ಹಿಂದಿ ದೇಶದ ಜನತೆಯನ್ನು ಬೆಸೆಯುತ್ತದೆ

| Published : Aug 06 2024, 12:37 AM IST

ಹಿಂದಿ ದೇಶದ ಜನತೆಯನ್ನು ಬೆಸೆಯುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿ ಕಲಿತರೆ ದೇಶದ ಬೇರೆ ಬೇರೆ ಭಾಗದಲ್ಲಿ ಸಂಚರಿಸಿ ವ್ಯವಹರಿಸಲು ನೆರವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಿಂದಿ ದೇಶದ ಜನತೆಯನ್ನು ಬೆಸೆಯುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ. ಮರಿಸ್ವಾಮಿ ಹೇಳಿದರು.

ನಗರದ ದೇವರಾಜ ಮೊಹಲ್ಲಾದ ದೇವರಾಜ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಿಂದಿ ಕಾರ್ಯಾಗಾರ 2024-25ನೇ ಸಾಲಿನ ಹಿಂದಿ ಫೋರಂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿ ಕಲಿತರೆ ದೇಶದ ಬೇರೆ ಬೇರೆ ಭಾಗದಲ್ಲಿ ಸಂಚರಿಸಿ ವ್ಯವಹರಿಸಲು ನೆರವಾಗುತ್ತದೆ. ಏಕೆಂದರೆ ದೇಶದ ಹೆಚ್ಚಿನ ಭಾಗದಲ್ಲಿ ಹಿಂದಿ ಬಳಕೆಯಲ್ಲಿದೆ. ದೇಶದ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಹಿಂದಿ ಅನಿವಾರ್ಯ.

ಶಿಕ್ಷಕ ಬಂಧುಗಳು ವಿದ್ಯಾರ್ಥಿಗಳಿಗೆ ಹಿಂದಿ ವಿಷಯದ ಜ್ಞಾನವನ್ನು ಇನ್ನೂ ಹೆಚ್ಚು ನೀಡುವಂತಾಗಬೇಕು. ಹಿಂದಿ ರಾಷ್ಟ್ರೀಯ ಭಾಷೆಯಾಗಿದ್ದು, ಭಾರತದ ಜೀವನ ಮೌಲ್ಯಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳ ವಾಹಕವಾಗಿದೆ ಎಂದರು.

ವಿಶ್ವದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿ ಮೂರನೇ ಸ್ಥಾನದಲ್ಲಿದೆ. ಬದಲಾದ ಪಠ್ಯಕ್ರಮದ ಪರಿಣಾಮಕಾರಿ ಬೋಧನೆಗೆ ಕಲಿಕಾ ಸಾಮಗ್ರಿ ಬಳಕೆ, ಹಾಡು, ನೃತ್ಯ ಮತ್ತು ನಾಟಕದಂತಹ ವಿಧಾನಗಳ ಬಳಕೆ ಅಗತ್ಯ. ಸಂಸ್ಕೃತದಲ್ಲಿ ಗರಿಷ್ಠ ಅಂಕಗಳಿಸುವ ಮಾದರಿಯಲ್ಲೇ ಹಿಂದಿಯಲ್ಲೂ ಉತ್ತಮ ಅಂಕ ಪಡೆಯುವಂತೆ ಶಿಕ್ಷಕರ ಬೋಧನೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಪಾಲಕರ ಸಹಭಾಗಿತ್ವದಿಂದ ಮಕ್ಕಳ ಕಲಿಕೆಯ ಸಾಮಥ್ಯ ಹೆಚ್ಚಿಸಬಹುದು ಎಂದುರ.

ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಐ. ರಮಾನಂದ, ಮೈಸೂರು ಹಿಂದಿ ಪೋರಂ ಅಧ್ಯಕ್ಷ ಪಂಡಿತ್ ಶಿಶುಪಾಲ್ ಗಾಂಧಿ, ಕಾರ್ಯದರ್ಶಿ ಎಂ. ಕೆ. ಜಾಕೀರ್, ಸಂಘಟನಾ ಕಾರ್ಯದರ್ಶಿ ಕೆ. ತನುಜಾ, ಸಲಹ ಸಮಿತಿ ಸದಸ್ಯರಾದ ಡಾ. ಮೋಹನ್ ಸಿಂಗ್, ಬಿ.ಎಸ್. ಆಶಾ, ಡಾ ಎಚ್.ಎಸ್. ಲಕ್ಷ್ಮೀ, ಪಿ.ಆರ್. ವಿಠಲ, ವಿ.ಎಂ. ರಾಘವೇಂದ್ರ, ಪ್ರವೀಣ್ ಹೂಗಾರ್, ಆಶಾಲತಾ, ನಜೀಮಾ, ಆರ್ಚನಾ ಗಜಿಬಿಯೇ ಹಾಗೂ ವಿದ್ಯಾರ್ಥಿಗಳು ಇದ್ದರು.