ಸಾರಾಂಶ
-ಎಸ್ ಜೆಎಂ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಕಾಲೇಜಿನಿಂದ ಕನ್ನಡ ರಾಜ್ಯೋತ್ಸವ ಸಮಾರಂಭ
------ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ, ಕನ್ನಡ ಎಂದರೆ ಒಂದು ಸುಂದರ ಅನುಭವ, ನಾಡು, ನುಡಿ ಹಲವಾರು ಆಯಾಮಗಳಲ್ಲಿ ಸಂಪದ್ಭರಿತವಾಗಿದ್ದು, ನರ್ಸಿಂಗ್ ಕಾಲೇಜಿನಲ್ಲಿ ರಾಜ್ಯದ ಜತೆ ಹಲವಾರು ವಿದ್ಯಾರ್ಥಿಗಳು ಹೊರ ರಾಜ್ಯಗಳಿಂದ ಅಭ್ಯಾಸ ಮಾಡಲು ಬಂದಿದ್ದು, ಕನ್ನಡ ಕಲಿಯುವದರ ಮೂಲಕ ಕನ್ನಡದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮಿ ಸಲಹೆ ನೀಡಿದರು.ನಗರದ ಎಸ್ ಜೆಎಂ ಇನ್ಸ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನಿಂದ ಬಿಚ್ಚುಗತ್ತಿ ಭರಮಣ್ಣ ನಾಯಕ ಸಭಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಕರ್ನಾಟಕವು ಎಲ್ಲ ಆಯಾಮಗಳಲ್ಲಿಯೂ ಒಂದು ಸುಂದರ ರಾಜ್ಯವಾಗಿದ್ದು ವಿಭಿನ್ನ ಭಾಷೆ, ಧರ್ಮ,ಜಾತಿ ವ್ಯವಸ್ಥೆ ಒಳಗೊಂಡಿದೆ. ನಮ್ಮ ವಿದ್ಯಾಪೀಠದಡಿ ಹಲವಾರು ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ವಿಭಿನ್ನ ರಾಜ್ಯಗಳ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಕನ್ನಡ ನಾಡಗೀತೆಯಲ್ಲಿರುವ ಪ್ರತಿ ಸಾಲಿನ ಪದಗಳು ಸಹ ಕನ್ನಡದ ಮಹತ್ವ ಸಾರಿ, ಸಾರಿ ಹೇಳುತ್ತವೆ. ಕನ್ನಡಿಗರಾಗಿರುವ ನಾವೇ ಧನ್ಯರು. ಕನ್ನಡ ಉಳಿಸಿ, ಬೆಳೆಸುವ ಜತೆಗೆ ಕನ್ನಡ ಬಳಸುವುದು ಅತೀ ಅವಶ್ಯಕ ಎಂದರು.
ನರ್ಸಿಂಗ್ ಕಾಲೇಜಿನ ಬೋಧಕ ಸಿಬ್ಬಂದಿಯವರು ಕನ್ನಡ ರಾಜ್ಯೋತ್ಸವದ ಮಹತ್ವ ಸಾರುವ ಸಂದೇಶ, ವೀಡಿಯೊ ಚಿತ್ರಗಳ ಮೂಲಕ ಅಳವಡಿಸಿರುವ ಕಿರು ಚಿತ್ರಕ್ಕೆ ಶ್ರೀಗಳು ಚಾಲನೆ ನೀಡಿದರು.ಜಾನಪದ ಲಾವಣಿಕಾರ ಗಂಜಿಗಟ್ಟೆ ಕೃಷ್ಣಮೂರ್ತಿ, ಕರ್ನಾಟಕದ ವಿಶಿಷ್ಟ ಆಚರಣೆಗಳು, ಧರ್ಮ, ಇತಿಹಾಸ, ಮಹನೀಯರು ನೀಡಿದ ಸಂದೇಶ, ಕಾಣಿಕೆಗಳನ್ನು ತಮ್ಮ ಲಾವಣಿ ಹಾಡುಗಳ ಮೂಲಕ ನೆರೆದಿದ್ದ ವಿದ್ಯಾರ್ಥಿಗಳಿಗೆ ಅರ್ಥೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ವಿ. ಸವಿತಾ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ತೋರದೆ ಪ್ರತಿಯೊಬ್ಬರೂ ಕನ್ನಡ ಮಾತನಾಡುವುದರ ಮೂಲಕ ಭಾಷೆಯ ಮೇಲಿರುವ ತಮ್ಮ ಅಭಿಮಾನ ಮೆರೆಯಬೇಕು ಮತ್ತು ಭಾಷಾಭಿಮಾನ ಬೇರೆಯವರಿಗೆ ಮೂಡಿಸುವಂತಹ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಬಸವರಾಜ .ಎನ್, ಸಹ ಪ್ರಾಧ್ಯಾಪಕರಾದ ಪವಿತ್ರ ಎಂ, ಮಹದೇಶ್ವರ ಎಸ್, ಬಿ.ಮಧು, ವೀರೇಶ್, ಮೋನಿಕಾ, ಯಶಸ್ವಿನಿ, ಸುಮಿತ್ರಾ, ಆಕಾಶ್, ಮೌನೇಶ್, ದಿವ್ಯಾ, ನಯನ,ಸುಮಯ, ಕುಸುಮ ಹಾಗೂ ಬೋಧಕೇತರ ಸಿಬ್ಬಂದಿಗಳಾದ ಲಿಂಗರಾಜು, ಕೀರ್ತಿಕುಮಾರ್, ಅಭಿಷೇಕ, ಬಸವರಾಜ, ಕುಮಾರಿ ಚಂದನ, ವಿವೇಕಾನಂದ, ನಾಗೇಂದ್ರಪ್ಪ,ಶ್ರುತಿ, ಕಾರ್ತಿಕ್ ಮುಂತಾದವರು ಹಾಜರಿದ್ದರು.
--ಫೋಟೊ:ನಗರದ ಎಸ್ ಜೆಎಂ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಕಾಲೇಜಿನಿಂದ 69 ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮಿ ಮಾತನಾಡಿದರು.
ಚಿತ್ರ 1,2