ಹುಚ್ಚು ನಾಯಿ ದಾಳಿ: ಬಾಲಕಿಗೆ ತೀವ್ರ ಗಾಯ

| Published : Sep 18 2024, 01:47 AM IST

ಹುಚ್ಚು ನಾಯಿ ದಾಳಿ: ಬಾಲಕಿಗೆ ತೀವ್ರ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸಾಗರ ಗ್ರಾಮದ ರಾಮ ಮತ್ತು ಲೋಕಮ್ಮ ದಂಪತಿ ಪುತ್ರಿ ಜನನಿ (3) ತೀವ್ರವಾಗಿ ಗಾಯಗೊಂಡಿದ್ದು, ಗಂಟಲು. ಗಲ್ಲ ಮತ್ತು ಕುತ್ತಿಗೆ ಮೇಲೆ ತೀವ್ರತರ ಗಾಯಗಳಾಗಿವೆ.

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಮಂಗಳವಾರ ಹುಚ್ಚು ನಾಯಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇನ್ನೂ ಮೂರ್ನಾಲ್ಕು ಜನರ ಮೇಲೂ ದಾಳಿ ನಡೆಸಿದೆ.

ಧರ್ಮಸಾಗರ ಗ್ರಾಮದ ರಾಮ ಮತ್ತು ಲೋಕಮ್ಮ ದಂಪತಿ ಪುತ್ರಿ ಜನನಿ (3) ತೀವ್ರವಾಗಿ ಗಾಯಗೊಂಡಿದ್ದು, ಗಂಟಲು. ಗಲ್ಲ ಮತ್ತು ಕುತ್ತಿಗೆ ಮೇಲೆ ತೀವ್ರತರ ಗಾಯಗಳಾಗಿವೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಗಿದೆ. ಧರ್ಮ ಸಾಗರ ಗ್ರಾಮದಲ್ಲಿ ಈ ಹುಚ್ಚು ನಾಯಿಯಿಂದ ಜನರು ಕೂಡ ಬೇಸತ್ತಿದ್ದಾರೆ. ಈ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿಯೂ ಜಾಸ್ತಿಯಾಗಿದ್ದು, ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹೊಸಪೇಟೆಯಲ್ಲೂ ನಾಯಿ ಹಾವಳಿ

ನಗರದ ಎಂ.ಪಿ. ಪ್ರಕಾಶ್ ನಗರ, ಸಿದ್ದಲಿಂಗಪ್ಪ ಚೌಕಿ ಹಾಗೂ ಚಿತ್ತವಾಡ್ಗಿಯಲ್ಲಿ ಸೋಮವಾರ ಬೀದಿ ನಾಯಿಗಳು ದಾಳಿ ಮಾಡಿದ್ದು, ಮಕ್ಕಳು ಸೇರಿದಂತೆ ಆರೇಳು ಜನರು ಗಾಯಗೊಂಡಿದ್ದಾರೆ

ನಗರದ ಸಿದ್ದಲಿಂಪ್ಪ ಚೌಕಿಯ ಮಂಜುನಾಥ (23), ಚಿತ್ತವಾಡ್ಗಿಯ ಚಂದ್ರಿಕಾ (22), ಬಿಟಿಆರ್ ನಗರದ ಮುಬಾರಕ್ (14), ಎಂ.ಪಿ. ಪ್ರಕಾಶ್ ನಗರದ ಭಾವನ (13), ವಿಹಾನ್ (5), ನಯನ (5) ಎಂಬರ ಮೇಲೆ ಬೀದಿನಾಯಿಗಳು ದಾಳಿ‌ ಮಾಡಿವೆ. ನಗರದಲ್ಲಿ ಒಂದೇ ದಿನಕ್ಕೆ ಮಕ್ಕಳು ಸೇರಿದಂತೆ ಆರೇಳು ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಇನ್ನು ಸಾಕು ಪ್ರಾಣಿಗಳ ಮೇಲೂ ನಾಯಿಗಳು ದಾಳಿ ನಡೆಸಿವೆ. ಹಾಗಾಗಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕ್ರಮ

ಧರ್ಮಸಾಗರ ಗ್ರಾಮ ಸೇರಿದಂತೆ ಹೊಸಪೇಟೆ ನಗರದಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಮಕ್ಕಳ ಮೇಲೆಯೇ ನಾಯಿಗಳು ದಾಳಿ ಮಾಡುತ್ತಿವೆ.

ಸಿ.ಆರ್‌. ಭರತ್‌ಕುಮಾರ, ಯುವ ಮುಖಂಡರು, ಹೊಸಪೇಟೆ.