ಹಾಲಿನ ಪ್ರೋತ್ಸಾಹಧನ ಹೆಚ್ಚಳದಿಂದ ಒಕ್ಕೂಟಕ್ಕೆ ನಷ್ಟ

| Published : Oct 11 2025, 12:02 AM IST

ಸಾರಾಂಶ

ರೈತರಿಗೆ ಒಂದು ಲೀಟರ್ ಹಾಲಿಗೆ 2 ರು.ಹೆಚ್ಚಿಗೆ ಮಾಡಿದ್ದರಿಂದ ಒಕ್ಕೂಟಕ್ಕೆ ಲಾಸ್ ಆಗುತ್ತಿದೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಶಾಸಕ ಎಚ್.ವಿ. ವೆಂಕಟೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರೈತರಿಗೆ ಒಂದು ಲೀಟರ್ ಹಾಲಿಗೆ 2 ರು.ಹೆಚ್ಚಿಗೆ ಮಾಡಿದ್ದರಿಂದ ಒಕ್ಕೂಟಕ್ಕೆ ಲಾಸ್ ಆಗುತ್ತಿದೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಶಾಸಕ ಎಚ್.ವಿ. ವೆಂಕಟೇಶ್ ತಿಳಿಸಿದರು.ತಾಲೂಕಿನ ಹೇರೂರು ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ಏರ್ಪಡಿಸಿದ್ದ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾರ್ಯದರ್ಶಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗುಬ್ಬಿ ಪಶು ಆಹಾರ ಘಟಕದಲ್ಲಿ ಗುಣಮಟ್ಟದ ಫೀಡ್ಸ್ ಕೊಡುತ್ತಿಲ್ಲ ಎಂದು ಪ್ರತಿ ಸಭೆಯಲ್ಲಿಯೂ ಚರ್ಚೆ ನಡೆಯುತ್ತಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಇನ್ನೂ ಮುಂದಾದರೂ ಗುಣಮಟ್ಟದ ಪಶು ಆಹಾರ ತಯಾರಿಕೆ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, ಬಡವರ ಜೀವನಕ್ಕೆ ಆಧಾರವಾಗಿರುವ ಹೈನುಗಾರಿಕೆಯನ್ನು ಪ್ರತಿಯೊಬ್ಬರು ಅಭಿವೃದ್ಧಿ ಪಡಿಸಬೇಕು. ಎಲ್ಲಾ ಹಾಲು ಉತ್ಪಾದಕರು ಡೈರಿಗೆ ಹಾಲನ್ನು ಹಾಕುವ ಮೂಲಕ ಒಕ್ಕೂಟವನ್ನು ಬೆಳೆಸಲು ಸಹಕಾರ ನೀಡಬೇಕು. ಒಕ್ಕೂಟವು ನಿರಂತರ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ನಿವೃತ್ತಿ ಹೊಂದಿದ ಕಾರ್ಯದರ್ಶಿಗಳ ನಿವೃತ್ತಿ ವೇತನ 1 ಲಕ್ಷ ಇರುವುದನ್ನ 5 ಲಕ್ಷಕ್ಕೆ ಹೆಚ್ಚಳ ಮಾಡಲು ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಿಸಲಾಗುತ್ತದೆ. ಹಾಲನ್ನು ಡೈರಿಗೆ ಹಾಕುವ ಕುಟುಂಬದವರು ಅನಾರೋಗ್ಯದಿಂದ ಇದ್ದಾರೆ ಅವರಿಗೆ 25,000 ರೂಗಳು, ಸದಸ್ಯರು ಮರಣ ಹೊಂದಿದರೆ 50,000 ರೂಗಳನ್ನು ನೀಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಎಸ್ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 85ಕ್ಕೂ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ 1,85,000 ರೂ, 96 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಿಮ್ಮನಾಯಕ್, ಚಂದ್ರಶೇಖರ್ ಕೇದನೂರಿ, ವೆಂಕಟೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಯುಷಾ ತಾಸೀನ್, ಲಿಯಾಕತ್ ಅಲಿಖಾನ್, ಶಂಕರ್ ನಾಗ್, ಮಹೇಶ್, ರಾಜ್, ಶ್ವೇತಾ, ಸದಸ್ಯರಾದ ಮಹಮ್ಮದ್ ಸಾಧಿಕ್, ಕುಮಾರ್, ಇತರರಿದ್ದರು.