ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ನಗರದಲ್ಲಿ ನ.10 ರಂದು ನಡೆಯಲಿರುವ ಇಂಡಿ ತಾಲೂಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನಕ್ಕೆ ಎಂ.ಜೆ.ಪಾಟೀಲ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನದ ಸಭೆಯಲ್ಲಿ ಎಂ.ಜೆ.ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದ್ದು, ತಾಲೂಕ ಅಧ್ಯಕ್ಷ ಬಿ.ಎಸ್.ಪಾಟೀಲ ಹಾಗೂ ಯುವ ಘಟಕದ ಅಧ್ಯಕ್ಷ ಎಸ್.ಐ.ಸುಗುರ, ಎಸ್.ಎಸ್.ಈರನಕೇರಿ, ಎಸ್.ಎಂ.ಮೇತ್ರಿ, ಸಿದ್ದಪ್ಪ ಬಗಲಿ, ಅಂಬಣ್ಣ ಸುಣಗಾರ, ಕೆ.ಜಿ.ನಾಟೀಕಾರ ಹಾಗೂ ಇತರರು ನಿವಾಸಕ್ಕೆ ತೆರಳಿ ಸನ್ಮಾನಿಸಿದರು.ಮೂಲತ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಎಂ.ಜೆ.ಪಾಟೀಲ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಇಂಡಿ
ನಗರದಲ್ಲಿ ನ.10 ರಂದು ನಡೆಯಲಿರುವ ಇಂಡಿ ತಾಲೂಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನಕ್ಕೆ ಎಂ.ಜೆ.ಪಾಟೀಲ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನದ ಸಭೆಯಲ್ಲಿ ಎಂ.ಜೆ.ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದ್ದು, ತಾಲೂಕ ಅಧ್ಯಕ್ಷ ಬಿ.ಎಸ್.ಪಾಟೀಲ ಹಾಗೂ ಯುವ ಘಟಕದ ಅಧ್ಯಕ್ಷ ಎಸ್.ಐ.ಸುಗುರ, ಎಸ್.ಎಸ್.ಈರನಕೇರಿ, ಎಸ್.ಎಂ.ಮೇತ್ರಿ, ಸಿದ್ದಪ್ಪ ಬಗಲಿ, ಅಂಬಣ್ಣ ಸುಣಗಾರ, ಕೆ.ಜಿ.ನಾಟೀಕಾರ ಹಾಗೂ ಇತರರು ನಿವಾಸಕ್ಕೆ ತೆರಳಿ ಸನ್ಮಾನಿಸಿದರು.ಮೂಲತ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಎಂ.ಜೆ.ಪಾಟೀಲ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 1947ರಲ್ಲಿ ಜನಿಸಿದ್ದು, ಎಂ.ಎ ಪದವಿಯನ್ನು ಪಡೆದಿದ್ದಾರೆ.1972 ರಿಂದ 2005 ವರೆಗೆ ಇಂಡಿಯ ಶ್ರೀ ಶಾಂತೇಶ್ವರ ಪಪೂ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1976 ರಲ್ಲಿ ಬೆನಕನಹಳ್ಳಿ ಗ್ರಾಮಕ್ಕೆ ಸಿದ್ದೇಶ್ವರ ಶ್ರೀಗಳನ್ನು ಅಹ್ವಾನಿಸಿ ಸಿದ್ದೇಶ್ವರ ದೇವಸ್ಥಾನದ ಜೀರ್ಣೊದ್ದಾರಕ್ಕಾಗಿ ಶ್ರಮಿಸಿದ್ದಾರೆ. ಇಂಡಿಯಲ್ಲಿ ರಾಷ್ಟ್ರೋತ್ಥಾನ ಬಳಗವನ್ನು ಪ್ರಾರಂಭಿಸಿ ,ಅದರ ಅಧ್ಯಕ್ಷರಾಗಿ,ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದು,ಇವರ ಹಿರಿತನವನ್ನು ಗುರುತಿಸಿ ಶಸಾಪ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.ಈ ಸಂದರ್ಭದಲ್ಲಿ ಮಾತನಾಡಿ ಶಸಾಪ ತಾಲೂಕು ಅಧ್ಯಕ್ಷ ಬಿ.ಎಸ್.ಪಾಟೀಲ, ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ತಯಾರಿ ನಡೆಸಲಾಗಿದೆ. ಇದಕ್ಕೆ ತಾಲೂಕಿನ ಸರ್ವರೂ ಸಹಾಯ, ಸಹಕಾರ ನೀಡಬೇಕು. ಇದು ಶರಣರ ಕುರಿತು ನಡೆಯುವಂತ ಸಮ್ಮೇಳನ. ಹೀಗಾಗಿ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.