ಕನ್ನಡದ ಮೇಲಿನ ಪ್ರೀತಿ ನವೆಂಬರ್‌ಗೆ ಸೀಮಿತವಾಗದಿರಲಿ

| Published : Nov 02 2025, 03:45 AM IST

ಸಾರಾಂಶ

ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಬೇರೆ ಯಾವ ಭಾಷೆಯು ಸರಿಸಾಟಿಯಲ್ಲ.

ಹರಪನಹಳ್ಳಿ: ಕನ್ನಡದ ಮೇಲಿನ ಪ್ರೀತಿ ನವಂಬರ್‌ ತಿಂಗಳಿಗೆ ಸೀಮಿತವಾಗಬಾರದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಬೇರೆ ಯಾವ ಭಾಷೆಯು ಸರಿಸಾಟಿಯಲ್ಲ. ನೀವು ಸಹ ನವೆಂಬರ್ ಕನ್ನಡಿಗ ರಾಗಬೇಡಿ. ಕನ್ನಡ ಸದಾಕಾಲವೂ ನಮ್ಮ ಮನದಲ್ಲಿ ಅಚ್ಚಳಿಯದೇ ಮೂಡಲಿ ಎಂದರು.

ಹರಿದು ಹಂಚಿ ಹೋಗಿದ್ದ ಕನ್ನಡಿಗರ ನಾಡನ್ನು 1956ರಲ್ಲಿ ಐದು ಪ್ರಾಂತ್ಯಗಳನ್ನಾಗಿ ಸೇರಿಸಿದಾಗ ಒಂದು ರಾಜ್ಯವಾಗಿ ಹೊರಹೊಮ್ಮಿತು. ಕನ್ನಡನಾಡು ನುಡಿ ಜಲ ಸಂಪತ್ತನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲರ ಮೇಲೆ ಇದೆ ಎಂದು ಹೇಳಿದರು.

ತಹಶೀಲ್ದಾರ ಬಿ.ವಿ. ಗಿರೀಶಬಾಬು ಕನ್ನಡ ನಾಡು, ನುಡಿ, ಹಿರಿಮೆಯನ್ನು ಮರುಕಳಿಸುಲು ಎಲ್ಲರೂ ಮುಂದಾಗಬೇಕು. 1956ರ ನವೆಂಬರ್ 1 ರಂದು ಪ್ರಾದೇಶಿಕ ಭಾಷೆಗೆ ಅನುಗುಣವಾಗಿ ಕರ್ನಾಟಕ ಏಕೀಕರಣದ ಮೂಲಕ ಒಗ್ಗೂಡಿದ್ದು, ಅನೇಕ ಮಹನೀಯರ ಶ್ರಮದಿಂದ ನಾವು ಇಂದು ರಾಜ್ಯೋತ್ಸವವನ್ನು ಆಚರಣೆ ಮಾಡಲು ಸಾಧ್ಯವಾಗಿದೆ ಎಂದರು.

ಮುಂದಿನ ಯುವ ಪೀಳಿಗೆಯು ಕನ್ನಡ ರಕ್ಷಣೆ ಮಾಡುವ ಮೂಲಕ ಕನ್ನಡದಲ್ಲಿ ವ್ಯವಹಾರ ಮಾಡಿ ಕನ್ನಡದ ಹಿರಿಮೆಯನ್ನು ಹೆಚ್ಚಿಸಿ ಉಳಿಸಿ ಬೆಳೆಸಿ ಎಂದು ಸಲಹೆ ನೀಡಿದರು.

ಕನ್ನಡ ಭಾಷಾ ಶಿಕ್ಷಕಿ ಮುಮ್ತಾಜ್ ಬೇಗಂ ಕನ್ನಡ ಭಾಷೆಯನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಆಡಳಿತದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬಿ, ತಾಲೂಕು ಪಂಚಾಯ್ತಿ ಇಒ ವೈ.ಎಚ್. ಚಂದ್ರಶೇಖರ, ಬಿಇಒ ಎಚ್.ಲೇಪಾಕ್ಷಪ್ಪ, ಪುರಸಭಾ ಮುಖ್ಯಾಧಿಕಾರಿ ರೇಣುಕಾ ಎಸ್. ದೇಸಾಯಿ, ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕುಬೇರ ಗೌಡ್ರು, ಪುರಸಭಾ ಸದಸ್ಯರಾದ ಡಿ.ಅಬ್ದುಲ್ ರಹಮಾನಸಾಬ್, ಲಾಟಿ ದಾದಾಪೀರ್, ಮಂಜುನಾಥ ಇಜ್ಂತಕರ್, ಉದ್ದಾರ ಗಣೇಶ ಜೋಗಿನ ಭರತೇಶ, ನಿಂಗಮ್ಮ ಅಲೀಂ, ಜಿ.ನಾಗರಾಜ, ಮೊರಗೇರಿ ಹೇಮಣ್ಣ, ಸುಮ ಜಗದೀಶ್, ಕರವೇ ಅಧ್ಯಕ್ಷ ಗಿರಜ್ಜಿ ನಾಗರಾಜ, ಕುಬೇಂದ್ರ ನಾಯ್ಕ ಭೀಮಪ್ಪ ಉಪಸ್ಥಿತರಿದ್ದರು.