ಸಾರಾಂಶ
ದಿವಂಗತ ಎಂ.ರಮೇಶ ಹೆಸರಿನಲ್ಲಿ ಸ್ಥಾಪಿತವಾದ ಎಂ.ರಮೇಶ ಪ್ರಶಸ್ತಿಯನ್ನು ಹೆಗ್ಗೋಡಿನ ರಂಗಕರ್ಮಿ, ಸಂಗೀತ ಸಂಯೋಜಕ ಶ್ರೀಧರ ಹೆಗ್ಗೋಡು ಅವರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಶಿರಸಿ
ದಿವಂಗತ ಎಂ.ರಮೇಶ ಹೆಸರಿನಲ್ಲಿ ಸ್ಥಾಪಿತವಾದ ಎಂ.ರಮೇಶ ಪ್ರಶಸ್ತಿಯನ್ನು ಹೆಗ್ಗೋಡಿನ ರಂಗಕರ್ಮಿ, ಸಂಗೀತ ಸಂಯೋಜಕ ಶ್ರೀಧರ ಹೆಗ್ಗೋಡು ಅವರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಹಿರಿಯ ಕಲಾವಿದ ಕಿರಣ್ ಭಟ್ಟ ಪ್ರಶಸ್ತಿ ಪ್ರದಾನ ಮಾಡಿ, ಎಂ.ರಮೇಶ ಅವರು ಹೇಳಬೇಕಾದ್ದನ್ನು ನೇರವಾಗಿ ಹೇಳುವವರು. ಶಿರಸಿ ಭಾಗದ ಸಾಂಸ್ಕೃತಿಕ ಪ್ರತಿನಿಧಿಯಾಗಿ ರಮೇಶ ಇದ್ದಾರೆ. ಒಂದೊಳ್ಳೆ ನಗು, ಒಂದೊಳ್ಳೆ ಮಾತು, ಅವರ ಬಳಿ ಯಾವತ್ತೂ ಇರುತ್ತದೆ. ಇಂದು ಉತ್ತರ ಕನ್ನಡದ ರಂಗಭೂಮಿಗೆ ಸಂಬಂಧಿಸಿ ಈ ಪ್ರಶಸ್ತಿಯನ್ನು ಕೊಡುತ್ತಿರುವುದು ವಿಶೇಷ ಎಂದರು.
ಪ್ರಶಸ್ತಿ ಸ್ವೀಕರಿಸಿದ ಶ್ರೀಧರ, ಎಳೆಯ ವಯಸ್ಸಿನಲ್ಲೆ ರಂಗಭೂಮಿಯ ನಂಟು ನೀಡಿದ್ದು ಹೆಗ್ಗೋಡು. ಲೋಕದ ಮೇಲೆ ದೃಷ್ಟಿ ಇಟ್ಟು ಅರಿತರೆ ರಂಗದಲ್ಲಿ ಪುನರ್ ಸೃಷ್ಟಿಸಲು ಸಾಧ್ಯ. ರಂಗಭೂಮಿಯಲ್ಲಿ ಧ್ವನಿ ದೃಢಪಡಿಸಿಕೊಳ್ಳಬೇಕಿದೆ ಎಂದರು.ಹಿರಿಯ ಸಾಹಿತಿ ಡಿ.ಎಸ್.ನಾಯ್ಕ, ಟ್ರಸ್ಟಿ ವೈಶಾಲಿ ವಿ.ಪಿ.ಹೆಗಡೆ, ಪ್ರಜ್ಞಾ ಮತ್ತಿಹಳ್ಳಿ, ಮಧು ಹೆಗಡೆ, ವಿಜಯನಳಿನಿ ರಮೇಶ, ಮಹಿಮಾ ಹೆಗಡೆ ಉಪಸ್ಥಿತರಿದ್ದರು.