ಸಾರಾಂಶ
ಅಗಳಕುಪ್ಪೆ ಗ್ರಾಪಂಗೆ ಅಧ್ಯಕ್ಷರಾಗಿ ಎಂ.ಶೋಭಾ ಗಂಗರಾಜು
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ : ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಹಳೇ ನಿಜಗಲ್ ಗ್ರಾಮದ ಸದಸ್ಯೆ ಎಂ.ಶೋಭಾ ಗಂಗರಾಜು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹನುಮಂತರಾಜು ಘೋಷಿಸಿದರು.
ಈ ವೇಳೆ ಉಪಾಧ್ಯಕ್ಷೆ ಲಕ್ಷ್ಮೀದೇವಿ, ಗ್ರಾ.ಪಂ.ಸದಸ್ಯರುಗಳಾದ ಖಲೀಂಉಲ್ಲಾ, ಸತೀಶ್, ಹೊಸಳಯ್ಯ, ಸಿದ್ದರಾಮು, ಜಯಮ್ಮ, ವೆಂಕಟಾಚಲಯ್ಯ, ಮುಬೀನಾತಾಜ್, ವನಿತ, ಗಂಗಮ್ಮ, ಬಸವರಾಜು, ಸುಜಾತ, ಚೈತ್ರಾ, ಪುಷ್ಪಕಲಾ, ಪಾರ್ವತಿ, ಪಿಡಿಒ ಗಂಗಾಧರ್, ಕಾರ್ಯದರ್ಶಿ ಕೆಂಪರಂಗಯ್ಯ, ಸಿಬ್ಬಂದಿಗಳಾದ ವಿಶ್ವನಾಥ್, ಶ್ರೀನಿವಾಸ್, ರಂಗರಾಜು, ಸುಶೀಲಾ, ಹೇಮ, ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು ಇತರರಿದ್ದರು.ಪೋಟೋ 1 : ಅಗಳಕುಪ್ಪೆ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಎಂ.ಶೋಭಾಗಂಗರಾಜು ಅವಿರೋಧ ಆಯ್ಕೆಯಾಗಿದ್ದಕ್ಕೆ ಮುಖಂಡರು ಹಾಗೂ ಗ್ರಾ.ಪಂ.ಸದಸ್ಯರು ಶುಭಕೋರಿ ಅಭಿನಂದಿಸಿದರು.