ಎಂ.ಶ್ರೀನಿವಾಸ್ ಸರಳ ,ಸಜ್ಜನ ರಾಜಕಾರಣಿ: ಡಾ.ಕೆ.ಪಿ.ಅಂಶುಮಂತ್ ಶ್ಲಾಘನೆ

| Published : Feb 09 2025, 01:16 AM IST

ಎಂ.ಶ್ರೀನಿವಾಸ್ ಸರಳ ,ಸಜ್ಜನ ರಾಜಕಾರಣಿ: ಡಾ.ಕೆ.ಪಿ.ಅಂಶುಮಂತ್ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪ್ರವಾಸಿ ಮಂದಿರ ವೃತ್ತಕ್ಕೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಹೆಸರಿಟ್ಟಿರುವುದು ಸಕಾಲಿಕವಾಗಿದೆ. ಎಂ.ಶ್ರೀನಿವಾಸ್ ಅ‍ವರು ಸರಳ, ಸಜ್ಜನ ರಾಜಕಾರಣಿ ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಶ್ಲಾಘಿಸಿದರು.

ಪ್ರವಾಸಿ ಮಂದಿರ ವೃತ್ತಕ್ಕೆ ಎಂ.ಶ್ರೀನಿವಾಸ್ ಹೆಸರಿನ ನಾಮಫಲಕ ಅನಾವರಣ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರವಾಸಿ ಮಂದಿರ ವೃತ್ತಕ್ಕೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಹೆಸರಿಟ್ಟಿರುವುದು ಸಕಾಲಿಕವಾಗಿದೆ. ಎಂ.ಶ್ರೀನಿವಾಸ್ ಅ‍ವರು ಸರಳ, ಸಜ್ಜನ ರಾಜಕಾರಣಿ ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಶ್ಲಾಘಿಸಿದರು.

ಶುಕ್ರವಾರ ರಾತ್ರಿ ಪ್ರವಾಸಿ ಮಂದಿರ ವೃತ್ತಕ್ಕೆ ಎಂ.ಶ್ರೀನಿವಾಸ್ ವೃತ್ತ ಎಂಬ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ಎಂ.ಶ್ರೀನಿವಾಸ್ ಅವರು ಜನರಿಂದ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಊರಿನ ಅಭಿವೃಧ್ಧಿಗೆ ಶ್ರಮಿಸುತ್ತಿದ್ದಾರೆ. ಅವರು ಜಾತ್ಯಾತೀತ, ಧರ್ಮಾತೀತ, ಪಕ್ಷಾತೀತ, ಸರಳ ಸಜ್ಜನ ರಾಜಕಾರಿಣಿಯಾಗಿದ್ದಾರೆ. ನರಸಿಂಹ ರಾಜಪುರ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ತಂದು ಊರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಹೆಸರಿಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ. ಎಲ್ಲಾ ಪಕ್ಷದ ಸಚಿವರು, ಶಾಸಕರು ಪ್ರೀತಿಸುವಂತ ಏಕೈಕ ವ್ಯಕ್ತಿ ಎಂ.ಶ್ರೀನಿವಾಸ್ . ಅವರು ಹಿಡಿದ ಕೆಲಸ ಎಂದಿಗೂ ಅಪೂರ್ಣವಾಗಿರುವ ದಾಖಲೆಯೇ ಇಲ್ಲ. ಮುಖ್ಯ ರಸ್ತೆ ಅಗಲೀಕರಣ, ದೇವಸ್ಥಾನ, ಚರ್ಚ್, ಮಸೀದಿಗಳ ಜೀರ್ಣೋದ್ಧಾರ ಮಾಡಿ ತಮ್ಮ ಹುಟ್ಟೂರಿನ ಋಣ ತೀರಿಸುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲಾ ಧರ್ಮದವರಿಗೂ ಸಮಾನ ನ್ಯಾಯ ನೀಡಿ ನಮ್ಮೂರು ಸರ್ವ ಧರ್ಮದ ಶಾಂತಿಯ ತೋಟವನ್ನಾಗಿಸಿದ ಕೀರ್ತಿ ಎಂ.ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ ಎಂದರು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್. ಎಲ್.ಶೆಟ್ಟಿ ಮಾತನಾಡಿ, ಎಂ.ಶ್ರೀನಿವಾಸ್ ಕೋಟೆ ಶ್ರೀ ಆಂಜನೇಯ ಸ್ವಾಮಿ, ಕೋಟೆ ಶ್ರೀ ಮಾರಿಕಾಂಬ ದೇವಾಲಯ, ಹಯಾತ್ ಷಾವಲಿ ದರ್ಗಾ ಸೇರಿದಂತೆ ಅನೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ತಮ್ಮ ಹುಟ್ಟೂರಿಗೆ ಏನಾದರೊಂದು ಶಾಶ್ವತ ಕೊಡುಗೆ ನೀಡಬೇಕೆಂಬ ಹಂಬಲದಿಂದ ಸುಮಾರು 35 ಕೋಟಿಗೂ ಅಧಿಕ ವೆಚ್ಚದಲ್ಲಿ ಹೊನ್ನೇಕುಡಿಗೆ ಸಂಪರ್ಕ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ಪಪಂ ಸಭೆಯಲ್ಲಿ ಈ ವೃತ್ತಕ್ಕೆ ಎಂ.ಶ್ರೀನಿವಾಸ್ ವೃತ್ತ ಎಂದು ನಾಮಕರಣ ಮಾಡುವ ಪ್ರಸ್ತಾವನೆ ಮುಂದಿಟ್ಟಾಗ ಎಲ್ಲಾ ಪಕ್ಷದ ಸದಸ್ಯರೂ ಒಮ್ಮತದಿಂದ ಅಂಗೀಕಾರ ಮಾಡಿದ್ದಾರೆ ಎಂದರು.

ಕಾನೂನು ಪ್ರಕ್ರಿಯೆ ಮುಗಿದು ಇದೀಗ ಅವರ ಜನ್ಮ ದಿನದಂದೇ ಅಧಿಕೃತವಾಗಿ ನಾಮಕರಣ ಮಾಡಲಾಗಿದೆ. ಎಂ. ಶ್ರೀನಿವಾಸ್ ಅವರು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷರಾಗಿರುವುದರಿಂದ ಕೂಸ್ಗಲ್ ಬಳಿ ಜಂಗಲ್ ರೆಸಾರ್ಟ್ ನಿರ್ಮಾಣ, ಹೋಟೆಲ್ ನಿರ್ಮಾಣ, ವಾಟರ್ ಗೇಮ್ಸ್, ನೇಚರ್ ಕ್ಯಾಂಪ್ ಮಾಡುವ ಮಹದಾಸೆ ಇದ್ದು ಅವರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ. ಜೋಯಿ ಮಾತನಾಡಿ, ಪ್ರವಾಸಿ ಮಂದಿರ ವೃತ್ತ ಪಟ್ಟಣದ ಹೃದಯ ಭಾಗವಾಗಿತ್ತು, ಭದ್ರಾ ಮುಳುಗಡೆಯಾದ್ದರಿಂದ ತನ್ನ ವೈಭವ ಕಳೆದುಕೊಂಡಿತ್ತು. ಸುಸಜ್ಜಿತವಾದ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣ ಮಾಡಿ, ಈ ಭಾಗಕ್ಕೆ ಮತ್ತೆ ವೈಭವ ಮರುಕಳಿಸಿದ್ದಾರೆ ಎಂದರು.ಎಂ.ಶ್ರೀನಿವಾಸ್ ಅವರ ಜನ್ಮ ದಿನದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಾಚರಿಸಿದರು.ಪಪಂ ಸದಸ್ಯರಾದ ಮುನಾವರ್‌ ಪಾಷಾ, ಎನ್.ಎಲ್.ಮುಕುಂದ, ಮುಖಂಡ ಸೈಯದ್ ಸಾದಿಕ್‌ ಬಾಷಾ ಮಾತನಾಡಿದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಸುರಯ್ಯಭಾನು, ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಮುನಾವರ್‌ಪಾಷಾ, ಆರ್. ಕುಮಾರಸ್ವಾಮಿ, ಮುಕುಂದ, ಜುಬೇದಾ,ಶೋಜಾ, ಜಾಮಿಯಾ ಮಸೀದಿ ಅಧ್ಯಕ್ಷ ನಾಸಿರ್, ಅಲ್ನೂರ್ ಮಸೀದಿ ಅಧ್ಯಕ್ಷ ಜಲೀಲ್, ಸವಿತಾ ಸಮಾಜದ ಅಧ್ಯಕ್ಷ ಕುಮಾರ, ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಮನು, ಕೆ.ಎ.ಅಬೂಬೇಕರ್, ಸುನೀಲ್‌ ಕುಮಾರ್, ಅಂಜುಂ.ಎಂ.ಮಹೇಶ್,ಸಾಧಿಕ್,ಶ್ರೀಧರಪಾನಿ, ಸುನೀಲ್‌ಕುಮಾರ್, ಬಿನು, ಎಚ್.ಎಂ.ಶಿವಣ್ಣ, ಸುರೇಶ್, ಸುಬ್ರಮಣ್ಯ ಇದ್ದರು.