ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿವೆ.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಅಕ್ರಮ ಮದ್ಯ ಮಾರಾಟದ ವಿರುದ್ದ ಸಿಡಿದ ಮಹಿಳೆಯರು ಮದ್ಯ ಮಾರಾಟದಿಂದ ಅಪ್ರಾಪ್ತ ಹಾಗೂ ಬಡ ಮಕ್ಕಳು ಹಾಳಾಗುವ ಕುರಿತು ಅಬಕಾರಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ ಕೂಡಲೇ ಅಕ್ರಮ ಮದ್ಯ ಮಾರಾಟ ನಿಷೇಧ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಮಾಚನೂರು ಗ್ರಾಮದ ಮಹಿಳೆಯರು ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು.ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳು ಎಲ್ಲೇಂದರಲ್ಲೆ ತಲೆ ಎತ್ತಿವೆ. ಸರಳ ಇದರಿಂದ ಗ್ರಾಮದ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದು ಸಣ್ಣ ಮಕ್ಕಳೂ ಮದ್ಯ ವ್ಯಸನಿಗಳಾಗುತ್ತಿದ್ದು, ಬಡ ಕುಟುಂಬಗಳು ಅಕ್ರಮ ಮದ್ಯ ಮಾರಾಟ ಹಾಳಾಗುತ್ತಿದೆ. ಅಲ್ಲದೇ ಗ್ರಾಮದಲ್ಲಿ ಕುಡುಕರಿಂದ ಕದನಗಳು ನಡೆದು ಪರಸ್ಪರರು ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ನಾಗರೀಕರು ತೀವ್ರ ತೊಂದರೆಗೀಡಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಶಾಲೆ ಕುಡುಕರ ಅಡ್ಡೆ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದರಿಂದ ಅಪ್ರಾಪ್ತ ಮಕ್ಕಳು ಅಕ್ರಮ ಮದ್ಯ ಬಾಟಲಿಗಳನ್ನು ತೆಗೆದುಕೊಂಡು ಹೋಗಿ ಸರ್ಕಾರಿ ಶಾಲೆಯಲ್ಲಿ ಸೇವನೆ ಮಾಡುತ್ತಾರೆ. ಇದರಿಂದ ನಾಗರೀಕ ಸಮಾಜವೇ ತಲೆತಗ್ಗಿಸುವ ವಾತಾವರಣ ಸೃಷ್ಠಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಅಬಕಾರಿ ಅಧಿಕಾರಿಗಳು ವಿಫಲ: ಮಾಚನೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಅಬಕಾರಿ ಇಲಾಖೆಗೆ ಹೇಳಿದರೇ ಇಲಾಖೆ ಅಧಿಕಾರಿಗಳು ತಾಲೂಕು ದೊಡ್ಡದು ಇದೆ. ನಮ್ಮಲ್ಲಿ ಸಿಬ್ಬಂದಿಗಳು ಇಲ್ಲ ಏನು ಮಾಡೋಕೆ ಆಗಲ್ಲ ಎಂದು ಬಹಳ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಅಕ್ರಮ ಮದ್ಯ ಮಾರಾಟ ಕ್ಕೆ ಪರೋಕ್ಷವಾಗಿ ಅಬಕಾರಿ ಇಲಾಖೆ ಬೆಂಬಲ ನೀಡಿದಂತೆ ಇದೇ ಇದರಿಂದ ಅಬಕಾರಿ ಇಲಾಖೆ ಅಧಿಕಾರಿಗಳನ್ನು ತಕ್ಷಣದಿಂದ ಅಮಾನತು ಮಾಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇದ ಮಾಡಬೇಕೆಂದು ಮಹಿಳೆಯರು ಒತ್ತಾಯಿಸಿದರು.
ಈ ವೇಳೆ ಕ್ಯಾತನಗೌಡ ಪೊಲೀಸ್ ಪಾಟೀಲ್, ನಂದಪ್ಪ, ಗುಂಡಪ್ಪ ರಾಮಿ, ರಾಜಾಸಾಬ, ಶರಣಪ್ಪ, ಭಾಷಸಾಬ, ಶಿವಪುತ್ರ, ಬಸವರಾಜ ಹಣತಿ, ರಮೇಶ ಚಲುವಾದಿ, ಸಂತೋಷ ದಾಸರ, ಮಾಳಪ್ಪ ಕರಡಿ, ಮಾಳಿಂಗರಾಯ, ಶಾಂತಮ್ಮ ಅಮರಪ್ಪ, ಮೈಬೂಬಿ ಬಾಷಸಾಬ, ಮೈಮಾನ ನಜರಸಾಬ, ಪದ್ದಮ್ಮನಾರಾಯಣಮ ಮೀನಾಕ್ಷಿ ವೆಂಕಟೇಶ, ಜುಮ್ಮಮ್ಮ ನಂದಪ್ಪ, ಗೌರಮ್ಮ ಬಾಗಯ್ಯ, ಯಲ್ಲಮ್ಮ ಈಶಪ್ಪ, ಮಲ್ಲಮ್ಮ ಅಮರೇಶ, ಮಲ್ಲಮ್ಮ ಯಲ್ಲಪ್ಪ, ರೇಣುಕಮ್ಮ ಮಲ್ಲಪ್ಪ, ಲಕ್ಷ್ಮೀ ದುರುಗಪ್ಪ, ಅಮರಮ್ಮ ಅದಪ್ಪ, ಮುದಕಮ್ಮ ಭೀಮಣ್ಣ ಸೇರಿದಂತೆ ಮಹಿಳೆಯರು ಇದ್ದರು.