೀರು ಮಾರುಕಟ್ಟೆಗೆ ಲಾರಿ ಮುಷ್ಕರದ ಬಿಸಿ ತಟ್ಟಿಲ್ಲ. ಎಳನೀರು ವಹಿವಾಟು ಎಂದಿನಂತೆ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ಎಳನೀರು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಡೀಸೆಲ್ ದರ ಇಳಿಸುವುದು ಸೇರಿದಂತೆ ಹಲವು ಬೇಡಿಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಲಾರಿ ಮಾಲೀಕರು ಅನಿದಿಷ್ಟಾವಧಿ ಮುಷ್ಕರ ಕೈಗೊಂಡಿರುವುದರಿಂದ ರಾಜ್ಯದಲ್ಲಿ ಸರಕು ಸಾಗಾಣಿಕೆ ಅಸ್ತವ್ಯಸ್ತಗೊಂಡಿದ್ದರೂ ಸಹ ಮಾರುಕಟ್ಟೆಯಿಂದ ಎಳನೀರು ಸಾಗಾಣಿಕೆಗೆ ಯಾವುದೇ ರೀತಿಯ ಅಡ್ಡಿ ಉಂಟಾಗಿಲ್ಲ. ಮದ್ದೂರು, ಗುಡಿಗೆರೆ, ಕೆ.ಆರ್. ಪೇಟೆ, ಪಾಂಡವಪುರ ಹಾಗೂ ಮಂಡ್ಯ ಮಾರುಕಟ್ಟೆಯಿಂದ ದಿನನಿತ್ಯ 3 ಲಕ್ಷ ದಿಂದ 4 ಲಕ್ಷ ಎಳನೀರು ಉತ್ತರ ಪ್ರದೇಶ, ಮಧ್ಯಪ್ರದೇಶ, ಮುಂಬೈ, ಆಗ್ರಾ, ಆಂಧ್ರ, ಬೆಂಗಳೂರು ಸೇರಿದಂತೆ ಹಲೋ ಜಿಲ್ಲೆಗಳಿಗೆ ಎಳನೀರು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಹೊರ ರಾಜ್ಯಗಳಿಂದ ಎಳನೀರು ಸಾಗಾಣಿಕೆಗೆ ಬರುವ ಲಾರಿಗಳು ಹಗಲು ಹೊತ್ತಿನಲ್ಲಿ ಮಾರುಕಟ್ಟೆ ಆಸು ಪಾಸಿನಲ್ಲಿ ಬೀಡು ಬಿಟ್ಟಿರುತ್ತವೆ . ಸಂಜೆ ವೇಳೆಗೆ ಎಳನೀರನ್ನು ತುಂಬಿಕೊಂಡ ಲಾರಿಗಳು ರಾತ್ರಿ ವೇಳೆ ಕರ್ನಾಟಕದ ಗಡಿ ದಾಟಿ ಹೋಗುತ್ತಿರುವುದರಿಂದ ಎಳನೀರು ಸಾಗಾಣಿಕೆಗೆ ಯಾವುದೇ ರೀತಿಯ ಅಡ್ಡಿ ಉಂಟಾಗಿಲ್ಲ ಎಂದು ಎಳನೀರು ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ರವಿ ಚನ್ನಸಂದ್ರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.----------17ಕೆಎಂಎನ್ ಡಿ22ಲಾರಿ ಮುಷ್ಕರ ಮದ್ದೂರು ಎಳನೀರು ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಎಳನೀರು ಸಾಗಾಣಿಕೆ ನಡೆಯುತ್ತಿದೆ.