ತಂದೆ-ತಾಯಿಯಷ್ಟೇ ನಾಡಭಾಷೆ ಕನ್ನಡವನ್ನು ಪ್ರೀತಿಸಿ

| Published : Nov 02 2025, 04:15 AM IST

ತಂದೆ-ತಾಯಿಯಷ್ಟೇ ನಾಡಭಾಷೆ ಕನ್ನಡವನ್ನು ಪ್ರೀತಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ-ತಾಯಿ ಹಾಗೂ ಗುರು- ಹಿರಿಯರನ್ನು ಗೌರವಿಸುವಷ್ಟು ನಮ್ಮ ನಾಡಭಾಷೆ ಕನ್ನಡವನ್ನು ಪ್ರೀತಿಸಬೇಕು, ಗೌರವಿಸಬೇಕು, ಉಳಿಸಿ ಬೆಳೆಸಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ತಂದೆ-ತಾಯಿ ಹಾಗೂ ಗುರು- ಹಿರಿಯರನ್ನು ಗೌರವಿಸುವಷ್ಟು ನಮ್ಮ ನಾಡಭಾಷೆ ಕನ್ನಡವನ್ನು ಪ್ರೀತಿಸಬೇಕು, ಗೌರವಿಸಬೇಕು, ಉಳಿಸಿ ಬೆಳೆಸಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಬೀಳಗಿ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಕನ್ನಡ ಭಾಷೆ ಪ್ರೀತಿಸುವ ಭರಾಟೆಯಲ್ಲಿ ಇನ್ನುಳಿದ ಭಾಷೆಗಳನ್ನು ವಿರೋಧಿಸುವುದು ತರವಲ್ಲ. ಮನುಷ್ಯತ್ವ ಮೈಗೂಡಿಸಿಕೊಳ್ಳಿ ಹೊರತು ವೈರತ್ವವವನಲ್ಲ ಎಂದು ಹೇಳಿದರು. ನಾಡಹಬ್ಬ, ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು.

ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢ, ಕಾಲೇಜು ಶಾಲೆಗಳ ಆವರಣ ಸ್ವಚ್ಛವಾಗಿರಬೇಕು ಮತ್ತು ನೈಸರ್ಗಿಕ ಪರಿಸರದ ಸ್ವಚ್ಛತೆ ಕುರಿತು ವಿದ್ಯಾರ್ಥಿಗಳಿಗೆ ಪರಿಕಲ್ಪನೆ ಮೂಡಿಸುವ ಸದುದ್ದೇಶದಿಂದ ಶಾಸಕರ ಅನುದಾನದಲ್ಲಿ ಪ್ರತಿ ಶಾಲೆ, ಕಾಲೇಜುಗಳಿಗೆ ಒಂದು ಡಸ್ಟಬಿನ್ ಕೊಡಿಸುವುದಾಗಿ ಶಾಸಕ ಜೆ.ಟಿ.ಪಾಟೀಲ ಭರವಸೆ ನೀಡಿದರು.

ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಶಿಕ್ಷಕ- ಶಿಕ್ಷಕಿಯರು ಹಾಗೂ ಸಮಸ್ತ ನಾಗರಿಕರು ಬೆಳಗ್ಗೆ 8.15ಕ್ಕೆ ಪಟ್ಟಣದ ಚಾವಡಿ ಮುಂದೆ ಸೇರಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಚಿತ್ರದ ಮೆರವಣಿಗೆಯು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅಂಬೇಡ್ಕರ್ ವೃತ್ತ,ಗಾಂಧೀ ವೃತ್ತದ ಮಾರ್ಗವಾಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಬಂದು ತಲುಪಿತು. ಆದರ್ಶ ವಿದ್ಯಾಲಯದ ಶಿಕ್ಷಕ ಎಲ್.ಐ.ಮೇಲಿನಮನಿ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಸಾಧಕರಿಗೆ ತಾಲ್ಲೂಕಾ ಆಡಳಿತದ ಪರವಾಗಿ ಗೌರವಿಸಲಾಯಿತು.